ಮುಂಬೈ: ಮುಂಬರುವ ಬಾಂಗ್ಲಾ ವಿರುದ್ಧದ ಟಿ20 ಸರಣಿಯಲ್ಲಿ ನಾಯಕ ವಿರಾಟ್್ ಕೊಹ್ಲಿಗೆ ವಿಶ್ರಾಂತಿ ಕೊಡಲಾಗಿದ್ದು ಹಿಟ್ ಮ್ಯಾನ್ ರೋಹಿತ್ ಶರ್ಮಾ ತಂಡವನ್ನ ಮುನ್ನಡೆಸಲಿದ್ದಾರೆ.
ನ.3ರಿಂದ ಬಾಂಗ್ಲಾ ವಿರುದ್ಧ ನಡೆಯಲಿರುವ ಮೂರು ಪಂದ್ಯಗಳ ಟಿ20ಸರಣಿಯಲ್ಲಿ ಆಯ್ಕೆ ಮಂಡಳಿ 15 ಆಟಗಾರರನ್ನೊಳಗೊಂಡ ತಂಡವ್ನನ ಬಿಸಿಸಿಐ ಪ್ರಕಟಿಸಿದೆ. ಟಿ20 ಸರಣಿಯಲ್ಲಿ ಸಂಜು ಸ್ಯಾಮ್ಸನ್ ತಂಡಕ್ಕೆ ಎಂಟ್ರಿಕೊಟ್ಟಿದ್ದಾರೆ. ಸಂಜು ಸಾಮ್ಸನ್ ಇತ್ತಿಚೆಗಷ್ಟೆ ವಿಜಯ್ ಹಜಾರೆ ಟೂರ್ನಿಯಲ್ಲಿ ದ್ವಿ ಶತಕ ಸಿಡಿಸಿ ಹೊಸ ದಾಖಲೆ ಬರೆದಿದ್ದರು. ಇವರೊಂದಿಗೆ ಮತ್ತೊಬ್ಬ ಯುವ ಆಲ್ರೌಂಡರ್ ಶಿವಮ್ ದುಬೆ ಸ್ಥಾನ ಪಡೆದಿದ್ದದ್ದಾರೆ.
ಟೀಮ್ ಇಂಡಿಯಾ ತಂಡ
ರೋಹಿತ್ ಶರ್ಮಾ, ಶಿಖರ್ ಧವನ್, ಕೆ.ಎಲ್. ರಾಹುಲ್, ಸಂಜು ಸಾಮ್ಸನ್ , ಶ್ರೇಯಸ್ ಅಯ್ಯರ್, ಮನೀಶ್ ಪಾಂಡೆ, ರಿಷಬ್ ಪಂತ್ (ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್, ಕೃನಾಲ್ ಪಾಂಡ್ಯ, ಯಜ್ವಿಂದರ್ ಚಹಲ್ ,ರಾಹುಲ್ ಚಹರ್, ದೀಪಕ್ ಚಹರ್ , ಖಲೀಲ್ ಅಹ್ಮದ್ , ಶಿವಮ್ ದುಬೆ, ಶಾರ್ದೂಲ್ ಠಾಕೂರ್.