ರಾಜ್ಯದಲ್ಲಿ ಮಧ್ಯಂತರ ಚುನಾವಣೆ-ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯನವರ ಹಗಲುಗನಸು-ಎಂಟಿಬಿ ನಾಗರಾಜ್

ಬೆಂಗಳೂರು,ಅ.14- ರಾಜ್ಯದಲ್ಲಿ ಮಧ್ಯಂತರ ಚುನಾವಣೆ ಬರುತ್ತದೆ  ಎಂಬುದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯನವರ  ಹಗಲುಗನಸು ಎಂದು ಟಾಂಗ್ ನೀಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು,  ಉಪಚುನಾವಣೆಗೆ ನಾವು ಸಿದ್ದರಾಗಿದ್ದೇವೆ. ನ್ಯಾಯಾಲಯದಲ್ಲಿ  ನಮ್ಮ ಪರವಾದ ತೀರ್ಪು ಬರಲಿದೆ ಎಂಬ ವಿಶ್ವಾಸವಿದೆ. ನನ್ನ ಕ್ಷೇತ್ರದಲ್ಲಿ ನನ್ನನ್ನು ಸೋಲಿಸಲು ಯಾರಿಗೂ ಸಾಧ್ಯವಿಲ್ಲ ಎಂದು ಹೇಳಿದರು.

ಚಾಮುಂಡೇಶ್ವರಿ ಕ್ಷೇತ್ರದಲ್ಲೇ ಸಿದ್ದರಾಮಯ್ಯನವರು ಸೋತಿದ್ದಾರೆ.ಇನ್ನು ನನ್ನ ಕ್ಷೇತ್ರದಲ್ಲಿ ಸೋಲಿಸುವುದು ಎಲ್ಲಿಂದ ಬಂತು ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

17 ಕ್ಷೇತ್ರಗಳ ಪೈಕಿ 15 ಕ್ಷೇತ್ರಗಳಲ್ಲಿ ಉಪಚುನಾವಣೆ ಘೋಷಣೆಯಾಗಿದೆ.ಆ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ.ಮಧ್ಯಂತರ ಚುನಾವಣೆ ನಡೆಯುವುದಿಲ್ಲ. ಅದು ಸಿದ್ದರಾಮಯ್ಯನವರ ಹಗಲುಗನಸು ಎಂದು ಹೇಳಿದರು.

ಹತಾಶೆ ಹೇಳಿಕೆ:

ತನ್ನ ಕ್ಷೇತ್ರದಲ್ಲಿ ಪ್ರತಿ ಮತದಾರರಿಗೆ 7 ಸಾವಿರ ನೀಡಲಾಗುತ್ತಿದೆ ಎಂದು ಕಷ್ಣಭೆರೇಗೌಡ ಅವರು ನೀಡಿರುವ ಹೇಳಿಕೆ ಹತಾಶೆ ಮನೋಭಾವದಿಂದ ಕೂಡಿದೆ. ಸಚಿವರಾಗಿದ್ದ ಅವರು ಈಗ ಸಚಿವ ಸ್ಥಾನ ಕಳೆದುಕೊಂಡಿದ್ದಾರೆ. ಹಾಗಾಗಿ ಹತಾಶೆಯಿಂದ ಈ ರೀತಿ ಹೇಳುತ್ತಿದ್ದಾರೆ. ನಾನು ಯಾರಿಗೂ ಹಣ ಕೊಟ್ಟು ಮತ ಖರೀದಿ ಮಾಡುವ ಅಗತ್ಯವಿಲ್ಲ. ಕೃಷ್ಣ ಭೆರೇಗೌಡ ಅವರ ಹೇಳಿಕೆಯಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದು ಹೇಳಿದರು.

 

 

ಟ್ರಾಫಿಕ್ ಇಂಜಿನಿಯರಿಂಗ್  ಘಟಕದಲ್ಲಿ ನಿರ್ವಹಿಸಿರುವ ಕಾಮಗಾರಿಗಳಲ್ಲಿ ಅವ್ಯವಹಾರ-ಪ್ರಕರಣದ ತನಿಖೆ ಎಸಿಬಿಗೆ

ಬೆಂಗಳೂರು,ಅ.14- ಕಳೆದ 2017-18 ಮತ್ತು 2018-19ನೇ ಸಾಲಿನ ಪಾಲಿಕೆಯ ಟ್ರಾಫಿಕ್ ಇಂಜಿನಿಯರಿಂಗ್  ಘಟಕದಲ್ಲಿ ನಿರ್ವಹಿಸಿರುವ 109 ಕೋಟಿ ಕಾಮಗಾರಿಗಳಲ್ಲಿ ನಡೆದಿರುವ 53 ಕೋಟಿ ರೂ.ಗೂ ಹೆಚ್ಚು ಅವ್ಯವಹಾರದ ಪ್ರಕರಣವನ್ನು ತನಿಖೆ ನಡೆಸುವಂತೆ ಎಸಿಬಿಗೆ ವಹಿಸಿ ಮುಖ್ಯಮಂತ್ರಿ ಯಡಿಯೂರಪ್ಪ ಆದೇಶಿಸಿದ್ದಾರೆ.

ಬಿಜೆಪಿ ವಕ್ತಾರರಾದ ಎನ್.ಆರ್.ರಮೇಶ್ ಟಿಇಸಿಯಲ್ಲಿ ನಡೆದಿರುವ ಅವ್ಯವಹಾರ ಮತ್ತು ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಟಿವಿಸಿಸಿಗೆ ದೂರು  ನೀಡಿದ್ದರು.

ಈ ಹಿನ್ನೆಲೆಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ನಡೆಸಬೇಕೆಂದು ಮುಖ್ಯಮಂತ್ರಿಗಳು ಎಸಿಬಿಗೆ ಆದೇಶ ನೀಡಿದ್ದಾರೆ.

ಟ್ರಾಫಿಕ್ ಇಂಜಿನಿಯರಿಂಗ್ ಸೆಲ್ ಇಲಾಖೆಯು ತಾನು ನಿರ್ವಹಿಸಿರುವ 109 ಕೋಟಿ ಮೊತ್ತದ ಕಾಮಗಾರಿಗಳಲ್ಲಿ ಮಾಡದೆ ಇರುವ ಕಾಮಗಾರಿಗಳಿಗೆ ಮತ್ತು ಕಳಪೆ ಗುಣಮಟ್ಟದ ಕಾಮಗಾರಿಗಳಿಗೆ  ಅವಕಾಶ ಮಾಡಿಕೊಟ್ಟು, ಗುತ್ತಿಗೆದಾರರೊಂದಿಗೆ ಶಾಮೀಲಾಗಿ 53 ಕೋಟಿ ರೂ.ಗೂ ಹೆಚ್ಚು ಮೊತ್ತವನ್ನು ವಂಚಿಸಿರುವ ಬಗ್ಗೆ ತನಿಖೆ ನಡೆಸುವಂತೆ ಕಳೆದ ಮಾರ್ಚ್ ತಿಂಗಳಲ್ಲಿ ಆಯುಕ್ತರು ಟಿವಿಸಿಸಿಗೆ ಆದೇಶಿಸಿದ್ದರು.

ಟಿವಿಸಿಸಿ ಇಲಾಖೆ ಅಧಿಕಾರಿಗಳು ಕಳೆದ ವಾರವಷ್ಟೇ ಈ ಹಗರಣದ ಸಂಬಂಧ 179 ಪುಟಗಳ ವರದಿಯನ್ನು ಆಯುಕ್ತರಿಗೆ ಸಲ್ಲಿಸಿದ್ದರು.

ಇದರ ಬಗ್ಗೆ ಕೂಲಂಕಷವಾಗಿ ಪರಿಶೀಲಿಸಿ ತನಿಖೆ ನಡೆಸುವಂತೆ ಮುಖ್ಯಮಂತ್ರಿ ಯಡಿಯೂರಪ್ಪನವರು ಎಸಿಬಿಗೆ ವಹಿಸಿದ್ದಾರೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ