ಭೀಕರ ಬಸ್ ಅಪಘಾತ- ಕನಿಷ್ಠ 36 ಮಂದಿ ವಿದೇಶಿಗರ ಸಾವು

ರಿಯಾದ್, ಅ.17- ಸೌದಿ ಅರೇಬಿಯಾದಲ್ಲಿ ಭೀಕರ ಬಸ್ ಅಪಘಾತ ಸಂಭವಿಸಿದ್ದು, ಈ ದುರಂತದಲ್ಲಿ ಕನಿಷ್ಠ 36 ಮಂದಿ ವಿದೇಶಿಗರು ಸಾವನ್ನಪ್ಪಿ ಅನೇಕರು ಗಾಯಗೊಂಡಿದ್ದಾರೆ.
ಪಶ್ಚಿಮ ಸೌದಿ ಅರೇಬಿಯಾದಲ್ಲಿ ಇಂದು ಬೆಳಗ್ಗೆ ಸಂಭವಿಸಿದ ಬಸ್ ಅಪಘಾತದಲ್ಲಿ ಕನಿಷ್ಠ 36 ಜನರು ಮೃತಪಟ್ಟಿದ್ದು ನಾಲ್ವರು ಗಾಯಗೊಂಡಿದ್ದಾರೆ. ಮುಸ್ಲಿಮರ ಪವಿತ್ರ ನಗರ ಮೆಕ್ಕಾ-ಮದೀನಾದಲ್ಲಿ ಈ ದುರಂತ ಸಂಭವಿಸಿದ್ದು, ಖಾಸಗಿ ಬಸ್ ಅಪಘಾತಕ್ಕೀಡಾಗಿದೆ. ಬಸ್‍ನಲ್ಲಿ ಅರಬ್ ಸೇರಿದಂತೆ ಏಷ್ಯಾದ ಹಲವು ಯಾತ್ರಾರ್ಥಿಗಳು ಇದ್ದರು.
ಹೈಟೆಕ್ ಬಸ್ ಭಾರೀ ವಾಹನಕ್ಕೆ (ಎಲಿವೆಟರ್‍ಲೋಡರ್) ಅಪ್ಪಳಿಸಿ ಈ ದುರ್ಘಟನೆ ಸಂಭವಿಸಿತು.
ಗಾಯಾಳುಗಳನ್ನು ಇಲ್ಲಿನ ಅಲ್ ಹಮ್ಮಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸ್ಥಳೀಯ ಭದ್ರತಾ ಸಿಬ್ಬಂದಿ ತನಿಖೆ ನಡೆಸಿದ್ದಾರೆ.
ಇತ್ತೀಚೆಗೆ ಸೌದಿ ಅರೇಬಿಯಾದಲ್ಲಿ ಬಸ್ ಮತ್ತು ತೈಲ ಟ್ಯಾಂಕರ್ ನಡುವೆ ಡಿಕ್ಕಿಯಾಗಿ ನಾಲ್ವರು ಬ್ರಿಟಿಷ್ ಪ್ರವಾಸಿಗರು ಮೃತಪಟ್ಟು ಇತರ 12 ತೀವ್ರ ಗಾಯಗೊಂಡಿದ್ದರು.
ಸೌದಿ ಅರೇಬಿಯಾದಲ್ಲಿ ಭೀಕರ ರಸ್ತೆ ಅಪಘಾತಗಳು ಸಂಭವಿಸುತ್ತಿದ್ದು, ಹೈಟೆಕ್ ಬಸ್ ಸೇತುವೆಗೆ ಅಪ್ಪಳಿಸಿ ಭಾರತೀಯರು ಸೇರಿದಂತೆ ವಿವಿಧ ದೇಶದ ಪ್ರಯಾಣಿಕರು ಇತ್ತೀಚೆಗೆ ಮೃತಪಟ್ಟ ಘಟನೆಯನ್ನು ಸಹ ಇಲ್ಲಿ ಉಲ್ಲೇಖಿಸಬಹುದು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ