ಟೀಮ್ ತವರಿನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್ ಸರಣಿ ಗೆಲ್ಲುವ ಸಂಭ್ರಮದಲ್ಲಿದೆ. ತವರಿನಲ್ಲಿ ಹರಿಣಗಳ ವಿರುದ್ಧ ಐತಿಹಾಸಿಕ ಟೆಸ್ಟ್ ಸರಣಿ ಗೆಲ್ಲುವ ಸಂಭ್ರಮದಲ್ಲಿರುವಾಗಲೇ ಟೀಮ್ ಇಂಡಿಯಾಗೆ ಕಹಿ ಸುದ್ದಿ ಒಂದು ಸಿಕ್ಕಿದೆ.
ಹೌದು ಮುಂಬರುವ ಟೀಮ್ ಇಂಡಿಯಾ ಮತ್ತು ಬಾಂಗ್ಲಾ ಸರಣಿ ನಡೆಯೋದು ಅನುಮಾನದಿಂದ ಕೂಡಿದೆ. ಯಾಕಂದ್ರೆ ಬಾಂಗ್ಲಾ ಆಟಗಾರರು ತಮ್ಮ ಮಂಡಳಿ ಬಾಂಗ್ಲಾ ಕ್ರಿಕೆಟ್ ಬೋರ್ಡ್ ವಿರುದ್ಧ ದಂಗೆ ಎದ್ದಿದ್ದಾರೆ. ತಮ್ಮ ಬೇಡಿಕೆಗಲನ್ನ ಈಡೇರಿಸುವವವರೆಗೂ ನಾವು ಬ್ಯಾಟ್ ಬಾಲ್ ಹಿಡಿಯೋದಿಲ್ಲ ಅಂತಾ ಹಟ ಹಿಡಿದು ಕೂತಿದ್ದಾರೆ.
ತಂಡದ ಅನುಭವಿ ಆಟಗಾರ ಶಖೀಬ್ – ಅಲ್ -ಹಸನ್ ನೇತೃತ್ವದಲ್ಲಿ ಬಾಂಗ್ಲಾ ಆಟಗಾರರು ಮಂಡಳಿಗೆ ಸರಿಯಾಗಿ ಬುದ್ದಿ ಕಲಿಸಲು ನಿರ್ಧರಿಸಿದ್ದಾರೆ. ಶಕೀಬ್ಗೆ ತಂಡದ ಹಿರಿಯ ಆಟಗಾರರಾದ ಮೊಹ್ಮದುಲ್ಲಾ ಮತ್ತು ಮುಷಿಫಿಕುರ್ ರಹೀಮ್ ಸಾಥ್ ಕೊಟ್ಟಿದ್ದಾರೆ.
ಮಂಡಳಿ ವಿರುದ್ಧ ಘರ್ಜಸಿದ ಬಾಂಗ್ಲಾ ಹುಲಿಗಳು
ಮಂಡಳಿ ವಿರುದ್ಧ ತೊಡೆತಟ್ಟಿರುವ ಬಾಂಗ್ಲಾ ಆಟಗಾರರು ನಿನ್ನೆ ಪತ್ರಿಕಾಗೋಷ್ಠಿ ಕರೆದು ಮಾಧ್ಯಮ ಮೂಲಕ ಮಂಡಳಿಗೆ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ. ಬಾಂಗ್ಲಾ ಕ್ರಿಕೆಟಿಗರು ಅನುಭವಿಸುತ್ತಿರುವ ಯಾತನೆಯನ್ನ ತಂಡದ ಆಲ್ರೌಂಡರ್ ಶಖೀಬ್ ಅಲ್ ಹಸನ್ ಮಾತನಾಡಿದ್ದಾರೆ.
ಈದೇಶದಲ್ಲಿ ಕ್ರಿಕೆಟಿಗರನ್ನ ದಮನ ಮಾಡ್ತಾರೆ ಅಂತಾ ನನಗೆ ಯಾವಗಲೂ ಅನಿಸುತ್ತೆ ಎಂದು ಅನುಭವಿ ಆಟಗಾರ ಶಖೀಬ್ ಅಲ್ ಹಸನ್ ಹೇಳಿದ್ದಾರೆ. ಇದು ಸರಿಯಲ್ಲ ಎಲ್ಲರಿಗೂ ಸಮನವಾದ ಅವಕಾಶ ಸಿಗಬೇಕು. ಒಬ್ಬ ಆಟಗಾರ ಅರ್ಹನಾಗಿದ್ರೆ ಅವನಿಗೆ ಸಂಪಾದನೆ ಮಾಡಲು ಅವಕಾಶ ಕೊಡಬೇಕು. ಆಟಗಾರನಿಗೆ ವೇತನ ಕೊಡಲು ಆಗದಿದ್ದರೆ ಬಿಟ್ಟು ಬಿಡಿ. ಅದು ಬಿಟ್ಟು ಆಟಗಾರನಿಗೆ ಬೆಲೆ ಕಟ್ಟಬೇಡಿ ಎಂದಿದ್ದಾರೆ.
ದಂಗೆ ಎದ್ದಿರುವ ಬಾಂಗ್ಲಾಆಟಗಾರರು ಹನ್ನೊಂದು ಬೇಡಿಕೆಗಳನ್ನ ಇಟ್ಟಿದ್ದಾರೆ. ಇದರಲ್ಲಿ ಪ್ರಮುಖ ಬೇಡಿಕೆ ಢಾಕಾ ಪ್ರೀಮಿಯರ್ ಲೀಗ್ ವೇತನ, ತಂಡಕ್ಕೆ ಲೆಗ್ ಸ್ಪಿನ್ನರ್. ಹೆಚ್ಚು ಹಣ ನೀಡುವ ಹೆಚ್ಚು ಆಟಗಾರರನ್ನ ಸೇರಿಸಬೇಕು, ತಂಡಕ್ಕೆ ಲೆಗ್ ಸ್ಪಿನ್ನರ್ ಬೇಕು, ಸರಿಯಾದ ಟ್ರೇನಿಗ್ ಸೆಂಟರ್ ಬೇಕೆಂಬ ಬೇಡಿಕೆಗಳು ಪ್ರಮುಖವಾಗಿದೆ.
ಟೀಮ್ ಇಂಡಿಯಾ, ಬಾಂಗ್ಲಾ ಸರಣಿ ನಡೆಯೋದು ಡೌಟ್
ಬಾಂಗ್ಲಾ ಆಟಗಾರರು ಹೀಗೆ ದಂಗೆ ಎದ್ದಿರೋದ್ರಿಂದ ಮುಂದಿನ ತಿಂಗಳು ನ.3ರಿಂದ ಆರಂಭವಾಗಬೇಕಿರುವ ಟೀಮ್ ಇಂಡಿಯಾದ ಸರಣಿ ನಡೆಯೋದು ಅನುಮಾನದಿಂದ ಕೂಡಿದೆ. ಭಾರತ ಪ್ರವಾಸದಲ್ಲಿ ಬಾಂಗ್ಲಾ ದೇಶ ತಂಡ ಟೀಮ್ ಇಂಡಿಯಾ ವಿರುದ್ಧ ಮೂರು ಟಿ20 ಸರಣಿ ಮತ್ತು 2 ಟೆಸ್ಟ್ ಕೈಗೊಳ್ಳಲಿದೆ. ಈಗ ಸರಣಿಗೆ ಕಾರ್ಮೋಡ ಆವರಿಸಿರೋದ್ರಿಂದ ಮುಂದೆ ಬಾಂಗ್ಲಾ ಕ್ರಿಕೆಟ್ ನಲ್ಲಿ ನಡೆಯುವ ಬೆಳವಣಿಗೆ ಮೇಲೆ ಭಾರತ – ಬಾಂಗ್ಲಾ ಸರಣಿ ನಿಂತಿದೆ.
ಆಟಗಾರರು ದಂಗೆ ಎದ್ದಿಲ್ಲ ಬಾಂಗ್ಲಾ ಕ್ರಿಕೆಟ್ ಬೋರ್ಡ್
ಆಟಗಾರರು ಕ್ರಿಕೆಟ್ ಆಡಲ್ಲ ಎಂದಿರುವಾಗಲೇ ಇತ್ತ ಬಾಂಗ್ಲಾ ಕ್ರಿಕೆಟ್ ಬೋರ್ಡ್ ತೇಪೆ ಹಚ್ಚಲು ಮುಂದಾಗಿದೆ. ನಮಗೆ ಇದು ದಂಗೆ ಎದ್ದಿದ್ದಾರೆ ಎಂದು ಅನಿಸುತ್ತಿಲ್ಲ. ನಮ್ಮ ಬಳಿ ಆಟಗಾರರು ಮಾತನಾಡಬೇಕು ಅಷ್ಟೆ. ನಮಗೆ ಈಗಷ್ಟೆ ಈ ವಿಷಯ ಗೊತ್ತಾಗಿದೆ. ನಾವು ಸಭೆ ಕರೆದು ಸಾಧ್ಯವಾದಷ್ಟು ಬೇಗ ಸಮಸ್ಯೆಯನ್ನ ಬಗೆ ಹರಿಸುತ್ತೇವೆ ಎಂದು ಬಾಂಗ್ಲಾ ಕ್ರಿಕೆಟ್ ಮಂಡಳಿ ಹೇಳಿದೆ.
ಬಿಸಿಸಿಐಗೆ ತಲೆ ನೋವಾದ ಬಾಂಗ್ಲಾ ಆಟಗಾರರ ದಂಗೆ
ತಮ್ಮ ಬೇಡಿಕೆ ಈಡೇರುವವರೆಗೂ ಕ್ರಿಕೆಟ್ ಆಡಲ್ಲ ಪಟ್ಟು ಹಿಡಿರುವ ಬಾಂಗ್ಲಾ ಆಟಗಾರರು ಮುಂಬರುವ ಟೀಮ್ ಇಂಡಿಯಾ ಸರಣಿಯನ್ನು ಆಡದಿರಲು ನಿರ್ಧರಿಸಿದ್ದಾರೆ. ಇದು ಬಿಸಿಸಿಐಗೆ ನುಂಗಲಾಗದ ಬಿಸಿ ತುಪ್ಪವಾಗಿದೆ. ತವರಿನಲ್ಲಿ ಆಡುವ ಪ್ರತಿ ಸರಣಿಯಲ್ಲೂ ಕೋಟಿ ಕೋಟಿ ಹಣ ಸಂಪಾದಿಸುವ ಬಿಸಿಸಿಐಗೆ ಒಂದು ಸರಣಿ ರದ್ದಾದ್ರು ದೊಡ್ಡ ನಷ್ಟವನ್ನ ಅನುಭವಿಸುತ್ತದೆ. ಹೀಗಾಗಿ ಬಾಂಗ್ಲಾ ತಂಡ ಸರಣಿ ಆಡಲು ಬರದಿದ್ರೆ ಬಿಸಿಸಿಐ ಇನ್ನಿಲ್ಲದ ನಷ್ಟ ಅನುಭವಿಸಲಿದೆ. ಬಿಸಿಸಿಐ ಈ ಕುರಿತು ಮಾತನಾಡಿದೆ.
ನಾವು ಕಾದು ನೋಡುವ ತಂತ್ರ ಅನುಸರಿಸುತ್ತೇವೆ. ಇದು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯ ಆಂತರಿಕ ವಿಚಾರವಾಗಿದೆ. ಅವರಿಂದಲೇ ಸ್ಪಷ್ಟನೆ ಬರುವವರೆಗೂ ನಾವು ಪ್ರಿತಿಕ್ರಿಯೆ ನೀಡುವುದಿಲ್ಲ ಎಂದು ಬಿಸಿಸಿಐ ಹೇಳಿದೆ.