![cm kahttari 2](http://kannada.vartamitra.com/wp-content/uploads/2019/10/cm-kahttari-2-535x381.png)
ಹರಿಯಾಣ, ಅ.21– ಸರಳತೆಗೆ ಹೆಸರಾಗಿರುವ ಹರಿಯಾಣ ಸಿಎಂ ಖತ್ತಾರ್ ಅವರು ಇಂದು ಕೂಡ ತಮ್ಮ ಮತದಾನ ಮಾಡುವ ಮೂಲಕ ಎಲ್ಲರಿಗೂ ಸ್ಫೂರ್ತಿಯಾಗಿದ್ದಾರೆ.
ಚಂದೀಘಡ್ನಿಂದ ಕಾರ್ನಲ್ ರೈಲ್ವೆ ನಿಲ್ದಾಣದವರೆಗೂ ಜನ್ ಶತಾಬ್ದಿ ರೈಲಿನಲ್ಲಿ ಪ್ರಯಾಣಿಸಿದ ಮನೋಹರ್ ಲಾಲ್ ಖತ್ತಾರ್ ಸರಳತೆಯನ್ನು ಮೆರೆದಿದ್ದಾರೆ.
ಕಾರ್ನಲ್ ರೈಲ್ವೆ ನಿಲ್ದಾಣದಿಂದ ಮತಕ್ಷೇತ್ರಕ್ಕೆ ಹೋಗಲು ಕಾರನ್ನು ಬಳಸದೆ ಪರಿಸರ ಸ್ನೇಹಿಯಾದ ಸೈಕಲ್ ಏರುವ ಮೂಲಕ ಹರಿಯಾಣ ಸಿಎಂ ನೆರೆದಿದ್ದವರೆಲ್ಲಾ ಚಕಿತಗೊಳಿಸಿದರು.
ಈ ಹಿಂದೆ ನಡೆದ ಚುನಾವಣೆಗಳಲ್ಲೂ ಕೂಡ ಖತ್ತಾರ್ ಅವರು ರೈಲಿನಲ್ಲಿ ಪ್ರಯಾಣಿಸಿಯೇ ಮತದಾನ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.