69ನೇ ವರ್ಷಕ್ಕೆ ಕಾಲಿಟ್ಟ ಮೋದಿ; ಅಮ್ಮನ ಆಶೀರ್ವಾದ ಪಡೆಯಲು ತವರಿಗೆ ತೆರಳಿದ ಪ್ರಧಾನಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಇಂದು (ಸೆ.17) 69ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಗಣ್ಯರು, ವಿಪಕ್ಷದವರು ಹಾಗೂ ಹಿಂಬಾಲಕರು ಪ್ರಧಾನಿಗೆ ಶುಭಾಶಯ ತಿಳಿಸಿದ್ದಾರೆ.

ಇಂದು ಪ್ರಧಾನಿ ತಾಯಿಯ ಬಳಿ ತೆರಳಿ ಆಶೀರ್ವಾದ ಪಡೆದುಕೊಳ್ಳಲಿದ್ದಾರೆ. ಅವರು ಗುಜರಾತ್​ನ ಗಾಂಧೀನಗರಕ್ಕೆ ನಿನ್ನೆ ರಾತ್ರಿಯೇ ಬಂದಿಳಿದಿದ್ದರು. ತಾಯಿ ಭೇಟಿಯಾದ ನಂತರ ಕೆವಾಡಿಯಾದಲ್ಲಿ ನರ್ಮದಾ ನದಿಗೆ ಕಟ್ಟಲಾದ ಸರ್ದಾರ್​ ಸರೋವರ ಡ್ಯಾಮ್​ಗೆ ಮೋದಿ ತೆರಳಲಿದ್ದಾರೆ. ಇಲ್ಲಿ ಸರ್ದಾರ್​ ವಲ್ಲಭಾಯಿ ಪಟೇಲ್​ ಜನ್ಮದ ದಿನದ ಅಂಗವಾಗಿ ಅಕ್ಟೋಬರ್​ ತಿಂಗಳಲ್ಲಿ ಅವರ ಪುತ್ಥಳಿ ನಿರ್ಮಾಣ ಮಾಡಲಾಗಿತ್ತು.

ಇಲ್ಲಿಗೆ ಭೇಟಿ ನೀಡಿದ ನಂತರ ಮೋದಿ ನರ್ಮದಾ ನದಿಗೆ ಪೂಜೆ ಸಲ್ಲಿಸುವ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಅಲ್ಲದೆ, ಕೆವಾಡಿಯಾದಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮೋದಿ ಮಾತನಾಡಲಿದ್ದಾರೆ. ಟ್ವಿಟ್ಟರ್​ನಲ್ಲಿ ಪ್ರಧಾನಿ ಮೋದಿಗೆ ಶುಭಾಶಯಗಳ ಸುರಿಮಳೆಯೇ ಹರಿದು ಬಂದಿದೆ.

#HappyBirthdayNarendraModi ಹಾಗೂ #HappyBdayPMModi ಹ್ಯಾಶ್​ಟ್ಯಾಗ್​ಗಳು ಟ್ರೆಂಡಿಂಗ್​ನಲ್ಲಿವೆ. ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ, ಸಚಿವ ಪ್ರಕಾಶ್​ ಜಾವ್ಡೇಕರ್​ ಸೇರಿ ಅನೇಕರು, ವಿಪಕ್ಷ ನಾಯಕರು ಪ್ರಧಾನಿಗೆ ಜನ್ಮದಿನದ ಶುಭಾಶಯ ಕೋರಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ