ಹೆಚ್​.ಕೆ.ಪಾಟೀಲ್​ಗೆ ಹೈಕಮಾಂಡ್​ ಬುಲಾವ್​; ಸಿದ್ದರಾಮಯ್ಯ ಕೈ ತಪ್ಪಲಿದೆಯಾ ವಿಪಕ್ಷ ಸ್ಥಾನ?

ಬೆಂಗಳೂರು: ವಿಪಕ್ಷ ಸ್ಥಾನದ ಅಧಿಕಾರ ಚುಕ್ಕಾಣಿ ಹಿಡಿಯಲು ಕಾಂಗ್ರೆಸ್ನಲ್ಲಿ ಪೈಪೋಟಿ ಶುರುವಾಗಿದ್ದು, ಸಿದ್ದರಾಮಯ್ಯ ಆಸೆಗೆ ತಣ್ಣೀರೆರಚುವ ಪ್ರಯತ್ನ ಮೂಲ ಕಾಂಗ್ರೆಸ್ಸಿಗರಿಂದ ನಡೆಯುತ್ತಿದೆವಿಪಕ್ಷ ಸ್ಥಾನದ ಆಕಾಂಕ್ಷಿ ನಾನು ಕೂಡ ಎಂದು ಹೆಚ್ಕೆ ಪಾಟೀಲ್ಬಹಿರಂಗವಾಗಿ ಹೇಳಿಕೆ ನೀಡುತ್ತಿದ್ದಂತೆ ಅವರಿಗೆ ಬುಲಾವ್ನೀಡಿರುವ ಹೈ ಕಮಾಂಡ್ ಬಗ್ಗೆ ಚರ್ಚೆಗೆ ಸಿದ್ಧತೆ ನಡೆಸಿದೆಹೈ ಕಮಾಂಡ್ಕೂಡ ಮೂಲ ಕಾಂಗ್ರೆಸ್ಸಿಗರ ಪರ ಒಲವು ತೋರುತ್ತಿದೆ ಎನ್ನಲಾಗಿದೆ.

ಪಕ್ಷದಲ್ಲಿನ ತಮ್ಮ ಶಕ್ತಿ ತೋರ್ಪಡಿಸಿ, ಸ್ಥಾನ ಭದ್ರಪಡಿಸಿಕೊಳ್ಳಲು ಸಿದ್ದರಾಮಯ್ಯ ವಿಪಕ್ಷ ಸ್ಥಾನದ ಹುದ್ದೆಗಾಗಿ ಹೈಕಮಾಂಡ್​ನಲ್ಲಿ ಲಾಬಿ ನಡೆಸಿದ್ದಾರೆ. ಈ ಹಿನ್ನೆಲೆಯಲ್ಲಿ ಎರಡು ಮೂರು ಬಾರಿ ಹೈ ಕಮಾಂಡ್​ ಕದ ತಟ್ಟಿದ ಅವರು ಪಕ್ಷದ ನಾಯಕರನ್ನು ಭೇಟಿಯಾಗುವಲ್ಲಿ ವಿಫಲರಾಗಿದ್ದರು. ಸಿದ್ದರಾಮಯ್ಯ ಬಳಿಕ ತೆರಳಿದ ಪರಮೇಶ್ವರ್​ ಸುಲಭವಾಗಿ ಹೈ ಕಮಾಂಡ್​ ಭೇಟಿ ಮಾಡಿ ಚರ್ಚೆ ಮಾಡಿದ್ದು, ಪಕ್ಷದಲ್ಲಿ ಎಲ್ಲವೂ ಸರಿಯಿಲ್ಲ ಎಂಬ ಸಂದೇಶ ಸಾರಿತು.
ಇನ್ನು ಪಕ್ಷದಲ್ಲಿ ಮೂಲ ಕಾಂಗ್ರೆಸ್ಸಿಗರನ್ನು ಕಡೆಗಣಿಸಲಾಗುತ್ತಿದೆ ಎಂಬ ಆರೋಪ ಕೂಡ ಕೇಳಿಬಂದಿದೆ. ಇದೇ ಹಿನ್ನೆಲೆಯಲ್ಲಿ ಸಿದ್ದರಾಮಯ್ಯಗೆ ಪಟ್ಟ ತಪ್ಪಿಸುವ ಪ್ರಯತ್ನ ಪಕ್ಷದಲ್ಲಿ ನಡೆಯುತ್ತಿದೆ. ಏಕ ವ್ಯಕ್ತಿ ನಾಯಕತ್ವದ ಬದಲು ಸಾಮೂಹಿಕ ನಾಯಕತ್ವದ ಮೂಲಕ ಪಕ್ಷ ಮುನ್ನಡೆಸಬೇಕು ಎಂಬ ಜಪ ಪರಮೇಶ್ವರ್​ ಕಡೆಯಿಂದಲೂ ಕೇಳಿಬಂದಿತ್ತು.

ಈ ಬೆನ್ನಲ್ಲೇ ನಾನು ಕೂಡ ವಿಪಕ್ಷ ಸ್ಥಾನದ ಆಕಾಂಕ್ಷಿ ಎಂಬ ಹೆಚ್​ಕೆ ಪಾಟೀಲ್​ ಮಾತು ಈಗ ಮೂಲ ಕಾಂಗ್ರೆಸ್ಸಿಗರನ್ನು ಮತ್ತಷ್ಟು ಒಗ್ಗೂಡುವಂತೆ ಮಾಡಿದೆ. ಇದೇ ಹಿನ್ನೆಲೆಯಲ್ಲಿಯೇ ಪಕ್ಷದ ಉಸ್ತುವಾರಿ ಕೆಸಿ ವೇಣುಗೋಪಾಲ್​ ಅವರನ್ನು ದಿಢೀರ್​ ಎಂದು ದೆಹಲಿಗೆ ಬರುವಂತೆ ಸೂಚನೆ ನೀಡಿದ್ದಾರೆ.
ಈಗಾಗಲೇ ವಿಪಕ್ಷ ಸ್ಥಾನದ ಅನುಭವ ಹೊಂದಿರುವ ಹೆಚ್​ಕೆ ಪಾಟೀಲ್​ ಅವರನ್ನು ಈ ಬಾರಿ ಮತ್ತೆ ವಿಪಕ್ಷ ನಾಯಕನನ್ನಾಗಿ ಮಾಡಿದರೆ, ಪಕ್ಷದೊಳಗಿನ ಅಸಮಾಧಾನ ಹೋಗಲಾಡಿಸಬಹುದು. ಜೊತೆ ಮೂಲ ಕಾಂಗ್ರೆಸ್ಸಿಗರ ಆಶಯದಂತೆ ವಲಸೆ ಕಾಂಗ್ರೆಸ್ಸಿಗರನ್ನು ಕಟ್ಟಿ ಹಾಕಬಹುದು ಎಂಬ ಲೆಕ್ಕಾಚಾರ ಪಕ್ಷದಲ್ಲಿದೆ. ಹಾಗೇನಾದರೂ ನಡೆದಲ್ಲಿ ಸದ್ಯ ವಿಪಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿರುವ ಸಿದ್ದರಾಮಯ್ಯಗೆ ಸ್ಥಾನ ಕೈ ತಪ್ಪುವ ಸಾಧ್ಯತೆ ಹೆಚ್ಚಿದೆ ಎಂಬ ಮಾತು ಕೇಳಿಬಂದಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ