ಬೆಂಗಳೂರು, ಅ.7- ವಿಧಾನಮಂಡಲ ಅವೇಶನವು ಅ.10ರಿಂದ 12ರವರೆಗೆ ವಿಧಾನಸೌಧಲ್ಲಿ ನಡೆಯಲಿದ್ದು, ಈ ವೇಳೆ ಯಾವುದೇ ಅಹಿತಕರ ಘಟನೆ ಜರುಗದಂತೆ ಕ್ರಮ ಕೈಗೊಳ್ಳಲು ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ಸಲುವಾಗಿ ವಿಧಾನಸೌ`ದ ಸುತ್ತಮುತ್ತ 2 ಕಿಮೀ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ನಗರ ಪೆÇಲೀಸ್ ಆಯುಕ್ತರು ಆದೇಶ ಹೊರಡಿಸಿದ್ದಾರೆ.
ನಗರ ಪೆÇಲೀಸ್ ಆಯುಕ್ತರಿಂದ ಆದೇಶ ಅವೇಶನ ನಡೆಯುವ ವೇಳೆ ಅಂದರೆ ಅ.10ರಂದು ಬೆಳಗ್ಗೆ 6ರಿಂದ ಅ. 12ರ ಮಧ್ಯರಾತ್ರಿ 12 ಗಂಟೆವರೆಗೆ ವಿವಿ` ರಾಜಕೀಯ ಪಕ್ಷಗಳು, ವಿವಿ` ಸಂಘಟನೆಗಳು ತಮ್ಮ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಪ್ರತಿ`ಟನೆ, ಮೆರವಣಿಗೆ, ವಿ`Áನಸೌ` ಮುತ್ತಿಗೆ ಇತ್ಯಾದಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಸಾ`್ಯತೆಯಿದೆ.
ಈ ಹಿನ್ನೆಲೆಯಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಕಲಂ 144 ಅನ್ವಯ ನಿಷೇ`Áಜ್ಞೆ ಜಾರಿಗೊಳಿಸಿ ನಗರ ಪೆÇಲೀಸ್ ಆಯುಕ್ತ `Áಸ್ಕರ್ ರಾವ್ ಆದೇಶ ಹೊರಡಿಸಿದ್ದಾರೆ.