ವಿಜಯನಗರ ಪ್ರತ್ಯೇಕ ಜಿಲ್ಲೆಗೆ ಸ್ವಪಕ್ಷೀಯರಿಂದಲೇ ವಿರೋಧ; ಅಖಂಡ ಬಳ್ಳಾರಿ ಮಂತ್ರ ಜಪಿಸಿದ ಶ್ರೀರಾಮುಲು

ಬಳ್ಳಾರಿ: ಬಳ್ಳಾರಿಯಿಂದ ವಿಜಯನಗರ ಪ್ರತ್ಯೇಕಗೊಂಡು ರಾಜ್ಯದ 31ನೇ ಜಿಲ್ಲೆಯಾಗಿ ವಿಜಯನಗರ ರೂಪುಗೊಳ್ಳಲಿದೆ. ರೀತಿಯ ಪ್ರಸ್ತಾಪವೊಂದು ಸರ್ಕಾರ ಮುಂದಿದ್ದು, ಇದಕ್ಕೆ ಸ್ವಪಕ್ಷೀಯರಿಂದಲೇ ವಿರೋಧವ್ಯಕ್ತವಾಗಿದೆ

ವಿಜಯನಗರವನ್ನು ಪ್ರತ್ಯೇಕ ಜಿಲ್ಲೆ ಮಾಡುವುದರ ಕುರಿತು ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿದೆ. ಇನ್ನು ಈ ನಿರ್ಣಯಕ್ಕೆ ಬಳ್ಳಾರಿಯ ನಾಯಕರಾದ  ಸಚಿವ ರಾಮುಲು, ಶಾಸಕ ಸೋಮಶೇಖರ ರೆಡ್ಡಿ, ಕಾಂಗ್ರೆಸ್​ ಶಾಸಕ ಭೀಮಾನಾಯ್ಕ್​ ವಿರೋಧ ವ್ಯಕ್ತಪಡಿಸಿದ್ದಾರೆ. ವಿಜಯನಗರನ್ನು ಪ್ರತ್ಯೇಕ ಗೊಳಿಸುವುದರಿಂದ ಹಡಗಲಿ, ಹರಪನಹಳ್ಳಿ ತಾಲೂಕುಗಳು ದೂರವಾಲಿದೆ ಎಂಬ ಕೂಗು ಕೇಳಿ ಬಂದಿದೆ. ಆದರೆ, ಕೆಲವರು ಮಾತ್ರ ಸಂಡೂರು, ಕೂಡ್ಲಿಗಿ ತಾಲೂಕು ಆಗಿ ವಿಜಯನಗರ(ಹೊಸಪೇಟೆ) ಇದರ ಜಿಲ್ಲಾ ಕೇಂದ್ರವಾಗಬೇಕು ಎಂದು ಒತ್ತಾಯಿಸುತ್ತಿದ್ದಾರೆ.
ಇನ್ನು ಈ ಕುರಿತು ಪ್ರತಿಕ್ರಿಯಿಸಿದ ಆರೋಗ್ಯ ಸಚಿವ ಶ್ರೀರಾಮುಲು,  ಈ ವಿಚಾರಗಳನ್ನು ಬಹಿರಂಗವಾಗಿ ಮಾತಾಡಲಾಗದು. ವಿಜಯನಗರನ್ನು ಪ್ರತ್ಯೇಕ ಜಿಲ್ಲೆ ಬೇಕು ಎನ್ನುವವರಿದ್ದಾರೆ. ಬೇಡ ಎನ್ನುವವರಿದ್ದಾರೆ. ನನ್ನ ಅಭಿಪ್ರಾಯವನ್ನು ನಾನು ಸಚಿವ ಸಂಪುಟದಲ್ಲಿ ಮಾತಾಡುವೆ. ಅದಕ್ಕೂ ಮೊದಲು ಸಾಧ್ಯವಾದರೆ ಸಿಎಂ ಅವರೊಂದಿಗೆ ಮಾತಾಡುವೆ. ಬಹಿರಂಗವಾಗಿ ಮುಖ್ಯಮಂತ್ರಿಗಳಿಗೆ ಮುಜುಗರ ಆಗುವಂತಹ ಹೇಳಿಕೆಯನ್ನು ನೀಡುವುದಿಲ್ಲ ಎಂದರು.

ಬಳ್ಳಾರಿ ಅಖಂಡ ಜಿಲ್ಲೆಯಾಗಿರಬೇಕು ಎಂಬುದು ನನ್ನ ವೈಯಕ್ತಿಕ ಅನಿಸಿಕೆ. ನಾವು ಇಡೀ ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸಿದ್ದೇವೆ. ಈಗಾಗಲೇ ಪ್ರತ್ಯೇಕಗೊಂಡಿರುವ ಹೊಸ ಜಿಲ್ಲೆಗಳು ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ಧಿ ಆಗಿಲ್ಲ. ಹೀಗಾಗಿ ಅಖಂಡ ಬಳ್ಳಾರಿ ಇದ್ದರೆ ಎಲ್ಲ ದೃಷ್ಟಿಯಿಂದಲೂ ಅಭಿವೃದ್ಧಿ ಸಾಧ್ಯ. ಹೀಗಾಗಿ ನನ್ನ ವಿಚಾರಗಳನ್ನು ಸಿಎಂ ಅವರಿಗೆ ತಿಳಿಸುವೆ ಎನ್ನುವರು.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ