ಸಚಿನ್ ದಾಖಲೆ ಮುರಿದ ಶೂರ ಉಮೇಶ್ ಯಾದವ್

ವಿದರ್ಭ ಎಕ್ಸ್ ಪ್ರೆಸ್ ಉಮೇಶ್ ಯಾದವ್ ಸೂಪರ್ ಸ್ಪೆಲ್ ಮಾಡಿ ಎದುರಾಳಿ ಬ್ಯಾಟ್ಸ್ಮನ್ಗಳನ್ನ ಕಂಗಾಲಾಗುವಂತೆ ಮಾಡುವುದನ್ನ ನೋಡಿರ್ತಿರಾ. ಆದ್ರೆ ನಿನ್ನೆ ರಾಂಚಿ ಅಂಗಳದಲ್ಲಿ ಉಮೇಶ್ ಯಾದವ್ ರೌದ್ರವತರಾ ತಾಳಿ ಡುಪ್ಲೆಸಿಸ್ ಪಡೆಯನ್ನ ಕಂಗಾಲ್ ಆಗುವಂತೆ ಮಾಡಿದ್ರು.
ಎರಡನೇ ದಿನದಾಟದ ಪಂದ್ಯದಲ್ಲಿ ಟೀಂ ಇಂಡಿಯಾ ಬ್ಯಾಟ್ಸ್ಮನ್ಗಳು ದಿನವೀಡಿ ಭರ್ಜರಿ ಬ್ಯಾಟಿಂಗ್ ಮಾಡಿದ್ರು. ಅದರಲ್ಲೂ 9ನೇ ಕ್ರಮಾಂಕದಲ್ಲೂ ಬಂದ ಉಮೇಶ್ ಯಾದವ್ ಸೌತ್ ಆಫ್ರಿಕಾ ಸ್ಪಿನ್ನರ್ ಜಾರ್ಜ್ ಲಿಂಡೆ ಅವರನ್ನ ಟಾರ್ಗೆಟ್ ಮಾಡಿದ್ರು. ಜಾರ್ಜ್ ಲಿಂಡೆ ಓವರ್ನ ಐದನೆ ಎಸೆತವನ್ನ ಟoಟಿg ಆನ್ನತ್ತ ಸಿಕ್ಸರ್ಗೆ ಅಟ್ಟಿದ್ರು.
ಇದಾರ ನಂತರ ಕೊನೆಯ ಎಸೆತವನ್ನ DEEP MID ವಿಕೆಟ್ನತ್ತ ಮತ್ತೊಂದು ಸಿಕ್ಸರ್ ಸಿಡಿಸಿದ್ರು.
ಪೀಡ್ ಓವರ್ ನಂತರ ಮತ್ತೆ ದಾಳಿಗಿಳಿದ ಲಿಂಡೆ ಅವರ ಮೊದಲ ಎಸೆತವನ್ನ ಮಿಡ್ ವಿಕೆಟ್ನತ್ತ ಉಮೇಶ್ ಸಿಕ್ಸರ್ಗೆ ಅಟ್ಟಿದ್ರು. ನಂತರ ಮೂರನೇ ಎಸೆತವನ್ನ LONG OFFನತ್ತ ಸಿಕ್ಸರ್ ಹೊಡೆದ್ರು. ಐದನೇ ಎಸೆತವನ್ನ sight screenನತ್ತ ಹೊಡೆದ್ರು. ಹೀಗೆ ಉಮೇಶ್ ಉಮೇಶ್ ಯಾದವ್ ಹರಿಣಗಳ ವಿರುದ್ಧ ಅಬ್ಬರಿಸಿದ್ರು. ಉಮೇಶ್ ಯಾದವ್ ಅಬ್ಬರವನ್ನ ನೋಡ್ತಿದ್ದ ಕ್ಯಾಪ್ಟನ್ ಚಪ್ಪಾಳೆ ಹೊಡೆದು ಸಖತ್ ಎಂಜಾಯ್ ಮಾಡಿದ್ರು.
ಕೇವಲ 10 ಎಸೆತಗಳನ್ನ ಎದುರಿಸಿದ ಉಮೇಶ್ ಯಾದವ್ 31 ರನ್ ಸಿಡಿಸಿದ್ರು. 5 ಸಿಕ್ಸರ್ ಸಿಡಿಸಿದ ಉಮೇಶ್ ಬರೋಬ್ಬರಿ 310 ಸ್ಟ್ರೈಕ್ ರೇಟ್ ಪಡೆದ್ರು.
ಸ್ಟೀಫನ್ ಫ್ಲೆಮಿಂಗ್ ದಾಖಲೆ ಮುರಿದ ಉಮೇಶ್ ಯಾದವ್
ಕೇವಲ 10 ಎಸೆತಗಳಲ್ಲಿ 31 ರನ್ ಕಲೆ ಹಾಕುವ ಮೂಲಕ ಉಮೇಶ್ ಯಾದವ್ ವಿಶ್ವ ದಾಖಲೆ ಬರೆದಿದ್ದಾರೆ. ಟೆಸ್ಟ್ ಇತಿಹಾಸದಲ್ಲೆ ವೇಗವಾಗಿ 30 ಪ್ಲಸ್ ರನ್ ಸ್ಕೋರ್ ಕಲೆ ಹಾಕಿದ ಮೊದಲ ಬ್ಯಾಟ್ಸ್ಮನ್ ಎಂಬ ಗೌರವಕ್ಕೆ ಪಾತ್ರರಾದ್ರು.
2004ರಲ್ಲಿ ನ್ಯೂಜಿಲೆಂಡ್ ತಂಡದ ಮಾಜಿ ಕ್ಯಾಪ್ಟನ್ ಸ್ಟೀಫನ್ ಪ್ಲೇಮಿಂಗ್ ಇದೇ ಸೌತ್ ಆಫ್ರಿಕಾ ವಿರುದ್ಧ 11 ಎಸೆತದಲ್ಲಿ 31 ರನ್ ಕಲೆ ಹಾಕಿದ್ರು. ಇದಕ್ಕೂ ಮುನ್ನ ವೆಸ್ಟ್ ಇಂಡೀಸ್ ತಂಡದ ಮಾಜಿ ಆಟಗಾರ ನೆಮ್ ಮೆಕ್ ಲೀನ್ 12 ಎಸೆತದಲ್ಲಿ 31 ರನ್ ಕಲೆ ಹಾಕಿದ್ದದಾರೆ. ಇದರ ಜೊತೆಗೆ ಉಮೇಶ್ ಯಾದವ್ 310 ಸ್ಟ್ರೈಕ್ ರೇಟ್ ಪಡೆದು ಹೊಸ ದಾಖಲೆ ಬರೆದಿದ್ದಾರೆ.
ಒಟ್ಟಾರೆ ಇಷ್ಟು ದಿನ ಬೌಲಿಂಗ್ ಮೂಲಕ ಇಓಖಿಇಖಖಿಂIಓ ಮಾಡುತ್ತಿದ್ದ ಉಮೇಶ್ ಯಾದವ್ ಈಗ ಬ್ಯಾಟಿಂಗ್ ಮೂಲಕವೂ ಹೊಡಿ ಬಡಿ ಆಟಬವಾಡಿ ಎಲ್ಲರ ಗಮನ ಸೆಳೆದಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ