ಹರಿಣಗಳ ವಿರುದ್ಧ ಭಾರತಕ್ಕೆ ಐತಿಹಾಸಿಕ ಸರಣಿ ಜಯ

ರಾಂಚಿ: ಹರಿಣಗಳ ವಿರುದ್ಧ ಟೀಮ್ ಇಂಡಿಯಾ 3-0 ಅಂತರದಿಂದÀ ಸರಣಿಯನ್ನ ಕ್ಲೀನ್ ಸ್ವೀಪ್ ಮಾಡಿ ಐತಿಹಾಸಿಕ ಗೆಲುವು ಪಡೆದಿದೆ.

ಇದರೊಂದಿಗೆ ಭಾರತ ತವರಿನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಆಡಿದ ಎಲ್ಲ ಟೆಸ್ಟ್ ಸರಣಿಗಳನ್ನ ಕ್ಲೀನ್ ಸ್ವೀಪ್ ಸಾಧನೆ ಮಾಡಿದೆ.
ಬುಧವಾರ ನಡೆದ ನಾಲ್ಕನೆ ದಿನದಾಟದ ಪಂದ್ಯದಲ್ಲಿ ಟೀಮ್ ಇಂಡಿಯಾಕ್ಕೆ ಗೆಲ್ಲಲು 2 ವಿಕೆಟ್‍ಗಳ ಅವಶ್ಯಕತೆ ಇತ್ತು. ಇದತಂತೆ ಕೊನೆಯ ಸ್ಪಿನ್ನರ್ ನಸೀಮ್ ಪಡೆಯುವ ಟೀಂ ಇಂಡಿಯಾ 202 ರನ್‍ಗಳ ಭರ್ಜರಿ ಗೆಲುವು ದಾಖಲಿಸಿತು. ದಕ್ಷಿಣ ಆಫ್ರಿಕಾ 133 ರನ್‍ಗಳಿಗೆ ಸರ್ವ ಪತನ ಕಂಡಿತು.ಈ ಗೆಲುವಿನೊಂದಿಗೆ ಟೀಮ್ ಇಂಡಿಯಾ ಟೆಸ್ಟ್ ಚಾಂಪಿಯನ್‍ಶಿಪ್‍ನಲ್ಲಿ 40 ಪೂರ್ಣ ಅಂಕಗಳೊಂದಿಗೆ ಅಗ್ರ ಸ್ಥಾನದಲ್ಲಿ ಮುಂದುವರೆದಿದೆ.

ಸ್ಕೋರ್ ಬೋರ್ಡ್

ಟೀಮ್ ಇಂಡಿಯಾ ಮೊದಲ ಇನ್ನಿಂಗ್ಸ್ 497/9 ಡಿಕ್ಲೇರ್
ದ.ಆಫ್ರಿಕಾ ಮೊದಲ ಇನ್ನಿಂಗ್ಸ್ 162
ಎರಡನೇ ಇನ್ನಿಂಗ್ಸ್ 133

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ