ಹೊಸದಿಲ್ಲಿ:ಇಂಡೋ – ಬಾಂಗ್ಲಾ ಸರಣಿ ಇಂದಿನಿಂದ ಆರಂಭವಾಗಲಿದೆ. ಕೋಟ್ಲಾ ಅಂಗಳದಲ್ಲಿ ಆತಿಥೇಯ ಟೀಮ್ ಇಂಡಿಯಾ ಮತ್ತು ಬಾಂಗ್ಲಾದೇಶ ತಂಡಗಳು ಮುಖಾಮುಖಿಯಾಗುತ್ತಿವೆ. ವಾಯು ಮಾಲಿನ್ಯದಿಂದ ತತ್ತರಿಸಿರುವ ರಾಷ್ಟ್ರ ರಾಜಧಾನಿ ದೆಹಲಿ ಅಕ್ಷರಶಃ ಧೂಳಿನಿಂದ ತತ್ತರಿಸಿ ಹೋಗಿದೆ. ಇದರ ನಡುವೆ ಕೂಡ ಬಿಸಿಸಿಐ ಬಿಸಿಸಿಐ ಬಿಗ್ ಬಾಸ್ಗಳು ಪಂದ್ಯ ನಡೆಯಲೇಬೇಕೆಂದು ಪಣ ತೊಟ್ಟಿದ್ದಾರೆ. ಬನ್ನಿ ಹಾಗಾದ್ರೆ ಇಂಡೋ- ಬಾಂಗ್ಲಾ ನಡುವಿನ ಮೊದಲ ಪಂದ್ಯದ ಕಂಪ್ಲೀಟ್ ಡಿಟೇಲ್ಸ್ನ್ನ ತೋರಿಸ್ತೀವಿ ನೋಡಿ.
ಕಿಂಗ್ ಕೊಹ್ಲಿ ಅನುಪಸ್ಥಿತಿಯಲ್ಲಿ ರೋಹಿತ್ಗೆ ಸವಾಲು
ಟೀಮ್ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ಬಾಂಗ್ಲಾ ಸರಣಿಯಿಂದ ವಿಶ್ರಾಂತಿ ತೆಗೆದುಕೊಂಡಿದ್ದಾರೆ. ಈ ಹಿನ್ನಲೆಯಲ್ಲಿ ಹಿಟ್ಮ್ಯಾನ್ ರೋಹಿತ್ ರ್ಮಾಗೆ ನಾಯಕತ್ವದ ಜವಾಬ್ದಾರಿ ವಹಿಸಿಸಲಾಗಿದೆ. ಇನ್ನು ಮೊನ್ನೆ ನೆಟ್ ಪ್ರಾಕ್ಟಿಸ್ ವೇಳೆ ಪೆಟ್ಟು ತಿಂದಿದ್ದ ರೋಹಿತ್ ಮೈದಾನದಿಂದ ಹೊರ ನಡೆದಿದ್ರು.. ಈ ಹಿನ್ನಲೆಯಲ್ಲಿ ಮೊದಲ ಪಂದ್ಯಕ್ಕೆ ಅಲಭ್ಯರಾಗ್ತಾರ ಅನ್ನೋ ಆತಂಕ ಮನೆ ಮಾಡಿತ್ತು.. ಆದ್ರೆ, ಈ ಬಗ್ಗೆ ಪ್ರತಿಕ್ರಿಯಿಸಿರುವ ಬಿಸಿಸಿಐ ರೋಹಿತ್ ರ್ಮಾ ಫಿಟ್ ಆಗಿದ್ದಾರೆ ಅಂತ ಸ್ಪಷ್ಟಪಡಿಸಿದೆ.
ಯುವ ಆಟಗಾರರಿಗೆ ಮಣೆ ಹಾಕಲಿದ್ದಾರೆ ಹಿಟ್ಮ್ಯಾನ್
ಇನ್ನು ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ತಂಡವನ್ನ ಮುನ್ನಡೆಸುತ್ತಿರುವ ರೋಹಿತ್ ರ್ಮಾಗೆ ಸವಾಲಿನ ಸರಣಿ ಆಗಿದೆ. ಆರಂಭಿಕರಾಗಿ ಶಿಖರ್ ಧವನ್ ಹಾಗೂ ರೋಹಿತ್ ರ್ಮಾ ಕಣಕ್ಕಿಳಿದ್ರೆ. ವಿರಾಟ್ ಅನುಪಸ್ಥಿತಿಯಲ್ಲಿ ೩ನೇ ಕ್ರಮಾಂಕದಲ್ಲಿ ಕನ್ನಡಿಗರಾದ ಕೆ.ಎಲ್.ರಾಹುಲ್ ಅಥವಾ ಮನೀಶ್ ಇಬ್ಬರಲ್ಲಿ ಒಬ್ಬರನ್ನ ಕಣಕ್ಕಿಳಿಸುವ ಸಾಧ್ಯತೆ ಇದೆ. ಮಿಡ್ಲ್ ರ್ಡರ್ನಲ್ಲಿ ರಿಷಭ್ ಪಂತ್, ಶ್ರೇಯಸ್ ಅಯ್ಯರ್, ಸಂಜು ಸ್ಯಾಮ್ಸನ್ ಹಾಗೂ ರ್ಜರಿ ಫರ್ಮ್ನಲ್ಲಿರೋ ಮನೀಶ್ ಪಾಂಡೆ ರೇಸ್ನಲ್ಲಿದ್ದಾರೆ.. ಆದ್ರೆ, ಈ ನಾಲ್ವರಲ್ಲಿ ಯಾರಿಗೆ ಸ್ಥಾನ ಸಿಗುತ್ತಾ ಅನ್ನೋದು ಕುತೂಹಲ ಮೂಡಿಸಿದೆ. ವಾಷಿಂಗ್ಟನ್ ಸುಂದರ್, ಕೃನಾಲ್ ಪಾಂಡ್ಯ, ಶಿವಂ ದುಬೆ ತಂಡದಲ್ಲಿದ್ದು, ಪಾರ್ಪಣೆ ಮಾಡೋ ಉತ್ಸುಕದಲ್ಲಿದ್ದಾರೆ.
ಇನ್ನು ತಂಡದಲ್ಲಿ ಸ್ಥಾನ ಪಡೆದಿರುವ ಸ್ವಿಂಗ್ ಬೌಲರ್ ದೀಪಕ್ ಚಹರ್, ಸ್ಪೀಡ್ಸ್ಟಾರ್ ಖಲೀಲ್ ಅಹ್ಮದ್, ಶರ್ದೂಲ್ ಠಾಕೂರ್ ಕಮಾಲ್ ಮಾಡೋಕೆ ಸಜ್ಜಾಗಿದ್ರೆ. ಇತ್ತ ವಿಶ್ವಕಪ್ ಬಳಿಕ ತಂಡಕ್ಕೆ ವಾಪಸ್ ಆಗಿರೋ ಯಜುವೇಂದ್ರ ಚಹಲ್ ಸ್ಪಿನ್ ಜಾದೂ ಮಾಡೋಕೆ ರೆಡಿಯಾಗಿದ್ದಾರೆ. ಮತ್ತೊಬ್ಬ ಸ್ಪಿನ್ನರ್ ರಾಹುಲ್ ಚಹರ್ ಕೂಡ ತಂಡದಲ್ಲಿ ಸ್ಥಾನ ಪಡೆದಿದ್ದು ಯಾರಿಗೆ ಅವಕಾಶ ನೀಡ್ತಾರೆ ಅನ್ನೋದು ಕುತೂಹಲ ಮೂಡಿಸಿದೆ.
ಟಿ೨೦ಯಲ್ಲಿ ಇಂಡೋ-ಬಾಂಗ್ಲಾ
ಇದುವರೆಗೆ ಟೀಮ್ ಇಂಡಿಯಾ ಹಾಗೂ ಬಾಂಗ್ಲಾ ತಂಡಗಳು ೮ ಟಿ೨೦ ಪಂದ್ಯಗಳನ್ನಾಡಿದ್ದು. ೮ ಪಂದ್ಯಗಳಲ್ಲಿ ಟೀಮ್ ಇಂಡಿಯಾನೇ ಗೆದ್ದು ಬೀಗಿದೆ.
ದೆಹಲಿಯಲ್ಲಿ ವಿಪರೀತ ವಾಯು ಮಾಲಿನ್ಯ ಇರುವುದರಿಂದ ಇಂದು ನಡೆಯುವ ಟಿ೨೦ ಪಂದ್ಯದಲ್ಲಿ ಉಭಯ ತಂಡಗಳ ಆಟಗಾರರು ಮಾಸ್ಕ್ ಧರಿಸಿ ಆಡಲಿದ್ದಾರೆ. ದೆಹಲಿಯಲ್ಲಿ ವಿಪರೀತ ವಾಯುಮಾಲಿನ್ಯ ಇರುವುದರಿಂದ ಆಟಗಾರರ ಮೇಲೆ ಯಾವ ಪರಿಣಾಮ ಬೀಳಿದೆ ಎಂಬ ಆತಂಕ ಶುರುವಾಗಿದೆ.
ಟೀಮ್ ಇಂಡಿಯಾವನ್ನ ಮಣಿಸುವ ಕನಸಿನಲ್ಲಿ ಬಾಂಗ್ಲಾ..!
ಇನ್ನು ಟೀಮ್ ಇಂಡಿಯಾ ವಿರುದ್ಧ ಇದುವರೆಗೂ ಒಂದೇ ಒಂದು ಪಂದ್ಯ ಗೆಲ್ಲದೇ ನಿರಾಸೆ ಅನುಭವಿಸಿರುವ ಬಾಂಗ್ಲಾ ತಂಡಕ್ಕೆ ಮೊದಲ ಗೆಲುವಿನ ಕನಸು ಕಾಣುತ್ತಿದೆ. ಆಡಿದ ೮ ಪಂದ್ಯಗಳ ಪೈಕಿ ಬಾಂಗ್ಲಾ ಕೂದಲೆಳೆಯ ಅಂತರದಲ್ಲಿ ಸೋತು ಕೈಚೆಲ್ಲಿಕೊಂಡಿದೆ. ಇನ್ನು ಶಕೀಬ್ ಅಲ್ ಹಸನ್ ಅನುಪಸ್ಥಿತಿಯಲ್ಲಿ ಮಹಮದುಲ್ಲಾ ತಂಡದ ನಾಯಕತ್ವ ನೀಡಲಾಗಿದೆ. ಇನ್ನು ತಂಡದಲ್ಲಿ ಲಿಟನ್ ದಾಸ್, ಸೌಮ್ಯ ರ್ಕಾರ್, ಮುಷ್ಫಿಕುರ್ ರಹೀಂ, ಮುಸಾದೆಕ್ ಹುಸೇನ್ ಬಾಂಗ್ಲಾದ ಬ್ಯಾಟಿಂಗ್ ಶಕ್ತಿಯಾಗಿದ್ದಾರೆ. ಇನ್ನು ಮುಸ್ತಫಿಜುರ್ ರೆಹಮಾನ್ ಅನುಭವಿ ಬೌಲರ್ ಆಗಿದ್ದು, ಶಫಿಯುಲ್ ಇಸ್ಲಾಂ, ಮೊಹಮ್ಮದ್ ಮಿಥುನ್, ತೈಜುಲ್ ಇಸ್ಲಾಂ ಅರಾಫತ್ ಸನ್ನಿ ಬೌರ್ಗಳಾಗಿದ್ದಾರೆ. ಇನ್ನು ಯುವ ಆಟಗಾರರೇ ಹೊಂದಿರುವ ಬಾಂಗ್ಲಾ ಟೀಮ್ ಇಂಡಿಯಾ ವಿರುದ್ಧ ಗೆಲ್ಲುವ ವಿಶ್ವಾಸದಲ್ಲಿದೆ.
ಒಟ್ನಲ್ಲಿ ಇಂಡೋ ಬಾಂಗ್ಲಾ ನಡುವಿನ ಚುಟುಕು ಕದನ ಸಾಕಷ್ಟು ಕೂತೂಹಲ ಹುಟ್ಟಿಸಿದ್ದು ಹುಲಿಗಳ ಕಾದಾಟ ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.