ಭಾರತ -ಪಾಕ್ ಉಭಯ ಸರಣಿ: ಪ್ರಧಾನಿ ಮೋದಿ, ಇಮ್ರಾನ್‍ಗೆ ಬಿಟ್ಟ ವಿಚಾರ: ಗಂಗೂಲಿ

ಕೋಲ್ಕತ್ತಾ, ಅ.17: ಭಾರತ ಹಾಗೂ ಪಾಕಿಸ್ತಾನ ನಡುವಿನ ಕ್ರಿಕೆಟ್ ಸರಣಿ ವಿಷಯ ಎರಡು ದೇಶಗಳ ಪ್ರಧಾನಿಗಳಾದ ನರೇಂದ್ರ ಮೋದಿ ಹಾಗೂ ಇರ್ಮಾನ್‍ಖಾನ್‍ಗೆ ಬಿಟ್ಟ ವಿಷಯ ಎಂದು ಬಿಸಿಸಿಐ ನೂತನ ಅಧ್ಯಕ್ಷ ಸೌರವ್‍ಗಂಗೂಲಿ ತಿಳಿಸಿದರು.
ಭಾರತ ಹಾಗೂ ಪಾಕ್‍ನ ನಡುವಿನ ಸರಣಿಯ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸೌರವ್ ಗಂಗೂಲಿ, ಇದು ಎರಡು ದೇಶಗಳ ಆಂತರಿಕ ವಿಷಯವಾಗಿದ್ದು ಆಟಗಾರರ ಭದ್ರತೆಯ ದೃಷ್ಟಿಯಿಂದ ಈ ವಿಷಯದ ಬಗ್ಗೆ ಎರಡು ದೇಶಗಳ ಪ್ರಧಾನಿಗಳ ಹಿತಾಸಕ್ತಿಗೆ ಬಿಟ್ಟ ವಿಚಾರ ಎಂದು ದಾದಾ ಹೇಳಿದ್ದಾರೆ.
2012ರಲ್ಲಿ ಪಾಕಿಸ್ತಾನದಲ್ಲಿ ಹಮ್ಮಿಕೊಂಡಿದ್ದ ಎರಡು ಟ್ವೆಂಟಿ ಹಾಗೂ 3 ಏಕದಿನ ಸರಣಿಯ ನಂತರ ಎರಡು ತಂಡಗಳ ನಡುವಿನ ಕ್ರಿಕೆಟ್ ಸರಣಿಯ ನಂತರ ಎರಡು ತಂಡಗಳ ನಡುವೆ ಪೂರ್ಣ ಪ್ರಮಾಣದ ಸರಣಿಗಳಾಗಿಲ್ಲ ಎಂದು ಸೌರವ್ ತಿಳಿಸಿದ್ದಾರೆ.
ಪುಲ್ಲಾಮ ದಾಳಿಯ ನಂತರ ವಿಶ್ವಕಪ್‍ನಲ್ಲೂ ಭಾರತ ತಂಡವು ಪಾಕ್ ವಿರುದ್ಧ ಆಡಬಾರದೆಂಬ ಕೂಗು ಹೆಚ್ಚಾಗಿ ಕೇಳಿಬಂದಿತ್ತು.
2017ರಲ್ಲಿ ಐಪಿಎಲ್ ಫಿಕಿಂಗ್ಸ್ ನಂತರ ಬಿಸಿಸಿಐನ ಎಲ್ಲಾ ಸದಸ್ಯರನ್ನು ವಜಾ ಮಾಡಲಾಗಿದ್ದು ಈಗ ಹೊಸದಾಗಿ ಚುನಾವಣೆಗಳು ನಡೆಯಲಿದೆ.
ಈಗಾಗಲೇ ಬಿಸಿಸಿಐನ ನೂತನ ಅಧ್ಯಕ್ಷರಾಗಿರುವ ಸೌರವ್‍ಗಂಗೂಲಿ ಅಕ್ಟೋಬರ್ 23 ರಂದು ಅಧಿಕಾರ ವಹಿಸಿಕೊಳ್ಳಲಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ