ಚಿತ್ರದುರ್ಗ: ರಕ್ಷಣಾ ಸಂಶೋಧನೆ ಅಭಿವೃದ್ಧಿ ಸಂಸ್ಥೆ (DRDO) ಯ ಪರೀಕ್ಷಾರ್ಥ ಗಗನಕ್ಕೆ ಹಾರಿಸಿದ್ದ ಚಾಲಕ ರಹಿತ ಡ್ರೋನ್ (ರುಸ್ತುಂ) ಮಾದರಿಯ ವಿಮಾನ ನಿಯಂತ್ರಣ ಕಳೆದುಕೊಂಡು ಪತನವಾಗಿರುವ ಘಟನೆ ಚಿತ್ರದುರ್ಗ ಜಿಲ್ಲಿಯಲ್ಲಿ ನಡೆದಿದೆ.
ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ಕುದಾಪುರ ಬಳಿ ಇರುವ ಭಾರತ ರಕ್ಷಣಾ ಸಂಸ್ಥೆಯ DRDO ಇಂದು ಮುಂಜಾನೆ ತಪಸ್ -04 ಎಡಿಇ ಹೆಸರಿನ ಮಾನವ ರಹಿತ ವಿಮಾನವನ್ನ ಪರಿಕ್ಷಾರ್ಥಕ್ಕಾಗಿ ಗಗನಕ್ಕೆ ಹಾರಿಸಲಾಗಿತ್ತು. ಹೀಗೆ ಗಗನಕ್ಕೆ ಹಾರಿದ್ದ ಚಾಲಕ ರಹಿತ ತಪಸ್ -04 ಎಡಿಇ ತಾಲ್ಲೂಕಿನ ಜೋಡಿ ಚಿಕ್ಕೇನಹಳ್ಳಿ ಗ್ರಾಮದ ಬಳಿ ನಿಯಂತ್ರಣ ಕಳೆದುಕೊಂಡು ಪತನಗೊಂಡಿದೆ ಎನ್ನಲಾಗಿದೆ. ನಂತರ ಗ್ರಾಮದ ಮಂಜುನಾಥ್ ಎಂಬುವವರ ಅಡಿಕೆ ತೋಟದ ಜಮೀನಿನಲ್ಲಿ ನೆಲಕ್ಕೆ ಅಪ್ಪಳಿಸಿದೆ.
ವಿಮಾನ ಹಾರಾಟದ ದೃಷ್ಯವನ್ನ ನೋಡುತ್ತಿದ್ದ ಗ್ರಾಮಸ್ಥರು ಮೊಬೈಲ್ಗಳಲ್ಲಿ ವೀಡಿಯೋ ಮಾಡಿದ್ದು, ವಿಮಾನ ನಿಯಂತ್ರಣ ತಪ್ಪಿ ಪತನವಾಗುತ್ತಿರುವ ದೃಷ್ಯ ಮೊಬೈಲ್ ವೀಡಿಯೋದಲ್ಲಿ ಸೆರೆಯಾಗಿದೆ. ಇನ್ನೂ ವಿಮಾನ ಪತನವಾಗುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿ ನೋಡಿದ ಗ್ರಾಮಸ್ಥರು ವಿಮಾನದ ಬಳಿ ಹೋಗಲು ಹಿಂದೇಟು ಹಾಕಿದ್ದರು.
ಬಳಿಕ ಅದರಲ್ಲಿ ಯಾರೂ ಇಲ್ಲ, ಇದೊಂದು ಚಾಲಕ ರಹಿತ ಪರಿಕ್ಷಾರ್ಥದ ವಿಮಾನ ಎಂದು ತಿಳಿದ ಗ್ರಾಮಸ್ಥರು ಆತಂಕದಿಂದ ದೂರಾಗಿದ್ದಾರೆ. ಇನ್ನೂ ಕೆಲ ಯುವಕರು ಅದರ ಮೇಲೆಲ್ಲ ಅತ್ತಿ ಕುಣಿದಾಡಿದ್ದಲ್ಲದೆ, ಸೆಲ್ಫಿ ಫೋಟೋ ವೀಡಿಯೋ ಮಾಡಿಕೊಂಡು ಖುಷಿಪಟ್ಟಿದ್ದಾರೆ. ಸ್ಥಳಕ್ಕೆ ಜಿಲ್ಲಾ ರಕ್ಷಣಾಧಿಕಾರಿ ಡಾ. ಕೆ ಅರುಣ್ ತಂಡ ಹಾಗೂ ವಿಜ್ಞಾನಿಗಳ ತಂಡ ಬೇಟಿ ನೀಡಿರುವುದಾಗಿ ಮಾಹಿತಿ ನೀಡಿದ್ದಾರೆ.
ಏನಿದು ರುಸ್ತುಂ: ನೌಕಾಸೇನೆಗೆ ಬಳಸುವ ರುಸ್ತು-2 ಮಾನವ ರಹಿತ ಡ್ರೋನ್. ಸ್ವಯಂ ಚಾಲಿತ ಗುರುತಿಸುವಿಕೆ ವ್ಯವಸ್ಥೆ (ಎಐಎಸ್) ಇದರ ವಿಶೇಷವಾಗಿದೆ.
ಇದೀಗ ಕರಾವಳಿಯಲ್ಲಿ ಇಸ್ರೆಲ್ ನಿರ್ಮಿತ ಡ್ರೋನ್ ಬಳಸಲಾಗುತ್ತಿದೆ. ಇವು ತಮಿಳುನಾಡಿನ ಕರಾವಳಿ ತೀರದಿಂದ ಕಾರ್ಯ ನಿರ್ವಹಿಸುತ್ತಿವೆ. ಈ ಡ್ರೋನ್‌ಗಳು ಭಾರತೀಯ, ವಿದೇಶಿ ದೋಣಿಗಳ ಪ್ರತ್ಯೇಕ ಗುರುತಿಸುತ್ತಿಲ್ಲ. I ಈ ಡ್ರೋನ್ ಬಳಸುವುದರಿಂದ ಯಾವುದೇ ಭಾರತೀಯ ದೋಣಿ ಅಥವಾ ವಿದೇಶಿ ದೋಣಿ ಪರಸ್ಪರ ಜಲ ಗಡಿಯನ್ನು ಪ್ರವೇಶಿಸಿದರೆ, ತಕ್ಷ ಣ ಇದು ಕರಾವಳಿಯಲ್ಲಿರುವ ನೌಕಾ ಸೇನೆಯ ಕೇಂದ್ರಕ್ಕೆ ಎಚ್ಚರಿಕೆ ರವಾನಿಸುತ್ತವೆ.