ಮೈಸೂರು, ಅ.2- ರಾಜ್ಯದ ನೆರೆ ಹಾವಳಿಯ ಪರಿಹಾರಕ್ಕಾಗಿ ಯಾವುದೇ ಪಕ್ಷದವರ ಪ್ರಭಾವ ತಮಗೆ ಬೇಕಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಂದಿಲ್ಲಿ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಈವರೆಗೂ ವಿದೇಶಿ ಪ್ರವಾಸದಲ್ಲಿದ್ದರು.ಈಗತಾನೇ ಸ್ವದೇಶಕ್ಕೆ ಮರಳಿದ್ದಾರೆ.ಎರಡು ದಿನಗಳಲ್ಲಿ ರಾಜ್ಯದ ನೆರೆ ಪರಿಸ್ಥಿತಿಗೆ ಪರಿಹಾರದ ಧನ ದೊರೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪ್ರಧಾನಿ ಅವರಿಗೆ ದೇಶ ಹಾಗೂ ರಾಜ್ಯಗಳ ಪರಿಸ್ಥಿತಿ ಬಗ್ಗೆ ಅರಿವಿದೆ.ಅವರು ಎಲ್ಲಾ ವಿಷಯಗಳನ್ನು ತಿಳಿದುಕೊಂಡಿರುತ್ತಾರೆ. ಹಾಗಾಗಿ ನಾವು ಯಾರದೋ ಪ್ರಭಾವದಿಂದ ನಿಯೋಗದೊಂದಿಗೆ ಪ್ರಧಾನಿ ಅವರನ್ನು ಭೇಟಿ ಮಾಡುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.
ಇತ್ತೀಚೆಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೆರೆ ಪರಿಹಾರಕ್ಕಾಗಿ ಮೋದಿ ಭೇಟಿಗೆ ನಿಯೋಗ ಕರೆದೊಯ್ಯುವಂತೆ ನೀಡಿದ್ದ ಸಲಹೆಗೆ ಸಿಎಂ ಈ ರೀತಿ ಉತ್ತರಿಸಿದರು.
ನನ್ನ ಪಕ್ಷದವರು ಸೇರಿದಂತೆ ವಿಪಕ್ಷಗಳ ಯಾವುದೇ ನಿಯೋಗದೊಂದಿಗೆ ದೆಹಲಿಗೆ ತೆರಳಿ ಪ್ರಧಾನಿ ಮೇಲೆ ಒತ್ತಾಯ ಹೇರುವ ಪರಿಸ್ಥಿತಿ ಇಲ್ಲ ಎಂದರು.
ಸುತ್ತೂರು ಮಠಾಧೀಶರ ಟೆಲಿಫೆÇೀನ್ ಕದ್ದಾಲಿಕೆ ಕುರಿತಂತೆ ಕೇಳಿದ ಪ್ರಶ್ನೆಗೆ ಟೆಲಿಫೆÇೀನ್ ಕದ್ದಾಲಿಕೆ ವಿಚಾರವಾಗಿ ಸದ್ಯಕ್ಕೆ ತಾವೇನು ಮಾತನಾಡುವುದಿಲ್ಲ. ಸಿಬಿಐನವರು ಇದರ ತನಿಖೆ ಕೈಗೊಂಡಿದ್ದಾರೆ.ಅವರ ವರದಿ ಬಂದ ನಂತರ ಮಾತನಾಡುತ್ತೇನೆ ಎಂದ ಅವರು, ಯಾವುದೇ ಫೆÇೀನ್ ಟ್ಯಾಪಿಂಗ್ ಕೆಲಸ ನಡೆಯಬಾರದು ಎಂದು ಹೇಳಿದರು.