ನಗರದಲಿ ವೈಟ್ ಟಾಪಿಂಗ್ ರಸ್ತೆಗಳ ಅವಶ್ಯಕತೆಯಿಲ್ಲ-ಬಿಬಿಎಂಪಿ ಆಯುಕ್ತ ಅನಿಲ್‍ಕುಮಾರ್‍

ಬೆಂಗಳೂರು, ಅ.3- ನಗರದಲಿ ವೈಟ್ ಟಾಪಿಂಗ್ ರಸ್ತೆಗಳ ಅವಶ್ಯಕತೆ ಇಲ್ಲ ಎಂದು ಬಿಬಿಎಂಪಿ ಆಯುಕ್ತರಾದ ಅನಿಲ್‍ಕುಮಾರ್ ಇಂದಿಲ್ಲಿ ಸ್ಪಷ್ಟ ಪಡಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ನಗರದಲ್ಲಿ ಬೀಳುವ ಸಾಧಾರಣ ಮಳೆಗೆ ಬ್ಲ್ಯಾಕ್ ಟಾಪಿಂಗ್ ರಸ್ತೆಗಳೆ ಸಾಕು, ದುಬಾರಿ ಹಣ ವೆಚ್ಚ ಮಾಡಿ ವೈಟ್ ಟಾಪಿಂಗ್ ರಸ್ತೆ ಮಾಡುವ ಅಗತ್ಯವಿಲ್ಲ ಎಂದು ಹೇಳಿದರು.

ಮಹಾರಾಷ್ಟ್ರ ಮತ್ತಿತರರ ಮಹಾನಗರಗಳಲ್ಲೇ ವೈಟ್ ಟಾಪಿಂಗ್ ರಸ್ತೆಗಳಿಲ್ಲ. ನಮ್ಮ ನಗರದಲ್ಲಿ ಮಳೆ ನೀರು ಸರಾಗವಾಗಿ ಹರಿಯಲು ರಾಜಕಾಲುವೆ ಮತ್ತು ಚರಂಡಿಗಳನ್ನು ದುರಸ್ತಿ ಪಡಿಸಿದರೆ ಸಾಕು ಎಂದರು.

ವೈಟ್ ಟಾಪಿಂಗ್ ರಸ್ತೆಗಳನ್ನು ನಿರ್ಮಿಸುವ ಮೊದಲು ಮುಂಜಾಗ್ರತೆ ಕ್ರಮ   ಕೈಗೊಳ್ಳಬೇಕಿತ್ತು. ನಮಗೆ ವೈಟ್ ಟಾಪಿಂಗ್ ರಸ್ತೆ ಅಗತ್ಯವಿಲ್ಲ. ನಾಲ್ಕು ವರ್ಷಗಳಲ್ಲಿ  ನಡೆದಿರುವ ವೈಟ್ ಟಾಪಿಂಗ್ ನಿರ್ಮಾಣದಲ್ಲಿ ಭಾರಿ ಹಗರಣವಾಗಿದೆ ಎಂಬ ಆರೋಪಗಳು ಕೇಳಿ ಬಂದಿದ್ದು, ಸರ್ಕಾರ ತನಿಖೆಗೂ ಆದೇಶಿಸಿದೆ.

ಇಂತಹ ಸಮಯದಲ್ಲಿ ಆಯುಕ್ತರು ವೈಟ್ ಟಾಪಿಂಗ್ ರಸ್ತೆ ಅವಶ್ಯಕತೆ ಇಲ್ಲ ಎಂದಿರುವುದರಿಂದ ಮುಂದಿನ ದಿನಗಳಲ್ಲಿ ವೈಟ್ ಟಾಪಿಂಗ್ ರಸ್ತೆ ನಿರ್ಮಾಣವಾಗಲಾರದು.

 

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ