
ಬೆಂಗಳೂರು,ಅ.28- ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ನನ್ನ ಮೇಲೆ ವಿಶೇಷ ಕಾಳಜಿ ಹಾಗೂ ಪ್ರೀತಿ ಇದೆ. ನನ್ನ ಬಗ್ಗೆ ಅವರು, ಪ್ರೀತಿಯಿಂದ ಮಾತನಾಡಿರಬಹುದು.ಅಪಾರ್ಥ ಕಲ್ಪಿಸುವ ಅಗತ್ಯವಿಲ್ಲ ಎಂದು ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಹೇಳಿದರು.
ಬೆಂಗಳೂರಿಗೆ ಬಂದಾಗ ಅಭಿಮಾನಿಗಳು ಸ್ವಾಗತಿಸುವ ಸಂದರ್ಭದಲ್ಲಿ ಡಿ.ಕೆ.ಶಿವಕುಮಾರ್ ಅವರು ಜೆಡಿಎಸ್ ಬಾವುಟ ಹಿಡಿದ ಬಗ್ಗೆ ಸಿದ್ದರಾಮಯ್ಯ ಬೇಸರ ವ್ಯಕ್ತಪಡಿಸಿದ ಸಂಬಂಧ ಪ್ರತಿಕ್ರಿಯೆ ನೀಡಿದ ಡಿಕೆಶಿ ನನ್ನ ಅಭಿಮಾನಿಗಳು ಪP್ಷÁತೀತವಾಗಿ ಸ್ವಾಗತ ಮಾಡಿದ್ದಾರೆ.ಜೆಡಿಎಸ್ ಕಾರ್ಯಕರ್ತರು, ಕನ್ನಡ ಸಂಘಟನೆ ನಾಯಕರು ಬಂದಿದ್ದರು. ಯಾರನ್ನೂ ಬರಬೇಡಿ ಎಂದು ಹೇಳಲು ಸಾಧ್ಯವಿಲ್ಲ. ಕಾಂಗ್ರೆಸ್ ಕಚೇರಿ ನನಗೆ ದೇವಸ್ಥಾನವಿದ್ದಂತೆ.ಅದಕ್ಕೆ ಮೊದಲು ಪಕ್ಷದ ಕಚೇರಿಗೆ ಭೇಟಿ ನೀಡಿದ್ದೆ.ಇಂದು ಸಹ ಜೆಡಿಎಸ್ ಕಾರ್ಯಕರ್ತರು ನನ್ನ ಮನೆಗೆ ಬಂದು ಭೇಟಿ ಮಾಡಿದ್ದಾರೆ.ಅವರನ್ನು ಬರಬೇಡಿ ಎಂದು ಹೇಳಲು ಸಾಧ್ಯವೆ?ನನ್ನನ್ನು ಯಾರು ಬೇಕಾದರೂ ಭೇಟಿ ಮಾಡಲಿ.ನಾನು ಅದಕ್ಕೆ ಆಕ್ಷೇಪ ಮಾಡುವುದಿಲ್ಲ. ನಾನು ಮೂಲತಃ ಕಾಂಗ್ರಸ್ಸಿಗ ಎಂದು ಹೇಳಿದರು.
ನನ್ನ ವಕೀಲರನ್ನು ಭೇಟಿ ಮಾಡಬೇಕಾಗಿದೆ.ಇದಾದ ಬಳಿಕ ಮುಂದಿನ ಕಾರ್ಯಕ್ರಮದ ಕುರಿತು ಮಾಹಿತಿ ನೀಡುತ್ತೇನೆ ಎಂದು ಶಿವಕುಮಾರ್ ಹೇಳಿದರು.