ನ್ಯೂಯಾರ್ಕ್: “ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವವು ನನ್ನ ಸರ್ಕಾರ ಮತ್ತು ನನಗೆ ಮತ ಹಾಕಿದೆ. ನಾವು ಹೆಚ್ಚಿನ ಬಹುಮತದೊಂದಿಗೆ ಮತ್ತೆ ಅಧಿಕಾರಕ್ಕೆ ಬಂದೆವು ಮತ್ತು ಆ ಜನಾದೇಶದಿಂದಾಗಿ ನಾನು ಇಂದು ಇಲ್ಲಿದ್ದೇನೆಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.
ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, “ನಾನು ಇಲ್ಲಿಗೆ ಬರುತ್ತಿರುವಾಗ, ನಾನು ವಿಶ್ವಸಂಸ್ಥೆಯ ಗೋಡೆಗಳ ಮೇಲೆ ಇನ್ನು ಮುಂದೆ ಏಕಬಳಕೆಯ ಪ್ಲ್ಯಾಸ್ಟಿಕ್ ಬಳಕೆ ಇಲ್ಲ ಎಂದು ಓದಿದೆ.ಏಕ ಬಳಕೆಯ ಪ್ಲಾಸ್ಟಿಕ್ ಮುಕ್ತವಾಗಿಸಲು ನಾವು ಭಾರತದಲ್ಲಿ ದೊಡ್ಡ ಅಭಿಯಾನವನ್ನು ನಡೆಸುತ್ತಿದ್ದೇವೆ ಎಂದು ನಿಮಗೆ ತಿಳಿಸಲು ನನಗೆ ಸಂತೋಷವಾಗಿದೆ.”
“ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರ ವಿಶ್ವದ ಅತಿದೊಡ್ಡ ನೈರ್ಮಲ್ಯ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿದ್ದು ಕೇವಲ ಐದು ವರ್ಷಗಳಲ್ಲಿ 11 ಕೋಟಿ ಶೌಚಾಲಯಗಳನ್ನು ನಿರ್ಮಿಸಿದ್ದೇವೆ. , ಅದು ಜಗತ್ತಿಗೆ ಸ್ಫೂರ್ತಿ ಸಂದೇಶವನ್ನು ರವಾನಿಸುತ್ತದೆ. ವಿಶ್ವದ ಆರೋಗ್ಯ ಭರವಸೆ ಯೋಜನೆಡಿ 50 ಕೋಟಿ ಜನರನ್ನು ಒಳಗೊಂಡಿದ್ದು ಅದು ಜಗತ್ತಿಗೆ ಹೊಸ ದಿಕ್ಕನ್ನು ತೋರಿಸುತ್ತದೆ ವಿಶ್ವದ ಅತಿದೊಡ್ಡ ಆರ್ಥಿಕ ಸೇರ್ಪಡೆ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿದ್ದು ಅದು ವಿಶ್ವದ ಎಲ್ಲ ಬಡವರಿಗೆ ಭರವಸೆ ಮೂಡಿಸುತ್ತದೆ. ವಿಶ್ವದ ಅತಿದೊಡ್ಡ ಡಿಜಿಟಲ್ ಗುರುತಿನ ಕಾರ್ಯಕ್ರಮವನ್ನು ನಡೆಸುತ್ತಿದ್ದು ಅವರ ಹಕ್ಕುಗಳನ್ನು ಖಾತ್ರಿಪಡಿಸಿದ್ದಾರೆ. ಇದಲ್ಲದೆ ಈ ಜನವರ್ಗ ಇದುವರೆಗೆ ಸುಮಾರು 20 ಬಿಲಿಯನ್ ರು. ಉಳಿತಾಯ ಂಆಡಿದೆ.ಅದು ಜಗತ್ತಿಗೆ ಹೊಸ ಭರವಸೆಯನ್ನು ನೀಡುತ್ತದೆ
“ನಾವು ಬೃಹತ್ ನೀರಿನ ಸಂರಕ್ಷಣಾ ಅಭಿಯಾನವನ್ನು ನಡೆಸುತ್ತಿದ್ದೇವೆ. 2022 ರಲ್ಲಿ, ಭಾರತವು 75ನೇ ಸ್ವಾತಂತ್ರ ದಿನಾಚರಣೆ ಆಚರಿಸುವ ವೇಳೆ ನಾವು ಬಡವರಿಗೆ 2 ಕೋಟಿ ಮನೆಗಳನ್ನು ನಿರ್ಮಿಸುತ್ತೇವೆ
“ನಾವು ಇದನ್ನು ಹೇಗೆ ಮಾಡಲು ಸಾಧ್ಯವಾಗುತ್ತದೆ? ಭಾರತ ಎಷ್ಟು ವೇಗವಾಗಿ ಬದಲಾಗುತ್ತಿದೆ? ಭಾರತವು ಸಾವಿರಾರು ವರ್ಷಗಳಷ್ಟು ಹಳೆಯ ನಾಗರಿಕತೆ ಹೊಂದಿದ ರಾಷ್ಟ್ರ. . ನಾವು ಕೆಲಸ ಮಾಡುತ್ತಿರುವುದು ನಮ್ಮ ಜನರ ಕಲ್ಯಾಣಕ್ಕಾಗಿ ಮಾತ್ರವಲ್ಲ, ವಿಶ್ವದ ಕಲ್ಯಾಣಕ್ಕಾಗಿ ಕೆಲಸ ಮಾಡುತ್ತಿದ್ದೇವೆ. ಅದಕ್ಕಾಗಿಯೇ ನಮ್ಮ ಧ್ಯೇಯವಾಕ್ಯ ಸಬ್ಕಾ ಸಾಥ್, ಸಬ್ಕಾ ವಿಕಾಸ್, ಸಬ್ಕಾ ವಿಶ್ವಾಸ್
“ನಾವು ಕೆಲಸ ಮಾಡುತ್ತಿದ್ದೇವೆ. ಇದರ ಪ್ರಯತ್ನಗಳು ನಮ್ಮದಾಗಬಹುದು ಆದರೆ ಫಲಿತಾಂಶಗಳು ಇಡೀ ಜಗತ್ತಿಗೆ ಸಿಗುತ್ತಿದೆ. ಇತರ ಅಭಿವೃದ್ಧಿಶೀಲ ರಾಷ್ಟ್ರಗಳು ನಮ್ಮಿಂದ ಕಲಿಯುತ್ತಿವೆ. ಇದು ನನ್ನ ದೇಶದ ಪ್ರಗತಿಗೆ ಹೆಚ್ಚು ಕೆಲಸ ಮಾಡುವ ಸಂಕಲ್ಪವನ್ನು ಬಲಪಡಿಸುತ್ತದೆ”