ಹಿರಿಯ ನಟ ವಿಜು ಖೋಟೆ ನಿಧನ

ಮುಂಬೈ, ಸೆ.30- ಹಿಂದಿ ಚಿತ್ರರಂಗದ ಹಿರಿಯ ನಟ ವಿಜು ಖೋಟೆ ಇನ್ನಿಲ್ಲ. ಕೆಲಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಇಂದು ಬೆಳಗ್ಗೆ ಕೊನೆಯುಸಿರೆಳೆದರು.

ಬಾಲಿವುಡ್‍ನ ಸರ್ವಕಾಲಿಕ ಶ್ರೇಷ್ಠ ಚಿತ್ರವೆಂದೇ ಪರಿಗಣಿತವಾದ ಶೋಲೆ ಸಿನಿಮಾದಲ್ಲಿ ಗಬ್ಬರ್‍ಸಿಂಗ್ ಜೊತೆ ಕಾಲಿಯಾ ಎಂಬ ಡಕಾಯತನ ಪ್ರಾತದಲ್ಲಿ ವಿಜು ಕೋಟೆ ಗಮನಸೆಳೆದಿದ್ದರು.

ಇವರನ್ನು ಕುರಿತು ಗಬ್ಬರ್‍ಸಿಂಗ್ (ಅಮ್ಜದ್‍ಖಾನ್) ಹೇಳುವ ಡೈಲಾಗ್ ಈಗಲೂ ಪ್ರಸಿದ್ಧ. ಬಾಲಿವುಡ್‍ನ ಬಹುತೇಕ ಎಲ್ಲ ನಟರೊಂದಿಗೆ ನಟಿಸಿರುವ ಇವರು 300ಕ್ಕೂ ಹೆಚ್ಚು ಚಿತ್ರದಲ್ಲಿ ಅಭಿನಯಿಸಿದ್ದಾರೆ.

ವಿಜು ಖೋಟೆ ನಿಧನಕ್ಕೆ ಹಿರಿಯ ನಟರಾದ ಅಮಿತಾಬ್ ಬಚನ್, ಧರ್ಮೇಂದ್ರ ಸೇರಿದಂತೆ ಅನೇಕ ನಟ ಸಂತಾಪ ಸೂಚಿಸಿದ್ದಾರೆ

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ