ಇಂದು ಕೋಟ್ಲಾ ಅಂಗಳದಲ್ಲಿ ಟೀಮ್ ಇಂಡಿಯಾ ಮತ್ತು ಬಾಂಗ್ಲಾ ನಡುವೆ ಮೊದಲ ಟಿ೨೦ ಪಂದ್ಯ ನಡೆಯಲಿದೆ. ಬಾಂಗ್ಲಾ ವಿರುದ್ಧ ನಡೆಯಲಿರುವ ಟಿ೨೦ ಸರಣಿಗೆ ರೋಹಿತ್ ಪಡೆ ಸಜ್ಜಾಗಿದೆ. ದೆಹಲಿಯ ವಾಯು ಮಾಲಿನ್ಯವನ್ನು ಲೆಕ್ಕಿಸದೇ ಟೀಮ್ ಇಂಡಿಯಾ ಆಟಗಾರರು ತಂಡದ ಪ್ಲೇಯಿಂಗ್ ಇಲೆವೆನ್ನಲ್ಲಿ ಸ್ಥಾನ ಪಡೆಯಲು ಧೂಳನ್ನು ಲೆಕ್ಕಿಸದೇ ಅಭ್ಯಾಸ ಮಾಡಿದ್ದಾರೆ.
ಬಾಂಗ್ಲಾ ಎದುರು ನಡಯಲಿರುವ ಟಿ೨೦ ಫೈಟ್ನಲ್ಲಿ ಕ್ಯಾಪ್ಟನ್ ರೋಹಿತ್ ಯುವ ಆಟಗಾರರಿಗೆ ಹೆಚ್ಚು ಹೆಚ್ಚು ಚಾನ್ಸ್ ನೀಡಲು ಪ್ಲಾನ್ ಮಾಡಿದ್ದಾರೆ. ಹೀಗಾಗಿ ಯುವ ಆಟಗಾರರು ಒಳ್ಳೆಯ ರ‍್ಫಾಮನ್ಸ್ ಕೊಟ್ಟು ಆಯ್ಕೆ ಮಂಡಳಿಯನ್ನ ಇಂಪ್ರೆಸ್ ಮಾಡಲು ತಮ್ಮ ಟ್ಯಾಲೆಂಟ್ ತೋರಿಸಲೇ ಬೇಕಾದ ಅನಿವರ‍್ಯತೆಯನ್ನ ಎದುರಿಸುತ್ತಿದ್ದಾರೆ. ಇದಕ್ಕೂ ಮುನ್ನ ಕೆಲವು ಸ್ಲಾಟ್ನಲ್ಲಿ ಆಡಲು ಪೈಪೋಟಿ ನಡೆಸಲಿದ್ದಾರೆ.
ಮೂರನೇ ಸ್ಲಾಟ್ಗಾಗಿ ರಾಹುಲ್, ಮನೀಶ್ ನಡುವೆ ಫೈಟ್ : ಇಂದಿನಿಂದ ಆರಂಭವಾಗಲಿರುವ ಬಾಂಗ್ಲಾ ವಿರುದ್ಧಧ ಟಿ೨೦ ಸರಣಿಯಲ್ಲಿ ಮೂರನೇ ಸ್ಲಾಟ್ಗಾಗಿ ಕನ್ನಡಿಗರಾದ ಕೆ.ಎಲ್. ರಾಹುಲ್ ಮತ್ತು ಮನೀಷ್ ಪಾಂಡೆ ಫೈಟ್ ನಡೆಸಲಿದ್ದಾರೆ. ಓಪರ‍್ಸ್ಗಳಾಗಿ ರೋಹಿತ್ ರ‍್ಮಾ ಮತ್ತು ಶಿಖರ್ ಧವನ್ ಕಣಕ್ಕಿಳಿಯೋದ್ರಿಂದ ಕೆ.ಎಲ್. ರಾಹುಲ್ ಮೂರನೇ ಸ್ಲಾಟ್ನಲ್ಲಿ ಆಡಬೇಕಾದ ಅನಿವರ‍್ಯತೆಯನ್ನ ಎದುರಿಸುತ್ತಿದ್ದಾರೆ.
ಮತ್ತೊಂದು ಕಡೆ ಮೂರನೇ ಸ್ಲಾಟ್ನಲ್ಲಿ ಆಡುತ್ತಾ ಬಂದಿರುವ ಮನೀಶ್ ಪಾಂಡೆ ತಮ್ಮ ಸ್ಥಾನವನ್ನ ಮರಳಿ ಪಡೆಯಲು ಹೋರಾಡಲಿದ್ದಾರೆ. ಕೆಲವು ತಿಂಗಳ ಹಿಂದೆ ಫ್ಲಾಪ್ ರ‍್ಫಾಮನ್ಸ್ ಕೊಟ್ಟು ಹೊರ ನಡೆದಿದ್ದ ಮನೀಷ್ ಪಾಂಡೆ ನಂತರ ದೇಸಿ ಟರ‍್ನಿಯಲ್ಲಿ ರನ್ ಮಳೆ ಸುರಿಸಿ ಆಯ್ಕೆ ಮಂಡಳಿಯವರ ಗಮನ ಸೆಳೆದಿದ್ರು.
ಇನ್ನು ಕೆ.ಎಲ್. ರಾಹುಲ್ ಮೂರು ಫರ‍್ಮೆಟ್ನಲ್ಲಿ ಭದ್ರ ಸ್ಥಾನ ಕಾಪಾಡಿಕೊಳ್ಳುವಲ್ಲಿ ಎಡವಿದ್ದರು. ಕಳೆದ ತಿಂಗಳು ಕೆರೆಬಿಯನ್ನ ನಾಡಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧಧ ಟಿ೨೦ ಸರಣಿಯಲ್ಲಿ ಕೇವಲ ಒಂದು ಪಂದ್ಯದಲ್ಲಿ ಆಡುವ ಅವಕಾಶ ಸಿಕ್ಕಿತ್ತು. ಈ ಪಂದ್ಯದಲ್ಲಿ ರಾಹುಲ್ ಕೇವಲ ೨೦ ರನ್ ಗಳಿಸಿ ತಂಡದಿಂದಲೇ ಗೇಟ್ ಪಾಸ್ ಪಡೆದಿದ್ರು.
ಇದೀಗ ರಾಹುಲ್ ಮತ್ತು ಮನೀಶ್ ಪಾಂಡೆ ಮೊನ್ನೆ ವಿಜಯ್ ಹಜಾರೆ ಟರ‍್ನಿಯಲ್ಲಿ ರ‍್ನಾಟಕ ತಂಡಕ್ಕೆ ಚಾಂಪಿಯನ್ ಪಟ್ಟ ಕೊಡಿಸಿದ್ರು. ಜೊತೆಗೆ ಈ ಇಬ್ಬರು ಬ್ಯಾಟ್ಸ್ ಮನ್ಗಳು ರ‍್ಜರಿ ಬ್ಯಾಟಿಂಗ್ ಮಾಡಿ ಗಮನ ಸೆಳೆದಿದ್ದಾರೆ.
ಒಟ್ಟಾರೆ ತಂಡಕ್ಕೆ ಕಮ್ ಬ್ಯಾಕ್ ಮಾಡಿರುವ ರಾಹುಲ್ ಮತ್ತು ಮನೀಶ್ ಪಾಂಡೆಗೆ ಇಬ್ಬರಿಗೂ ಅವಕಾಶ ಸಿಗಲಿ ತಂಡದ ಖಾಯಮ್ ಆಟಗಾರರಾಗಲಿ ಅನ್ನೋದೇ ಎಲ್ಲ ಕನ್ನಡಿಗರ ಆಶಯವಾಗಿದೆ.