ಕಾಂಗ್ರೆಸ್ ಕಟ್ಟಿದ ಭಾರತದಲ್ಲೇ ಮೋದಿ ಪ್ರಧಾನಿಯಾಗಿದ್ದಾರೆ-ಕೆಪಿಸಿಸಿ ಅಧ್ಯಕ್ಷ ದಿನೇಶ್‍ಗುಂಡೂರಾವ್

ಬೆಂಗಳೂರು, ಅ.21-ಕಾಂಗ್ರೆಸ್ ಪ್ರಜಾಪ್ರಭುತ್ವವನ್ನು ಕಾಪಾಡದೆ ಇದ್ದಿದ್ದರೆ ಈ ದೇಶದಲ್ಲಿ  ನರೇಂದ್ರ ಮೋದಿಯವರು ಪ್ರಧಾನಿಯಾಗಲು ಸಾಧ್ಯವಾಗುತ್ತಿರಲಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್‍ಗುಂಡೂರಾವ್ ಹೇಳಿದರು.

ನಗರದ ಗಾಂಧಿಭವನದಲ್ಲಿ ರಾಷ್ಟ್ರಪಿತ ಮಹಾತ್ಮಗಾಂಧೀಜಿಯವರ  150ನೇ  ಜನ್ಮದಿನಾಚರಣೆ ನೆನಪಿನೊಂದಿಗೆ ಅವರ ಆದರ್ಶ ಪಾಲಿಸುವ  ನಿಷ್ಠಾವಂತ ಕಾಂಗ್ರೆಸ್ ಕಾರ್ಯಕರ್ತರನ್ನು ಸನ್ಮಾನಿಸುವ ಪ್ರೇರಣಾ ಸಮಾವೇಶದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಅಲ್ಲದೆ, ಹಿಂದೂ ಮಹಾಸಭಾವೇ ಸ್ವಾತಂತ್ರ್ಯನಂತರ ಅಧಿಕಾರಕ್ಕೆ ಬಂದಿದ್ದರೆ ಪ್ರಜಾಪ್ರಭುತ್ವ ಉಳಿಯುತ್ತಿರಲಿಲ್ಲ.  ಸರ್ವಾಧಿಕಾರಿ ಧೋರಣೆಯನ್ನು ಪಾಲಿಸುವ ಆರ್‍ಎಸ್‍ಎಸ್ ಮತ್ತು ಹಿಂದೂ ಮಹಾಸಭಾದ ನಾಯಕರು ದೇಶವನ್ನು ಬೇರೆಯ ಹಾದಿಗೆ ಕೊಂಡೊಯ್ಯುತ್ತಿದ್ದರು.ಅಖಂಡತೆ, ಸೌಹಾರ್ದತೆ ನಾಶವಾಗುತ್ತಿತ್ತು.ಮೋದಿಯಂಥವರು ಪ್ರಧಾನಿಯಾಗಲು ಸಾಧ್ಯವಾಗುತ್ತಿರಲಿಲ್ಲ ಎಂದರು.

ಈಗಿನ ಯುವಜನರಲ್ಲಿ ಮಹಾತ್ಮಗಾಂಧೀಜಿ ಮತ್ತು ಜವಾಹರ್‍ಲಾಲ್ ನೆಹರೂ ಬಗ್ಗೆ ನಕಾರಾತ್ಮಕ ಅಭಿಪ್ರಾಯಗಳಿವೆ. ಅವರಿಬ್ಬರೂ ಇಲ್ಲದೆ ಇದ್ದರೆ ಶ್ರೀಲಂಕಾ, ಪಾಕಿಸ್ತಾನ ಭಾರತದಲ್ಲೇ ಇರುತ್ತಿದ್ದವು.ವಿಶಾಲ ಭಾರತ ನಮ್ಮದಾಗಿರುತ್ತಿತ್ತು ಎಂದು ಹಗುರವಾಗಿ ಮಾತನಾಡುತ್ತಾರೆ.ನಾನಾ ದೇಶಗಳನ್ನು ಒಗ್ಗೂಡಿಸಿ ಆ ಸಂದರ್ಭದಲ್ಲಿ ಭಾರತ ರಚನೆಯಾಗಿದೆ.ಈಗ ಮಾತನಾಡುವುದು ಸುಲಭ. ಕಟ್ಟುವ ಹಂತದಲ್ಲಿ  ಎಲ್ಲವೂ ಕಷ್ಟ.. ಆದರೂ ಕಾಂಗ್ರೆಸ್ ವಿರುದ್ಧವೇ ಮಾತನಾಡುತ್ತಾರೆ ಎಂದು ಟೀಕಿಸಿದರು.

ಗಾಂಧೀಜಿಯವರ ಹೋರಾಟದ ನೈತಿಕ ಶಕ್ತಿ ನಮಗೆ ಪ್ರೇರಣೆಯಾಗಬೇಕು.ಇತ್ತೀಚಿನ ದಿನಗಳಲ್ಲಿ ಸಾವರ್ಕರ್‍ಗೆ ಭಾರತರತ್ನ ನೀಡುವ ಚರ್ಚೆಯಾಗುತ್ತಿದೆ. ಗಾಂಧಿ ಕೊಂದ ಗೋಡ್ಸೆಗೂ ಭಾರತರತ್ನ ಕೊಡಬಹುದು ಎಂಬ ಅರ್ಥದಲ್ಲಿ  ಸಚಿವರೊಬ್ಬರು ಮಾತನಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮಾಜಿ ಸಚಿವ ಎಚ್.ಕೆ.ಪಾಟೀಲ್ ಮಾತನಾಡಿ, ಕಾಂಗ್ರೆಸ್  ಆತ್ಮಾವಲೋಕನ ಮಾಡಿಕೊಳ್ಳುವ ಕಾಲವಿದು. ಶ್ರೀಮಂತಿಕೆಯನ್ನು ತೊರೆದು  ಸರಳವಾಗಿ ಜೀವಿಸಿದ ಗಾಂಧೀಜಿಯವರ ತತ್ವಗಳನ್ನು ಅನುಸರಿಸಬೇಕು.ಮದ್ಯದ ವ್ಯಾಪಾರಿಗಳಿಗೆ  ಮಣೆ ಹಾಕುವ ಸಂಪ್ರದಾಯವನ್ನು ಬಿಡಬೇಕು ಎಂದು ಹೇಳಿದರು.

ಮಾಜಿ ಸಚಿವ ರಾಮಲಿಂಗಾರೆಡ್ಡಿ ಮಾತನಾಡಿ, ಕಾಂಗ್ರೆಸ್ ದೇಶಕ್ಕಾಗಿ ಮಾಡಿದ ಸೇವೆಯನ್ನು ದುರುದ್ದೇಶ ಪೂರ್ವಕವಾಗಿ ಮರೆಮಾಚುವ ವಿಕೃತ ನೀತಿಯನ್ನು ಬಿಜೆಪಿ ಅನುಸರಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ದೇಶದಲ್ಲಿ ಎಲ್ಲಾ ಕಡೆ ನಿರುದ್ಯೋಗ ತಾಂಡವವಾಡುತ್ತಿದೆ.ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಮೋದಿ ಹೇಳಿದ್ದರು.ಆದರೆ ವರ್ಷಕ್ಕೆ 2 ಕೋಟಿ ಉದ್ಯೋಗ ನಷ್ಟವಾಗುತ್ತಿದೆ.ಇನ್ನು ಮೂರ್ನಾಲ್ಕು ವರ್ಷದಲ್ಲಿ ಇನ್ನಷ್ಟು ಕೋಟಿ ಉದ್ಯೋಗಗಳು ನಷ್ಟವಾಗುತ್ತವೆ. ದು ಬಿಜೆಪಿ ಆಡಳಿತ ಎಂದು ಲೇಔಡಿ ಮಾಡಿದರು.

ಮಾಜಿ ಶಾಸಕ ನಂಜಯ್ಯ ಮಠ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ವಿ.ಶೇಖರ್, ಕೃಷ್ಣಪ್ಪ, ರಾಜ್‍ಕುಮಾರ್, ಮತ್ತಿತರರು ವೇದಿಕೆಯಲ್ಲಿದ್ದರು.

ಮುಖಂಡರಾದÀ ಮನೋಹರ್ ಅವರು ಪ್ರಾಸ್ತಾವಿಕ ಮಾತನಾಡಿದರು.

 

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ