ಭಾರತದಲ್ಲಿನ ಹಸಿವಿನ ಪ್ರಮಾಣ ತೀವ್ರವಾಗಿದೆ-ಮಾಜಿ ಸಿಎಂ ಸಿದ್ದರಾಮಯ್ಯ

ಬೆಂಗಳೂರು, ಅ.16-ಜಾಗತಿಕ ಸರ್ವೇ ಪ್ರಕಾರ ಹಸಿವಿನಿಂದ ಬಳಲುವ ದೇಶಗಳ ಪೈಕಿ ಭಾರತ ಗಂಭೀರ ಸ್ಥಿತಿಯಲ್ಲಿದೆ. ಕರ್ನಾಟಕ ಸರ್ಕಾರ ಕೂಡಲೇ ಅನ್ನಭಾಗ್ಯ, ಕ್ಷೀರಧಾರೆ, ಬಿಸಿಯೂಟ, ಇಂದಿರಾ ಕ್ಯಾಂಟೀನ್‍ನಂತಹ ಯೋಜನೆಗಳಿಗೆ ಅಗತ್ಯದಷ್ಟು ಅನುದಾನ ನೀಡಿ ಪರಿಸ್ಥಿತಿ ಸುಧಾರಿಸುವಂತೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.

2019ರ ಗ್ಲೋಬಲ್ ಹಂಗರ್ ಇಂಡೆಕ್ಸ್ ವರದಿ ಆಧರಿಸಿ ಟ್ವೀಟ್ ಮಾಡಿರುವ ಸಿದ್ದರಾಮಯ್ಯ ಅವರು, ಜಗತ್ತಿನ 117 ದೇಶಗಳ ಪೈಕಿ ಭಾರತ 102ನೇ ಸ್ಥಾನದಲ್ಲಿದೆ. ಇದು ಅತ್ಯಂತ ಗಂಭೀರವಾದ ಪರಿಸ್ಥಿತಿ. ಭಾರತದಲ್ಲಿನ ಹಸಿವಿನ ಪ್ರಮಾಣ ತೀವ್ರವಾಗಿದೆ.

ದಿಯವರು ಹೇಳುವಂತೆ ಭಾರತಕ್ಕಿನ್ನು ಅಚ್ಛೆ ದಿನ್ ಬಂದಿಲ್ಲ. ಈ ಸಂದರ್ಭದಲ್ಲಿ ನಾವು ದೇಶದ ಜನ ಹಸಿವಿನಿಂದ ಸಾಯಬೇಕು ಎಂದು ಬಯಸುತ್ತೇವೆಯೇ ಎಂಬ ಪ್ರಶ್ನೆಗಳನ್ನು ಹುಟ್ಟುಹಾಕಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಕೂಡಲೇ ರಾಜ್ಯ ಸರ್ಕಾರ ಜನರ ಹಸಿವನ್ನು ನೀಗಿಸುವ ಯೋಜನೆಗಳಿಗೆ ಆದ್ಯತೆ ಕೊಡಬೇಕು. ರಾಜ್ಯದ ಯಾರೂ ಕೂಡ ಖಾಲಿ ಹೊಟ್ಟೆಯಲ್ಲಿ ಮಲಗಬಾರದು, ಹಸಿವಿನಿಂದ ಸಾಯಬಾರದು ಎಂದು ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ