ಬೆಂಗಳೂರು, ಅ.14- ಗಾಂಧಿ ಕೃಷಿ ವಿಜ್ಞಾನ ಕೇಂದ್ರ (ಜಿಕೆವಿಕೆ)ದಲ್ಲಿ ಇದೇ 24ರಿಂದ 27ರವರೆಗೆ ಕೃಷಿ ಮೇಳವನ್ನು ಆಯೋಜಿಸಲಾಗಿದೆ.
ಸುದ್ದಿಗೋಷ್ಠಿಯಲ್ಲಿ ಕೃಷಿ ಸಚಿವ ಹಾಗೂ ಉಪ ಮುಖ್ಯಮಂತ್ರಿ ಲಕ್ಷ್ಮಣ್ ಸವದಿ ಅವರು ಈ ಸಾಲಿನ ಕೃಷಿ ಮೇಳ-2019ರ ಪ್ರಕಟಣೆಯನ್ನು ಬಿಡುಗಡೆ ಮಾಡಿದರು.
ನಿಖರ ಕೃಷಿ ಸುಸ್ಥಿರ ಅಭಿವೃದ್ಧಿ ಶೀರ್ಷಿಕೆಯಡಿ ಕೃಷಿ ಮೇಳವನ್ನು ಆಯೋಜಿಸಲಾಗಿದ್ದು ,ಮಣ್ಣಿನ ಗುಣ ಧರ್ಮ, ಪೆÇೀಷಕಾಂಶಗಳ ಲಭ್ಯತೆ , ಕಳೆಗಳ ನಿರ್ವಹಣೆ, ಸಾಂದ್ರತೆಯನ್ನು ಪ್ರತಿ ಹಂತದಲ್ಲೂ ನಿರ್ವಹಣೆ ಮಾಡುವುದು. ನಿಖರ ಬೇಸಾಯದಲ್ಲಿ ಬೆಳೆ ಉತ್ಪಾದನೆ, ಮಾಹಿತಿ ಮತ್ತು ತಂತ್ರಜ್ಞಾನ ಆಧಾರಿತ ಸಂಪನ್ಮೂಲ ಬಳಕೆಯಿಂದ ಹೆಚ್ಚಿನ ಇಳುವರಿ ಗುಣಮಟ್ಟ ಹಾಗೂ ಆದಾಯ ಪಡೆಯಲು ಸಾಧ್ಯವಾಗಿದೆ.
ಈ ಬಾರಿಯ ಕೃಷಿ ಮೇಳದಲ್ಲಿ ನೀರಿನ ಸದ್ಬಳಕೆಯಲ್ಲಿ ಸೂಕ್ಷ್ಮ ನೀರಾವರಿ ಪದ್ಧತಿಗಳಾದ ಹನಿ ನೀರಾವರಿ ಹಾಗೂ ತುಂತುರು ನೀರಾವರಿ ಹಾಗೂ ನೀರಿನೊಂದಿಗೆ ಪೆÇೀಷಕಾಂಶ ಪೂರೈಸುವ ರಸವಾರಿ ಬೆಳೆ ಹಾಗೂ ಮಣ್ಣಿನ ಆಧಾರದ ನೀರು ಹಾಗೂ ಪೆÇೀಷಕಾಂಶ ಪೂರೈಕೆಗೆ ಸಂವೇದನಾ ಆಧಾರಿತ ಸ್ವಯಂ ನೀರಾವರಿ ಪದ್ಧತಿ ವಿದ್ಯುತ್ಗೆ ಪರ್ಯಾಯವಾಗಿ ಸೌರ ಶಕ್ತಿ ಬಳಕೆ , ಜಲ ಕೃಷಿ ಇತ್ಯಾದಿ ತಂತ್ರಜ್ಞಾನಗಳನ್ನೊಳಗೊಂಡ ಪ್ರಾತ್ಯಕ್ಷಿಕೆಗಳನ್ನು ಹಮ್ಮಿಕೊಳ್ಳಲಾಗಿದೆ.
ರೈತ ಬಾಂಧವರು ಮತ್ತು ಸಾರ್ವಜನಿಕರು ಮೇಳದಲ್ಲಿ ಪಾಲ್ಗೊಂಡು ನಿಖರ ಕೃಷಿ ಬೇಸಾಯ ಪದ್ಧತಿಗಳನ್ನು ತಮ್ಮ ಕಾರ್ಯ ಕ್ಷೇತ್ರದಲ್ಲಿ ಅಳವಡಿಸಿಕೊಂಡು ಹೆಚ್ಚಿನ ಆದಾಯ ಗಳಿಸಿ ಪ್ರಧಾನಿ ನರೇಂದ್ರ ಮೋದಿಯವರ ಆಶಯದಂತೆ ತಮ್ಮ ಆದಾಯವನ್ನು ದ್ವಿಗುಣಗೊಳಿಸಲು ಮುಂದಾಗಬೇಕೆಂದು ಕೃಷಿ ಸಚಿವ ಲಕ್ಷ್ಮಣ್ ಸವದಿ ಕರೆ ನೀಡಿದರು.
ಈ ಸಂದರ್ಭದಲ್ಲಿ ಕೃಷಿ ವಿವಿಯ ಕುಲಪತಿ ಡಾ.ರಾಜೇಂದ್ರ ಪ್ರಸಾದ್, ಡಾ.ಎಸ್.ಪಿ.ಪಾಟೀಲ್, ಡಾ.ಕೆ.ಶಿವರಾಮು, ಎನ್.ಪಾಪಣ್ಣ ಹಾಜರಿದ್ದರು.