ಬೆಂಗಳೂರು,ಅ.4-ನಿರಾಶ್ರಿತರ ಬಗ್ಗೆ ಉದಾಸೀನ ಮಾಡುತ್ತಿರುವ ರಾಜ್ಯ ಮತ್ತು ಕೇಂದ್ರ ಸರ್ಕಾರದ ಧೋರಣೆಯನ್ನು ವಿರೋಧಿ ಸಿ ಅ.10 ರಂದು ಬೆಳಗ್ಗೆ 11ಗಂಟೆಗೆ ವಿಧಾನಸೌಧಕ್ಕೆ ಮುತ್ತಿಗೆ ಹಾಕಾಲು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ನಿರ್ದರಿಸಿದೆ.
ಸುದ್ದಿಗೋಷ್ಠಿಯಲ್ಲಿ ಹಸಿರು ಸೇನೆಯ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ ಮಾತನಾಡಿ ಬೆಳಗ್ಗೆ 11ಗಂಟೆಗೆ ಕ್ರಾಂತಿವೀರ ಸಂಗೊಳ್ಲಿ ರಾಯಣ್ಣ ರೈಲ್ವೆ ನಿಲ್ದಾಣದಿಂದ ಸಾವಿರಾರು ಸಂಖ್ಯೆಯಲ್ಲಿ ರೈತರು ಪ್ತಿಭಟನಾ ಮೆರವಣಿಗೆಯೊಂದಿಗೆ ಹೊರಟು ವಿಧಾನಸೌಧಕ್ಕೆ ಮತ್ತಿಗೆ ಹಾಕಾಲಾಗುವುದಾಗಿ ತಿಳಿಸಿದರು.
ನಿರಾಶ್ರಿತರಾಗಿ ಪರಿಹಾರವು ನೀಡದೆ ಇಗಾ ತಾತ್ಕಾಲಿಕ ಗಂಜಿ ಕೇಂದ್ರಗಳು ತೆರೆದಿದ್ದು ಅವುಗಳನ್ನ ಮುಚ್ಚಲಾಗಿದೆ ಅದರಿಂದ ಇಂತಹ ಧೋರಣೆಯನ್ನು ಖಂಡಿಸಿ ಪ್ರತಿಭಟನೆ ಮಾಡಲು ನಿರ್ದರಿಸಿದೆ ಎಂದು ತಿಳಿಸಿದರು.
ಕಳೆದ ವರ್ಷ ಬರ ಪರಿಹಾರವಾಗಿ ಕೇಂದ್ರ ಸರ್ಕಾರ 1059 ಕೋಟಿ ಬಿಡುಗಡೆ ಮಾಡಿದರು ಅದರೆ ರಾಜ್ಯ ಸರ್ಕಾರ ರೈತರಿಗೆ ನೀಡದೆ ಮೀನಾ ಮೇಷ ಏಣಿಸುತ್ತಿದೆ ಎಂದು ಆರೋಪಿಸಿದರು.
ವಿಧಾನಸಭೆಯ ಚಳಿಗಾಲದ ಅಧಿವೇಶನವನ್ನು ಪ್ರತಿ ವರ್ಷ ಬೆಳಗಾವಿಯಲ್ಲಿ ನಡೆಸುತ್ತಿದ್ದು ಅದರೆ ಈಗಾ ಅಲ್ಲೆ ಅಧಿವೇಶನ ನಡೆಸಿದ್ದಾರೆ ಪ್ರವಾಹ ಸಂತ್ರಸ್ತರ ವಿರೋಧ ಎದುರಿಸಬೇಕಾಗುತ್ತದೆ ಎಂಬ ಮುನ್ಸೂಚನೆಯಿಂದ ಬೆಂಗಳೂರಿನ ಲ್ಲೆ ಅಧಿವೇಶನ ನಡೆಸಲು ತೀರ್ಮಾನಿಸಿರುವುದು ದುರಂತ ಎಂದರು.
ರಾಜ್ಯ ಸರ್ಕಾರ ಶಿಘ್ರದಲ್ಲೆ ಪರಿಹಾರ ನೀಡುಬೇಕು, ಸಾಲ ಮನ್ನ ಘೋಷಣೆ ಮಾಡಬೇಕು,ಕೃಷ್ಣ ನೀರು ನಿರ್ವಾಣಾ ಮಂಡಳಿ ನೇಮಕ ಮಾಡಬೇಕು, ಎಂದು ಒತ್ತಾಯಿಸಿದರು.