
ಬೀಜಿಂಗ್, ಸೆ.30-ಪೂರ್ವ ಚೀನಾದ ಕಾರ್ಖಾನೆಯೊಂದರಲ್ಲಿ ಸಂಭವಿಸಿದ ಬೆಂಕಿ ದುರಂತದಲ್ಲಿ 21 ಮಂದಿ ಮೃತಪಟ್ಟು, ಅನೇಕರು ತೀವ್ರ ಗಾಯಗೊಂಡಿದ್ದಾರೆ.
ಈ ದುರ್ಘಟನೆಯಿಂದ ಎಂಟು ಕಾರ್ಮಿಕರನ್ನು ರಕ್ಷಿಸಲಾಗಿದೆ. ಗಾಯಾಳುಗಳಲ್ಲಿ ಮೂವರ ಸ್ಥಿತಿ ಶೋಚನೀಯವಾಗಿದ್ದು ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಆತಂಕವಿದೆ.
ಚೀನಾದ ಕೈಗಾರಿಕಾ ವಲಯಗಳಲ್ಲಿ ಇಂತಹ ದುರಂತಗಳು ಮರು ಕಳಿಸುತ್ತಲೇ ಇದೆ. ಝೆಜಿಯಾಂಗ್ ಪ್ರಾಂತ್ಯದ ನಿಂಗೈ ಗ್ರಾಮದ ಕಾರ್ಖಾನೆಯೊಂದರಲ್ಲಿ ನಿನ್ನೆ ಈ ದುರ್ಘಟನೆ ಸಂಭವಿಸಿದೆ. ಇದು ರುಯಿಕಿ ಡೈಲಿ ನೆಸೆಸ್ಸಿಟೀಸ್ ಕಂಪನಿ ಒಡೆತನದ ಸಂಸ್ಥೆ.
ಅಗ್ನಿ ದುರಂತ ಘಟನೆ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ. ಎಂಟು ಗಾಯಾಳುಗಳಲ್ಲಿ ಮೂವರ ಸ್ಥಿತಿ ಗಂಭೀರವಾಗಿದ್ದು, ಚಿಕಿತ್ಸೆ ಮುಂದುವರಿಸಲಾಗಿದೆ.
ಕಮ್ಯೂನಿಸ್ಟ್ ನಾಯಕತ್ವದ ಚೀನಾ ನಾಳೆ 70ನೆ ವರ್ಷಾಚರಣೆ ಸಂಭ್ರಮದಲ್ಲಿರುವಾಗಲೇ ಇದು ದುರಂತ ವಾರಾಂತ್ಯದ ಕಹಿ ಘಟನೆಗೆ ಕಾರಣವಾಗಿದೆ.