![supreme-court-agencies](http://kannada.vartamitra.com/wp-content/uploads/2019/11/supreme-court-agencies-508x381.jpg)
ಬೆಂಗಳೂರು: ಆಪರೇಷನ್ ಗೆ ಆಡಿಯೋವೇ ಸಾಕ್ಷಿ ಎಂದು ಸುಪ್ರೀಮ್ ಹೇಳಿದೆ.
ಅಪರೇಷನ್ ಕಮಲದ ಆಡಿಯೊ ವಿಚಾರಣೆ ಸಂಬಂಧ ಸೋಮವಾರ ನಡೆದ ವಿಚಾರಣೆಯಲ್ಲಿ ಆಡಿಯೋ ಟೇಪ್ ನ್ನ ಕಪಿಲ್ ಸಿಬಲ್ ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ನಮಗೆ ಮಹ್ವತದ ದಾಖಲೆ ಸಿಕ್ಕಿದೆ. ಇದನ್ನ ಮಹತ್ವದ ವಿಷಯವಾಗಿ ಪರಿಗಣಿಸಬೇಕೆಂದು ಮನವಿ ಮಾಡಿದರು. ಕಪಿಲ್ ಸಿಬಲ್ ವಾದ ಆಲಿಸಿದ ಸುಪ್ರೀಂ ಕೋರ್ಟ್ ಆಡಿಯೊ ಟೇಪ್ ಪ್ರಕರಣದ ಸಾಕ್ಷಿಯನ್ನಾಗಿ ಪರಿಗಣಿಸುವುದಾಗಿ ಹೇಳಿತು. ಸುಪ್ರೀಂ ಕೋರ್ಟ್ ಆಡಿಯೊ ಟೇಪನ್ನ ಸಾಕ್ಷಿಯಾಗಿ ಪರಿಗಣಿಸಿದ್ದರಿಂದ ಅನರ್ಹ ಶಾಸಕರು ಮತ್ತು ಬಿಜೆಪಿಗೆ ಸಂಕಷ್ಟ ಎದುರಾಗಿದೆ.