ವಿರೋಧದ ನಡುವೆಯೂ ಇಂದು ಇಂಡೋ- ಬಾಂಗ್ಲಾ ಫೈಟ್

ಭಾರೀ ವಿರೋಧದ ನಡುವೆಯೂ ಇಂದು ಕೋಟ್ಲಾ ಅಂಗಳದಲ್ಲಿ ಭಾರತ ಮತ್ತು ಬಾಂಗ್ಲಾ ನಡುವಿನ ಮೊದಲ ಟಿ೨೦ ಪಂದ್ಯ ನಡೆಯಲಿದೆ.
ಕಳೆದ ಕೆಲವು ದಿನಗಳಿಂದ ರಾಷ್ಟ್ರರಾಜಧಾನಿ ದೆಹಲಿ ವಾಯು ಮಾಲಿನ್ಯಕ್ಕೆ ತತ್ತರಿಸಿ ಹೋಗಿದೆ. ಅದರಲ್ಲೂ ದೀಪಾವಳಿ ನಂತರವಂತೂ ಮಾಲಿನ್ಯ ಹೆಚ್ಚಾಗಿ AIR INDEX 500ರ ಗಡಿ ದಾಟಿದೆ.
ಧೂಳಿನಿಂದ ಕೆಂಗೆಟ್ಟಿರುವ ದೆಹಲಿಯಲ್ಲಿ ಜನಜೀವನ ಅಸ್ತವ್ಯಸ್ತವಾಗಿದೆ. ಸೆಪ್ಟಂಬರ್ ೫ರವರೆಗೆ ಇಲ್ಲಿನ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಅರವಿಂದ ಕೇಜ್ರಿವಾಲ್ ಮೊನ್ನೆಯಷ್ಟೆ ಚಿಕ್ಕ ಮಕ್ಕಳಿಗೆ ಮಾಸ್ಕ್ ವಿತರಿಸಿದ್ದಾರೆ.
ವಿಶ್ವದ ಮುಂದೆ ರ‍್ಯಾದೆ ಕಳೆದುಕೊಳ್ಳುತ್ತಾ ಬಿಸಿಸಿಐ
ಇಂಥ ಕಠಿಣ ಪರಿಸ್ಥಿತಿಯಲ್ಲೂ ಬಿಸಿಸಿಐ ಭಾರತ – ಬಾಂಗ್ಲಾ ಪಂದ್ಯವನ್ನ ನಡೆಸಲು ಮುಂದಾಗಿರೋದಕ್ಕೆ ಭಾರೀ ವಿರೋಧ ವ್ಯಕ್ತವಾಗಿದೆ. ವಿಶ್ವದ ಶ್ರೀಮಂತ ಕ್ರಿಕೆಟ್ ಮಂಡಳಿ ಎನಿಸಿಕೊಂಡಿರುವ ಬಿಸಿಸಿಐ ಪಂದ್ಯವನ್ನ ಸ್ಥಳಾಂತರ ಮಾಡದೇ ಆಟಗಾರರ ಆರೋಗ್ಯವನ್ನ ಪಣಕ್ಕಿಟ್ಟು ವಿಶ್ವದ ಮುಂದೆ ಮಾನ ಮರ‍್ಯದೆಯನ್ನ ಕಳೆದುಕೊಳ್ಳಲು ಮುಂದಾಗಿದೆ.
ಆರಂಭದಲ್ಲೆ ಎಡವಿದ ಬಿಸಿಸಿಐ ಬಿಗ್ ಬಾಸ್
ಇತ್ತಿಚೆಗಷ್ಟೆ ಬಿಸಿಸಿಐ ಬಿಗ್ ಬಾಸ್ ಆಗಿ ಆಯ್ಕೆಯಾದ ಸೌರವ್ ಗಂಗೂಲಿ ಆರಂಭದಲ್ಲೆ ಎಡವಿದ್ದಾರೆ. ಧೂಳು ಹಿಡಿದರುವ ಕೋಟ್ಲಾ ಮೈದಾನದಲ್ಲಿ ಆಡಲು ಯೋಗ್ಯವಲ್ಲದಿದ್ದರೂ ಪಂದ್ಯವನ್ನ ಸ್ಥಳಾಂತರ ಮಾಡಲು ಆಗದ ಪರಿಸ್ಥಿತಿಯನ್ನ ಎದುರುಸಿತ್ತಿದ್ದಾರೆ. ಹೀಗಾಗಿ ಗಂಗೂಲಿ ತಮ್ಮ ಆಡಳಿತದ ಆರಂಭದಲ್ಲೆ ಎಡವಿದ್ದಾರೆ.
ಬಿಗ್ ಬಾಸ್ ಗಂಗೂಲಿಗೆ ಭರವಸೆ ನೀಡಿದ ಕ್ಯಾಪ್ಟನ್ ರೋಹಿತ್
ಇಂದು ಫಿರೋಜ್ ಶಾ ಕೋಟ್ಲಾ ಅಂಗಳದಲ್ಲಿ ನಡೆಯಬೇಕಿರುವ ಕೋಟ್ಲಾ ಪಂದ್ಯ ಬಿಸಿಸಿಐಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಪಂದ್ಯ ಆಡಿಸಿಯೇ ತರ‍್ತಿವಿ ಎಂದು ಪಣ ತೊಟ್ಟಿರುವ ಬಿಸಿಸಿಐಗೆ ಪಂದ್ಯ ನಡೆಯುವಾಗ ಆಟಗಾರರಿಗೆ ಏನು ಆಗುತ್ತೋ ಅನ್ನೋ ಭಯ ಕಾಡ್ತಿದೆ. ಎರಡು ರ‍್ಷದ ಹಿಂದೆ ಶ್ರೀಲಂಕಾ ತಂಡದ ಆಟಗಾರರು ವಾಂತಿ ಮಾಡಿಕೊಂಡು ಮೈದಾನದಲ್ಲಿ ವಾಂತಿ ಮಾಡಿ ದಡ್ಡ ರಂಪಾಟ ಮಾಡಿದ್ದರು.
ಇನ್ನು ಟೀಮ್ ಇಂಡಿಯಾ ಕ್ಯಾಪ್ಟನ್ ರೋಹಿತ್ ರ‍್ಮಾ ಆಡುವುದಾಗಿ ಬಿಸಿಸಿಐ ಬಿಗ್ ಬಾಸ್ ಗಂಗೂಲಿಗೆ ಭರವಸೆ ಕೊಟ್ಟಿದ್ದಾರೆ. ಅಭ್ಯಾಸದ ವೇಳೆ ನಮಗೆ ಏನು ಆಗಿಲ್ಲ ಹೇಳಿರುವುದಾಗಿ ತಿಳಿದು ಬಂದಿದೆ.
ಗಂಗೂಲಿ- ರೋಹಿತ್ ಮಾತುಕತೆ
ವಾತವರಣದ ಬಗ್ಗೆ ಪರಿಶೀಲಿಸಲು ಬಿಸಿಸಿಐ ಅಧ್ಯಕ್ಷರು ತಂಡವೊಂದನ್ನ ರಚಿಸಿದ್ದಾರೆ. ಬಿಸಿಸಿಐ ಅಧಕ್ಷ ಸೌರವ್ ಗಂಗೂಲಿ ಪರಿಸ್ಥಿತಿಯನ್ನ ನಿಭಾಯಿಸುವ ಬಗ್ಗೆ ಕ್ಯಾಪ್ಟನ್ ರೋಹಿತ್ ರ‍್ಮಾ ಜೊತೆ ಮಾತುಕತೆ ನಡೆಸಿದ್ದಾರೆ. ತಂಡ ಯಾವುದೇ ಸಮಸ್ಯೆ ಇಲ್ಲದೇ ಅಭ್ಯಾಸವನ್ನ ಮುಗಿಸಿದ್ದು ಆಟಗಾರರಿಗೆ ಯಾವುದೇ ಸಮಸ್ಯೆಯಾಗಿಲ್ಲ ಎಂದು ನಾಯಕ ರೋಹಿತ್ ರ‍್ಮಾ ಖಚಿತ ಪಡಿಸಿದ್ದಾರೆ ಅಂತಾ ಬಿಸಿಸಿಐ ಮೂಲಗಳು ಹೇಳಿವೆ.
ದೆಹಲಿ ಧೂಳಿಗೆ ಬಾಂಗ್ಲಾ ವಿಲ ವಿಲ
ಇನ್ನು ಟೀಮ್ ಇಂಡಿಯಾ ವಿರುದ್ಧ ಟಿ೨೦ ಫರ‍್ಮೆಟ್ನಲ್ಲಿ ಗೆಲ್ಲಲ್ಲೇಬೇಕೆಂದು ಬಂದಿರುವ ಬಾಂಗ್ಲಾ ತಂಡ ದೆಹಲಿ ಧೂಳೀಗೆ ವಿಲ ವಿಲ ಅಂತಾ ಒದ್ದಾಡಿದೆ. ಮೊನ್ನೆ ಅಭ್ಯಾಸ ಮಾಡುವ ವೇಳೆ ಬಂಗ್ಲಾ ಆಟಗಾರರು ಮಾಸ್ಕ್ ಧರಿಸಿ ಅಭ್ಯಾಸ ಮಾಡಿದ್ದರು. ಅಭ್ಯಾಸ ಮಾಡುವ ವೇಳೆ ಬಾಂಗ್ಲಾ ಆಟಗಾರರು ಸುಸ್ತು ಆಗಿ ವಿಶ್ರಾಂತಿ ಪಡೆದಿದ್ದಾರೆ.
ಒಟ್ಟಿನಲ್ಲಿ ಭಾರೀ ಕೂತೂಹಲ ಕೆರೆಳಿಸಿರುವ ಕೋಟ್ಲಾ ಪಂದ್ಯದತ್ತ ಈಗ ಎಲ್ಲ ಕ್ರಿಕೆಟ್ ಅಭಿಮಾನಿಗಳ ಚಿತ್ತ ನೆಟ್ಟಿದ್ದು ಪಂದ್ಯಕ್ಕಿಂತ ಆಟಗಾರರ ಆರೋಗ್ಯದ ಬಗ್ಗೆಯೇ ರ‍್ಚೆಯ ವಿಷಯವಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ