ಬೀದರ್ : ಅಧ್ಯಕ್ಷರಾಗಿ ಸಂಧ್ಯಾರಾಣಿ ರಾಮ, ಸದಸ್ಯರಾಗಿ ರಾಜಶೇಖರ ಬಸವಣಪ್ಪಾ, ಜಯಶ್ರೀ ಜೈಸಿಂಗ್ ರಾಠೋಡ್, ರೇಖಾಬಾಯಿ ನೀಲಕಂಠ, ಅಂಬಾದಾಸ ಮನೋಹರ ಕೋರೆ, ಸುಧೀರಕುಮಾರ ಪ್ರೇಮಸಾಗರ ಕಾಡಾದಿ ಹಾಗೂ ಆನಂದ ವಿಠಲರಾವ ಅವರು ಆಯ್ಕೆಯಾದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗ್ಯಾನೇಂದ್ರಕುಮಾರ ಗಂಗವಾರ ಅವರು ಚುನಾವಣಾಧಿಕಾರಿಗಳಾಗಿ ಹಾಗೂ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಸೂರ್ಯಕಾತ.ಎಸ್ ಅವರು ಸಹಾಯಕ ಚುನಾವಣಾಧಿಕಾರಿಗಳಾದ ಕಾರ್ಯ ನಿರ್ವಹಿಸಿದ್ದರು. ಮುಖ್ಯ ಯೋಜನಾಧಿಕಾರಿ ಕಿಶೋರಕುಮಾರ ಇದ್ದರು.
ಅಭಿನಂದನೆ: ಚುನಾವಣೆ ಪ್ರಕ್ರಿಯೆ ಮುಗಿದ ಬಳಿಕ ವಿವಿಧ ಸ್ಥಾಯಿ ಸಮಿತಿಗಳಿಗೆ ಆಯ್ಕೆಯಾದ ಅಧ್ಯಕ್ಷರು ಮತ್ತು ಸದಸ್ಯರಿಗೆ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಗೀತಾ ಪಂಡಿತರಾವ್ ಚಿದ್ರಿ ಹಾಗೂ ಉಪಾಧ್ಯಕ್ಷರಾದ ಲಕ್ಷ್ಮಣ ಈಶ್ವರ ಬುಳ್ಳಾ ಅವರು ಶಾಲು ಹೊದಿಸಿ, ಹೂಗುಚ್ಚ ನೀಡಿ ಅಭಿನಂದನೆ ಸಲ್ಲಿಸಿದರು.