ಬಯಲಲ್ಲಿ ಹೆರಿಗೆ ಪ್ರಕರಣ: ತನಿಖೆಗೆ ಆದೇಶಿಸಿದ ಆರೋಗ್ಯ ಸಚಿವ ಶ್ರೀರಾಮುಲು

ಚಿತ್ರದುರ್ಗ: ವಿಜಯಪುರ ಜಿಲ್ಲೆ ಬಳಗನೂರು ಆರೋಗ್ಯ ಕೇಂದ್ರದ ಬಳಿ ಬಯಲಲ್ಲೇ ಹೆರಿಗೆಯಾದ ಪ್ರಕರಣ ಕುರಿತು ತನಿಖೆ ನಡೆಸಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಆರೋಗ್ಯ ಸಚಿವ ಶ್ರೀರಾಮುಲು ಹೇಳಿದರು.

ಚಿತ್ರದುರ್ಗದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಆಸ್ಪತ್ರೆ ಸಿಬ್ಬಂದಿಯ ಶಿಫ್ಟ್ ಬದಲಾವಣೆ ವೇಳೆ ಘಟನೆ ನಡೆದಿದೆ ಎಂದರು.

ಆಸ್ಪತ್ರೆಯಲ್ಲಿ ನಿರ್ಲಕ್ಷ್ಯ ವಹಿಸಿದವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.

ಆಸ್ಪತ್ರೆ ವಾಸ್ತವ್ಯ ಕುರಿತ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ, ವಾಸ್ತವ್ಯದ ಮೂಲಕ ಇಲಾಖೆಯ ಸುಧಾರಣೆಗೆ ಯತ್ನಿಸಲಾಗುತ್ತಿದೆ. ಒಂದೇ ದಿನಕ್ಕೆ ಎಲ್ಲವೂ ಸರಿಯಾಗುತ್ತದೆ ಎಂದು ಹೇಳಲು ಆಗುವುದಿಲ್ಲ.  ಆರೋಗ್ಯ ಸಚಿವರ ವಾಸ್ತವ್ಯದಿಂದ ಆರೋಗ್ಯ ಇಲಾಖೆ ಸುಧಾರಣೆ ಆಗಲಿ ಎನ್ನುವುದು ನಮ್ಮ ಉದ್ದೇಶ ಎಂದರು.

ಪ್ರಧಾನಿ ನರೇಂದ್ರ ಮೋದಿ ಅವರಿಗೆ ಗಂಡಾಂತರ ಇದೆ ಎಂದು ಬ್ರಹ್ಮಾಂಡ ಗುರೂಜಿ ಭವಿಷ್ಯ ಹೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿ, ಪ್ರಧಾನಿ ಮೋದಿಗೆ ಕೆಲವರ ಕೆಂಗಣ್ಣು ಇದ್ದೇ ಇದೆ. ಸೂಕ್ತ‌ ರಕ್ಷಣಾ ವ್ಯವಸ್ಥೆ ಇದೆ ಹಾಗಾಗಿ ಅವರಿಗೆ ಏನೂ ಆಗುವುದಿಲ್ಲ ಎಂದರು.  ಮಾಜಿ ಸಚಿವ ಡಿಕೆಶಿ ಹತ್ತು ವರ್ಷದಲ್ಲಿ ಸಿಎಂ ಆಗುವ ಭವಿಷ್ಯದ ಬಗ್ಗೆ ಮಾತನಾಡಿ, ದೇವರ ಇಚ್ಛೆ ಒಳ್ಳೆಯದಾಗಲಿ ಎಂದರು.

ನೆರೆ ಪರಿಹಾರ ನೀಡುವಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗಿದೆ. ವ್ಯತ್ಯಾಸಗಳಾಗಿದ್ದರೆ ನನ್ನೊಂದಿಗೆ ಬಂದು ಚರ್ಚಿಸಲಿ. ಕಾಂಗ್ರೆಸ್ ಕಾರ್ಯಕರ್ತರು ಚರ್ಚೆ ಬದಲು ಮುತ್ತಿಗೆ ಹಾಕಿ ಕೂಗಿದ್ದಾರೆ ಎಂದು ಶ್ರೀರಾಮುಲು ಹೇಳಿದರು.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ