ಕ್ಯಾಂಟರ್ಗೆ ಡಿಕ್ಕಿ ಹೊಡೆದ ಕಾರು-ದುರಂತದಲ್ಲಿ ಇಬ್ಬರ ಸಾವು

ಬೆಂಗಳೂರು, ಅ.28- ರಸ್ತೆ ಬದಿ ಕ್ಯಾಂಟರ್ ರಿಪೇರಿ ಮಾಡುತ್ತಿದುದ್ದು ಗಮನಕ್ಕೆ ಬಾರದೆ ಅತಿವೇಗದಿಂದ ಬಂದ ಕಾರು ಕ್ಯಾಂಟರ್‍ಗೆ ಡಿಕ್ಕಿ ಹೊಡೆದು ನಿಯಂತ್ರಣ ಕಳೆದುಕೊಂಡು ಮತ್ತೊಂದು ಕಾರಿಗೆ ಅಪ್ಪಳಿಸಿದ ಪರಿಣಾಮ ಪ್ರಯಾಣಿಕರೊಬ್ಬರು  ಮೃತಪಟ್ಟಿರುವ ಘಟನೆ ಪೀಣ್ಯ ಸಂಚಾರಿ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ತುಮಕೂರು ಮೂಲದ ರಾಜಶೇಖರಯ್ಯ (68) ಮೃತಪಟ್ಟವರಾಗಿದ್ದು, ಕ್ಯಾಂಟರ್ ಕ್ಲೀನರ್ ಬಾಲರಾಜು (33) ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ನಿನ್ನೆ ಬೆಳಗ್ಗೆ 10.40ರ ಸುಮಾರಿನಲ್ಲಿ ತುಮಕೂರು ಕಡೆಯಿಂದ ಬೆಂಗಳೂರಿನ ನಾಗರಭಾವಿಯ ಸಂಬಂಧಿಕರ ಮನೆಗೆ ರಾಜಶೇಖರಯ್ಯ ಸ್ವಿಪ್ಟ್ ಡಿಸೈರ್ ಕಾರಿನಲ್ಲಿ ಬರುತ್ತಿದ್ದಾಗ ಕಾರು ಚಾಲನೆಯನ್ನು ಸಂಬಂಧಿಕ ಮಾಡುತ್ತಿದ್ದರು.

ರಾಷ್ಟ್ರೀಯ ಹೆದ್ದಾರಿ 4ರ ಪೀಣ್ಯ ಫ್ಲೈಓವರ್ 8ನೇ ಮೈಲಿ ದಾಸರಹಳ್ಳಿ ಬಳಿ ಬರುತ್ತಿದ್ದಂತೆ ರಸ್ತೆಯ ಎಡ ಬದಿ ಕೆಟ್ಟುನಿಂತಿದ್ದ ಕ್ಯಾಂಟರ್ ರಿಪೇರಿ ಮಾಡುತ್ತಿರುವುದು ಚಾಲಕನ ಗಮನಕ್ಕೆ ಬಾರದೆ ಕ್ಯಾಂಟರ್‍ಗೆ ಡಿಕ್ಕಿ ಹೊಡೆದಿದೆ.

ಪರಿಣಾಮವಾಗಿ ನಿಯಂತ್ರಣ ಕಳೆದುಕೊಂಡ ಕಾರು ಹಿಮ್ಮುಖವಾಗಿ ತಿರುಗಿ ಅದೇ ರಸ್ತೆಯಲ್ಲಿ ಬಂದ ಮತ್ತೊಂದು ಕಾರಿಗೆ ಅಪ್ಪಳಿಸಿದೆ.ಈ ಘಟನೆಯಿಂದ ಕಾರಿನಲ್ಲಿ ಪ್ರಯಾಣಿಸುತ್ತಿದ್ದ   ರಾಜಶೇಖರಯ್ಯ ಗಂಭೀರ ಗಾಯಗೊಂಡಿದ್ದು, ಅವರನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಿತ್ತಾದರೂ ಚಿಕಿತ್ಸೆ ಫಲಿಸದೆ ಸಂಜೆ 4.30ರಲ್ಲಿ ಮೃತಪಟ್ಟಿದ್ದಾರೆ.ಕಾರು ಚಾಲಕ ಸಣ್ಣಪುಟ್ಟ ಗಾಯಗೊಂಡು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಕ್ಯಾಂಟರ್ ರಿಪೇರಿವೇಳೆ ಸೂಚನಾ ಫಲಕ ಹಾಕದೆ ನಿರ್ಲಕ್ಷ್ಯ ತನದಿಂದ ರಸ್ತೆ ಬದಿ ನಿಲ್ಲಿಸಿದ್ದರಿಂದ ಹಾಗೂ ಅತಿ ವೇಗ ಕಾರು ಚಾಲನೆ ಮಾಡಿದ್ದರಿಂದ ಈ ಅಪಘಾತ ಸಂಭವಿಸಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೆÇಲೀಸರು ತನಿಖೆ ಕೈಗೊಂಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ