ಪುಲ್ವಾಮ ದಾಳಿಯ ಸೂತ್ರದಾರ ಮಸೂದ್​ ಅಜರ್​ ಬಿಡುಗಡೆ; ಭಾರತ ವಿರುದ್ಧ ಪಾಕ್​ ಸಂಚು?

ನವದೆಹಲಿ: ಜೈಷ್​-ಎ-ಮೊಹಮ್ಮದ್​ ಮುಖ್ಯಸ್ಥ ಮೌಲಾನಾ ಮಸೂದ್​ ಅಜರ್​ನನ್ನು ಪಾಕಿಸ್ತಾನ ಬಿಡುಗಡೆ ಮಾಡಿದೆ ಎಂಬ ಮಾಹಿತಿ ಮೂಲಗಳಿಂದ ಕೇಳಿ ಬರುತ್ತಿವೆ. ಕಾಶ್ಮೀರಕ್ಕೆ 370ನೇ ವಿಧಿಯ ಅನ್ವಯ ನೀಡಲಾಗಿದ್ದ ವಿಶೇಷ ಸವಲತ್ತನ್ನು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಹಿಂಪಡೆದ ನಂತರ ಭಾರತ – ಪಾಕಿಸ್ತಾನದ ನಡುವಿನ ಕಂದಕ ಇನ್ನಷ್ಟು ಹಿರಿದಾಗಿದೆ. ಈ ಕಾರಣಕ್ಕಾಗಿಯೇ ಪಾಕಿಸ್ತಾನ ಮಸೂದ್​ನನ್ನು ಬಂಧಮುಕ್ತ ಗೊಳಿಸಿದೆ ಎನ್ನಲಾಗಿದೆ. 

ಮಸೂದ್​ ಅಜರ್​ನನ್ನು 2019ರ ಮೇ ತಿಂಗಳಲ್ಲಿ ಜಾಗತಿಕ ಉಗ್ರ ಎಂದು ವಿಶ್ವಸಂಸ್ಥೆಯಲ್ಲಿ ಘೋಷಿಸಲಾಗಿತ್ತು. ಪಾಕಿಸ್ತಾನ ಪ್ರಧಾನಿ ಇಮ್ರಾನ್​ ಖಾನ್​ ಭಾರತದ ಜತೆ ಉತ್ತಮ ಸಂಬಂಧ ವೃದ್ಧಿಪಡಿಸುವ ನಿಟ್ಟಿನಲ್ಲಿ ಉಗ್ರ ಚಟುವಟಿಕೆಯಲ್ಲಿ ಪಾಲ್ಗೊಳ್ಳುವವರ ವಿರುದ್ಧ ಪಾಕಿಸ್ತಾನ ಕ್ರಮ ತೆಗೆದುಕೊಳ್ಳುತ್ತಿದೆ ಎಂದಿದ್ದರು. ಆದರೆ ಈಗ ಸದ್ದಿಲ್ಲದೇ ಅಜರ್​ನನ್ನು ಬಿಡುಗಡೆ ಮಾಡಿರುವುದರ ಹಿಂದೆ ಹಲವು ಅನುಮಾನಗಳು ಸೃಷ್ಟಿಯಾಗಿವೆ.

ಹಿಂದೂಸ್ತಾನ್​ ಟೈಮ್ಸ್​ ವರದಿಯ ಪ್ರಕಾರ, ಭಾರತದಲ್ಲಿ ಮತ್ತೊಂದು ಉಗ್ರ ಚಟುವಟಿಕೆ ನಡೆಸಲು ಪಾಕಿಸ್ತಾನ ಹುನ್ನಾರ ಮಾಡುತ್ತಿದ್ದು, ಅದರ ಭಾಗವಾಗಿ ಮಸೂದ್​​ ಬಿಡುಗಡೆ ಮಾಡಲಾಗಿದೆ.

ಇತ್ತೀಚೆಗಷ್ಟೇ ಭಾರತೀಯ ನೌಕಾದಳ ಗುಪ್ತಚರ ಮಾಹಿತಿಯೊಂದನ್ನು ಬಹಿರಂಗಪಡಿಸಿತ್ತು. ಜೈಷ್​-ಎ-ಮೊಹಮ್ಮದ್​ ಭಾರತದ ಮೇಲೆ ದಾಳಿ ನಡೆಸಲು ಕೆಲ ಉಗ್ರರಿಗೆ ‘ಅಂಡರ್​ ವಾಟರ್​’ ತರಬೇತಿ ನೀಡುತ್ತಿದೆ ಎಂದು ನೌಕಾದಳ ಹೇಳಿತ್ತು. ಈ ಬಗ್ಗೆ ಮಾತನಾಡಿದ್ದ ನೌಕಾದಳದ ಮುಖ್ಯಸ್ಥ ಅಡ್ಮಿರಲ್​ ಕರಂಬಿರ್​ ಸಿಂಗ್​, ಕರಾವಳಿ ರಕ್ಷಣಾ ಪಡೆಗಳು ಯಾವುದೇ ಉಗ್ರರನ್ನು ಭಾರತದೊಳಗೆ ನುಸುಳಲು ಬಿಡುವುದಿಲ್ಲ. ಸೂಕ್ತ ಕ್ರಮ ಈಗಾಗಲೇ ತೆಗೆದುಕೊಂಡಿದ್ದೇವೆ ಎಂದಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ