ಉಪಚುನಾವಣೆಗೆ ಸದ್ದಿಲ್ಲದೆ ಕಾರ್ಯತಂತ್ರ ರೂಪಿಸತೊಡಗಿರುವ ರಾಜಕೀಯ ಪಕ್ಷಗಳು

ಬೆಂಗಳೂರು, ಅ.7- ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಜಿದ್ದಾಜಿದ್ದಿನ ಕುರುಕ್ಷೇತ್ರವೆಂದೇ ಹೇಳಲಾಗುತ್ತಿರುವ 15 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಮೂರು ರಾಜಕೀಯ ಪಕ್ಷಗಳು ಸದ್ದಿಲ್ಲದೆ ಕಾರ್ಯತಂತ್ರ ರೂಪಿಸತೊಡಗಿವೆ.
ಇದೇ 21ರಂದು ನಡೆಯಬೇಕಾಗಿದ್ದ ಉಪಚುನಾವಣೆಗೆ ಸುಪ್ರೀಂಕೋರ್ಟ್ ತಡೆಯಾಜ್ಞೆ ನೀಡಿದ ಪರಿಣಾಮ ಮುಂದೂಡಲಾಗಿತ್ತು.ಬಳಿಕ ಕೇಂದ್ರ ಚುನಾವಣಾ ಆಯೋಗ ಮರುದಿನವೇ ಪುನಃ ಉಪಸಮರಕ್ಕೆ ದಿನಾಂಕವನ್ನು ಘೋಷಣೆ ಮಾಡಿತು.
ಇದೀಗ ಸ್ವಲ್ಪ ವಿರಾಮ ಕೊಟ್ಟಿದ್ದ ಚುನಾವಣಾ ತಯಾರಿಗೆ ರಾಜಕೀಯ ಪಕ್ಷಗಳು ಮತ್ತೆ ಚಾಲನೆ ನೀಡಿವೆ. ಕಾಂಗ್ರೆಸ್-ಜೆಡಿಎಸ್‍ನ 17 ಶಾಸಕರು ರಾಜೀನಾಮೆ ಕೊಟ್ಟಿದ್ದು, ಇದರಲ್ಲಿ 15 ಕ್ಷೇತ್ರಗಳಿಗೆ ಮಾತ್ರ ಉಪಚುನಾವಣೆ ದಿನಾಂಕ ಘೋಷಣೆಯಾಗಿದೆ.
ವಿ`Áನಸ`Éಯಲ್ಲಿ ಅಲ್ಪಬಹಮತ ಹೊಂದಿರುವ ಆಡಳಿತರೂಡ ಬಿಜೆಪಿ ಕನಿಷ್ಟ 10ರಿಂದ 12 ಕ್ಷೇತ್ರಗಳನ್ನು ಗೆಲ್ಲಲು ರಣತಂತ್ರ ರೂಪಿಸಿದೆ.ಇತ್ತ ಪ್ರತಿಪಕ್ಷ ಕಾಂಗ್ರೆಸ್ ಈ ಉಪಸಮರದಲ್ಲಿ ಹೆಚ್ಚಿನ ಸ್ಥಾನ ಗೆದ್ದು, ಬಿಜೆಪಿಯನ್ನು ಇಕ್ಕಟ್ಟಿಗೆ ಸಿಲುಕಿಸುವ ಪ್ರತಯತ್ನದಲ್ಲಿದೆ.
ಹೀಗಾಗಿ ಈಗಾಗಲೇ ಕೆಲವು ಕ್ಷೇತ್ರಗಳಿಗೆ ಅ`್ಯರ್ಥಿಗಳ ಹೆಸರನ್ನು ಘೋಷಣೆ ಮಾಡಿದೆ.ಅಕೃತವಾಗಿ ಯಾವುದೇ ಅ`್ಯರ್ಥಿಗಳ ಹೆಸರನ್ನು ಪ್ರಕಟ ಮಾಡಿಲ್ಲವಾದರೂ, ತಮ್ಮ ತಮ್ಮ ಕ್ಷೇತ್ರಗಳಲ್ಲಿ ಕೆಲಸ ಮಾಡುವಂತೆ ಪರೋಕ್ಷವಾಗಿ ಸೂಚನೆ ಕೊಡಲಾಗಿದೆ.
ಇನ್ನು ಎರಡು ರಾಷ್ಟ್ರೀಯ ಪಕ್ಷಗಳಿಗೆ ಟಕ್ಕರ್ ಕೊಡಲು ಮುಂದಾಗಿರುವ ದಳಪತಿಗಳು ಕೆಲವೇ ಸೀಮಿತ ಕ್ಷೇತ್ರಗಳಲ್ಲಿ ಮಾತ್ರ ಸ್ರ್ಪಸುವ ಬಗ್ಗೆ ಗಮನ ಹರಿಸಿದೆ.ಪಕ್ಷದ ಸಾಮಥ್ರ್ಯ ಹೆಚ್ಚಿರುವ ಕಡೆ ಅ`್ಯರ್ಥಿಗಳನ್ನು ಕಣಕ್ಕೀಳಿಸಿ ಉಳಿದ ಕಡೆ ಅಂದಿನ ಪರಿಸ್ಥಿತಿಗೆ ತಕ್ಕಂತೆ ನಿ`ರ್Áರ ಕೈಗೊಳ್ಳುವ ಹೊಣೆಗಾರಿಕೆಯನ್ನು ಸ್ಥಳೀಯ ಮುಖಂಡರಿಗೆ ನೀಡಲಾಗಿದೆ.
ಉಪಚುನಾವಣೆಯಲ್ಲಿ 15 ಕ್ಷೇತ್ರಗಳಲ್ಲೂ ಜೆಡಿಎಸ್ ಸ್ಪ`ರ್É ಮಾಡುತ್ತದೆಯಾದರೂ, ಐದು ಕ್ಷೇತ್ರಗಳ ಮೇಲೆ ಹೆಚ್ಚು ಕಣ್ಣಿಟ್ಟಿದೆ.ಆ ಕ್ಷೇತ್ರಗಳ ಮೇಲೆಯೇ ಹೆಚ್ಚು ಆಸಕ್ತಿ ವಹಿಸಿರುವ ನಾಯಕರು, ಐದು ಕ್ಷೇತ್ರಗಳನ್ನು ತಮ್ಮ ತೆಕ್ಕೆಗೆ ಹಾಕಿಕೊಳ್ಳುವ ಗುರಿ ಹೊಂದಿದ್ದಾರೆ ಎನ್ನಲಾಗಿದೆ.

ಇಂತಹದ್ದೊಂದು ಚರ್ಚೆ ಇತ್ತೀಚೆಗೆ ನಡೆದ ಸ`Éಯಲ್ಲಿ ನಡೆದಿದೆ ಎಂದು ಹೇಳಲಾಗುತ್ತಿದೆ. ಜೆಡಿಎಸ್ ಪಕ್ಷದ ಟಿಕೆಟ್ ಪಡೆದು ಗೆದ್ದು ಪಕ್ಷಕ್ಕೆ ದ್ರೋಹ ಮಾಡಿರುವ ಹಿರಿಯ ಮುಖಂಡ ಹೆಚ್.ವಿಶ್ವನಾಥ್, ಕೆ.ಗೋಪಾಲಯ್ಯ, ನಾರಾಯಣಗೌಡ ಸ್ರ್ಪಸಿದ್ದ ಹುಣಸೂರು, ಮಹಾಲಕ್ಷ್ಮಿ ಲೇಔಟ್ ಹಾಗೂ ಕೆಆರ್ ಪೇಟೆ ಕ್ಷೇತ್ರಗಳ ಮೇಲೆ ನಾಯಕರು ಹೆಚ್ಚಿನ ಗಮನಹರಿಸಿದ್ದಾರೆ.
ಈ ಮೂರು ಕ್ಷೇತ್ರಗಳನ್ನು ಶತಾಯಗತಾಯ ಗೆಲ್ಲಬೇಕೆಂಬುದು ಆ ನಾಯಕರ ಲೆಕ್ಕಾಚಾರವಾಗಿದೆ.ಕಳೆದ ವಿ`Áನಸ`Á ಚುನಾವಣೆಯಲ್ಲಿ ಸ್ರ್ಪಸಿ ಕಡಿಮೆ ಅಂತರದಿಂದ ಸೋಲು ಅನು`ವಿಸಿದ್ದ ಯಶವಂತಪುರ ಹಾಗೂ ಚಿಕ್ಕಬಳ್ಳಾಪುರ ಕ್ಷೇತ್ರಗಳ ಮೇಲೂ ಜೆಡಿಎಸ್ ನಾಯಕರು ಹೆಚ್ಚು ಆಸಕ್ತಿ ತೋರಿಸಿದ್ದಾರೆ ಎನ್ನಲಾಗಿದೆ.ಜೆಡಿಎಸ್‍ಗೆ ಹೆಚ್ಚು ನೆಲೆ ಇಲ್ಲದ ಉತ್ತರ ಕರ್ನಾಟಕ ಹಾಗೂ ಕರಾವಳಿ ಕ್ಷೇತ್ರಗಳ ಕುರಿತು ಹೆಚ್ಚು ಆಸಕ್ತಿ ತೋರುತ್ತಿಲ್ಲ.
ಆದರೆ, ಚುನಾವಣೆಯಲ್ಲಿ ಆ ಕ್ಷೇತ್ರಗಳಿಗೂ ಅ`್ಯರ್ಥಿಗಳನ್ನು ಕಣಕ್ಕಿಳಿಸಿ ಇಲ್ಲೂ ಜೆಡಿಎಸ್ ಇದೆ ಎಂಬ ಸಂದೇಶ ರವಾನೆ ಮಾಡುವ ತಂತ್ರಗಾರಿಕೆ ಜೆಡಿಎಸ್ ನದ್ದು ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ.ಹದಿನೈದು ಕ್ಷೇತ್ರಗಳಿಗೆ ಡಿಸೆಂಬರ್ 5 ರಂದು ಮತದಾನ ನಡೆಯಲಿದ್ದು, ಡಿಸೆಂಬರ್ 9 ರಂದು ಫಲಿತಾಂಶ ಪ್ರಕಟವಾಗಲಿದೆ.

ಬಿಜೆಪಿಗೆ ಪ್ರತಿಷ್ಠೆ: ಈ ಚುನಾವಣೆಯಲ್ಲಿ ಕನಿಷ್ಟ 12 ಕ್ಷೇತ್ರಗಳನ್ನಾದರೂ ಗೆಲ್ಲಲೇಬೇಕಾದ ಪರಿಸ್ಥಿತಿ ಬಿಜೆಪಿಗೆ ಎದುರಾಗಿದೆ. ವಿ`Áನಸ`Éಯಲ್ಲಿ 104 ಸ್ಥಾನಗಳನ್ನು ಹೊಂದಿರುವ ಕಮಲ ಪಕ್ಷ ಸರಳ ಬಹಮತ ಪಡೆಯಲು ಇನ್ನು 8 ಸ್ಥಾನಗಳನ್ನಾದರೂ ಗೆಲ್ಲಬೇಕು.ಒಂದೆರಡು ಸ್ಥಾನಗಳ ಕೊರತೆ ಕಂಡು ಬಂದರೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಕುರ್ಚಿಗೆ ಕಂಠಕ ಎದುರಾಗುವುದರಲ್ಲಿ ಯಾವ ಸಂಶಯವು ಇಲ್ಲ.
ಈ ಹಿನ್ನೆಲೆಯಲ್ಲಿ ಯಡಿಯೂರಪ್ಪ ಈಗಾಗಲೇ ಅನರ್ಹ ಶಾಸಕರು ಪ್ರತಿನಿಸುವ ಕ್ಷೇತ್ರಗಳಿಗೆ `ರಪೂರ ಆರ್ಥಿಕ ನೆರವು ನೀಡುತ್ತಿದ್ದಾರೆ.ಸುಪ್ರೀಂಕೋರ್ಟ್‍ನಲ್ಲಿ ಯಾವುದೇ ತೀರ್ಪು ಬಂದರೂ ಸರಿಯೇ ನಿಮ್ಮನ್ನು ಕೈ ಬಿಡುವುದಿಲ್ಲ ಎಂದು ಹೇಳೂವ ಮೂಲಕ ಉಪಸಮರಕ್ಕೆ ಸಜ್ಜಾಗುವಂತೆ ಕಾರ್ಯಕರ್ತರಿಗೆ ಸೂಚನೆ ಕೊಟ್ಟಿದ್ದಾರೆ.

ಸಾಲು ಸಾಲು ಸೋಲು ಕಂಡಿರುವ ಕಾಂಗ್ರೆಸ್ ಈ ಚುನಾವಣೆಯಲ್ಲಿ ಎಷ್ಟೇ ಸ್ಥಾನ ಗೆದ್ದರೂ ಅಕಾರ ಹಿಡಿಯುವ ಸಾ`್ಯತೆ ಇಲ್ಲ. ಆದರೆ, ಹೆಚ್ಚಿನ ಸ್ಥಾನ ಗೆದ್ದರೆ ಜನಾದೇಶ ತಮ್ಮ ಪಕ್ಷದ ಪರವಾಗಿ ಇದೆ ಎಂಬುದನ್ನು ಬಿಂಬಿಸಿಕೊಳ್ಳುವ ಪ್ರಯತ್ನ ಮಾಡಲು ಮುಂದಾಗಿದೆ.
ಬಿಜೆಪಿ ಜನಾದೇಶಕ್ಕೆ ವಿರುದ್ದವಾಗಿ ವಾಮಮಾರ್ಗದ ಮೂಲಕ ಅಕಾರಕ್ಕೆ ಬಂದಿದೆ ಎಂಬುದನ್ನು ಮತದಾರರಿಗೆ ಮನವರಿಕೆ ಮಾಡುವ ಯೋಜನೆಯಲ್ಲಿದೆ. ಒಂದು ವೇಳೆ ರಾಜ್ಯದಲ್ಲಿ ಮ`್ಯಂತರ ಚುನಾವಣೆ ನಡೆದರೆ,ಉಪಚುನಾವಣೆಯ ಫಲಿತಾಂಶವನ್ನು ಮುಂದಿಟ್ಟುಕೊಂಡು ಜನಾದೇಶ ಪಡೆಯುವ ಹುಮ್ಮಸ್ಸಿನಲ್ಲಿದೆ.
ಒಂದೆಡೆ ಬಿಜೆಪಿ ಸರ್ಕಾರದ ಅಳಿವು-ಉಳಿವಿನ ಪ್ರಶ್ನೆ, ಮತ್ತೊಂದೆಡೆ ಮೈತ್ರಿ ಸರ್ಕಾರವನ್ನು ಕೆಡವಿದ ಅನರ್ಹ ಶಾಸಕರ ಪ್ರತಿಷ್ಠೆಯ ಪ್ರಶ್ನೆ, ಇನ್ನೊಂದೆಡೆ ಕಾಂಗ್ರೆಸ್-ಜೆಡಿಎಸ್ ನಾಯಕರ ಸೇಡಿನ ಪ್ರಶ್ನೆಯಾಗಿದೆ.ಒಟ್ಟಾರೆ, ಈ ಉಪಚುನಾವಣೆ ಮೂರು ಪಕ್ಷಗಳಿಗೂ ಅತ್ಯಂತ ಮಹತ್ವದ್ದಾಗಿದೆ ಎಂದೇ ಹೇಳಬಹುದು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ