ಧೋನಿ ಭವಿಷ್ಯ ನಿರ್ಧರಿಸಲು ಆಯ್ಕೆ ಮಂಡಳಿಯೊಂದಿಗೆ ಸಭೆ: ಗಂಗೂಲಿ

ಟೀಮ್ ಇಂಡಿಯಾದ ಕೂಲ್ ಮಾಸ್ಟರ್ ಎಮ್.ಎಸ್.ಧೋನಿ ಅವರ ಭವಿಷ್ಯದ ಕುರಿತು ಆಯ್ಕೆ ಮಂಡಳಿಯವರಿಂದ ಅಭಿಪ್ರಾಯ ಪಡೆಯವುದಾಗಿ ಭಾವಿ ಬಿಸಿಸಿಐ ಬಿಗ್ ಬಾಸ್ ಸೌರವ್ ಗಂಗೂಲಿ ಹೇಳಿದ್ದಾರೆ.
ಅಕ್ಟೋಬರ್ 24 ರಂದು ಆಯ್ಕೆ ಮಂಡಳಿಯವರೊಂದಿಗೆ ಸಭೆ ನಡೆಸಿ ಅಭಿಪ್ರಾಯ ಪಡೆದುಕೊಳ್ಳುವುದಾಗಿ ಟೀಮ್ ಇಂಡಿಯಾದ ಮಾಜಿ ನಾಯಕ ಹೇಳಿದ್ದಾರೆ.ಕೆಲವು ತಿಂಗಳಿನಿಂದ ಧೋನಿ ನಿವೃತ್ತಿ ವಿಷಯ ಭಾರತ ಕ್ರಿಕೆಟ್‍ನಲ್ಲಿ ಭಾರೀ ಚರ್ಚೆಯಾಗುತ್ತಿದೆ.
ಸದ್ಯ ಧೋನಿ ಕ್ರಿಕೆಟ್‍ನಿಂದ ದೂರ ಇದ್ದು ವಿಶ್ವಕಪ್ ನಂತರ ಒಂದೇ ಒಂದು ಸರಣಿ ಆಡಿಲ್ಲ. ವಿಂಡೀಸ್ ಸರಣಿ ವೇಳೆ ಸೇನೆಯಲ್ಲಿ ಸೇನಾ ತರಬೇತಿ ಪಡೆದು ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ