ಭಾವಸಾರ ಲಗ್ನ ವೇದಿಕೆ ಅಡಿಯಲ್ಲಿ 6ನೇ ಭೃಹತ್ ವದು-ವರ ಮಹಾ ಸಮಾವೇಶ

ಶಿವಮೊಗ್ಗ ಸೆ 30: ಭಾವಸಾರ ಸಮುದಾಯದ ವಧು-ವರರ ವಿವಾಹಗಳನ್ನು ಬೆಂಬಲಿಸುವ ಸಲುವಾಗಿ ಭಾವಸಾರ ಲಗ್ನ ವೇದಿಕೆ ನಿನ್ನೆ ಶಿವಮೊಗ್ಗದ ಶುಭಮಂಗಳಸಮುದಾಯ ಭವನದಲ್ಲಿ ವದು-ವರ ಭೇಟಿಯ ಬೃಹುತ್ ಕಾರ್ಯಕ್ರಮವನ್ನು ಆಯೋಜಿಸಿತ್ತು.

ಈ ಕಾರ್ಯಕ್ರಮವನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾದ ಶ್ರೀ ಕೆ ಎಸ್ ಈಶ್ವರಪ್ಪ ಅವರು ದೀಪವನ್ನು ಬೆಳಗಿಸುವ ಮೂಲಕ ಉದ್ಘಾಟಿಸಿದರು. ಅವರ ಜೊತೆ ಲಗ್ನ ವೇದಿಕೆ ಪದಾಧಿಕಾರಿಗಳಾದ ಶ್ರೀ ಶಾಂತ ಕುಮಾರ್ ಸಕ್ರೆ (ಗೌರವಾನ್ವಿತ ಅಧ್ಯಕ್ಷರು), ಶ್ರೀ ಅಶೋಕ್ ನವಾಲೆ (ಅಧ್ಯಕ್ಷರು), ಶ್ರೀ ಸೂರ್ಯಕಾಂತ ರಾವ್ ದೋಯಿಜೋಡೆ (ಉಪಾಧ್ಯಕ್ಷರು),
ಶ್ರೀ ಶಿವಪ್ರಕಾಶ್ (ಖಜಾಂಚಿ), ಮತ್ತು ಭಾವಸಾರ ಸಮುದಾಯದ ಇನ್ನಿತರ ಸಂಘಗಳ ಮತ್ತು ಮಹಿಳಾ ಭಜನಾ ಮಂಡಳಿಗಳ ಪದಾಧಿಕಾರಿಗಳು ಪಾಲ್ಗೊಂಡಿದ್ದರು

ಕಾರ್ಯಕ್ರಮದಲ್ಲಿ ಮಾತನಾಡಿದ ಶ್ರೀ ಈಶ್ವರಪ್ಪ ಅವರು “ಮದುವೆ ಮಾಡಿ ನೋಡು, ಮನೆ ಕಟ್ಟಿ ನೋಡು ಅನ್ನೋ ನಾಣ್ನುಡಿ ಇವತ್ತಿಗೂ ಮಾನ್ಯ ಹೊಂದುತ್ತದೆ. ಸಾಮಾನ್ಯವಾಗಿ ಮದುವೆ ಚಟುವಟಿಕೆಗಳು ಪೋಷಕರಿಗೆ ಒತ್ತಡವನ್ನುಂಟು ಮಾಡುತ್ತದೆ. ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುವುದರ ಮೂಲಕ ಒತ್ತಡವನ್ನು ಕಡಿಮೆಗೊಳಿಸುವುದಲ್ಲದೆ, ಸಮುದಾಯದ ಬಾಂಧವ್ಯವನ್ನು ಹೆಚ್ಚಿಸುತ್ತದೆ” ಎಂದು ಭಾವಸಾರ ಲಗ್ನ ವೇದಿಕೆಯ ಕಾರ್ಯವನ್ನು ಶ್ಲಾಘಿಸಿದರು.

“ಮದುವೆಯ ಸಂಧರ್ಭವನ್ನು ಪೋಷಕರು ಒತ್ತಡಕ್ಕೆ ಮತ್ತು ಆತಂಕದಿಂದ ಒಳಗಾಗುವ ಬದಲು ಅದನ್ನು ಆನಂದಿಸಿ ಸಂಭ್ರಮಿಸಬೇಕು. ಆದ್ದರಿಂದ ಮದುವೆ ಮಿತ್ರವು (ಮ್ಯಾರೇಜ್ ಮಿತ್ರ) ಎಲ್ಲಾ ವಿವಾಹದ ಅಗತ್ಯಗಳಿಗೆ ಒಂದು ನಿಲುಗಡೆ ಪರಿಹಾರವನ್ನು ಒದಗಿಸುತ್ತದೆ. ನಾವು ಸಂಪರ್ಕದ ಏಕೈಕ ಬಿಂದುವಾಗಿ ನಿಮ್ಮ ಒತ್ತಡವನ್ನು ನಾವು ತೆಗೆದುಕೊಳ್ಳುತ್ತೇವೆ” ಎಂದು ವಾರ್ತಾ ಮಿತ್ರದ ಸಂಪಾದಕರಾದ ಶ್ರೀ ಸತೀಶ್ ಕೊಟಾರವರು ತಿಳಿಸಿದರು.

ಈ ಕಾರ್ಯಕ್ರಮವು 1750 ಕ್ಕಿಂತಲೂ ಹೆಚ್ಚು ನೋಂದಣಿಗಳನ್ನು ಕಂಡಿತು. ವದು-ವರರ ಪ್ರೊಫೈಲ್‌ ಮತ್ತು ಜಾತಕಗಳನ್ನು, ಶಿಕ್ಷಣ ಮತ್ತು ಉದ್ಯೋಗದಿಂದ ವರ್ಗೀಕರಿಸುವ ಮೂಲಕ ಅತ್ಯಂತ ವಿಶಿಷ್ಟ ರೀತಿಯಲ್ಲಿ ಆಯೋಜಿಸಲಾಗಿತ್ತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ