ನಾಳೆ ನಾಡಪ್ರಭು ಕೆಂಪೇಗೌಡ ದಿನಾಚರಣೆ

ಬೆಂಗಳೂರು, ಸೆ.3- ಅನಿವಾರ್ಯ ಕಾರಣಗಳಿಂದ ಮುಂದೂಡಲ್ಪಟ್ಟಿದ್ದ ನಾಡಪ್ರಭು ಕೆಂಪೇಗೌಡ ದಿನಾಚರಣೆಯನ್ನು ನಾಳೆ ಆಚರಿಸಲು ಬಿಬಿಎಂಪಿ ತೀರ್ಮಾನಿಸಿದ್ದು, ಈ ಬಾರಿ ಕೇವಲ 70 ಸಾಧಕರಿಗಷ್ಟೆ ಕೆಂಪೇಗೌಡ ಪ್ರಶಸ್ತಿ ನೀಡಲು ನಿರ್ಧರಿಸಿದೆ.

ನಿವೃತ್ತ ನ್ಯಾಯಮೂರ್ತಿ ಎ.ಜೆ.ಸದಾಶಿವ ನೇತೃತ್ವದ ಸಮಿತಿ ಈಗಾಗಲೇ ಪ್ರಶಸ್ತಿ ಪುರಸ್ಕøತರ ಆಯ್ಕೆಪಟ್ಟಿ ಸಿದ್ಧಪಡಿಸಿದ್ದು, ನಾಳೆ ಸಂಜೆ ಪಾಲಿಕೆಯ ಗಾಜಿನ ಮನೆಯಲ್ಲಿ ನಡೆಯಲಿರುವ ಸಮಾರಂಭದಲ್ಲಿ ಪುರಸ್ಕøತರಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

50 ಸಾವಿರ ನಗದು ಬಹುಮಾನ ಹಾಗೂ ಕೆಂಪೇಗೌಡರ ಸ್ಮರಣಿಕೆಯನ್ನು ಪುರಸ್ಕøತರಿಗೆ ನೀಡಲಾಗುತ್ತಿದ್ದು, ಇದೇ ಸಂದರ್ಭದಲ್ಲಿ ಕೆಂಪೇಗೌಡರ ಸೊಸೆ ಲಕ್ಷ್ಮಿದೇವಮ್ಮ ಸ್ಮರಣಾರ್ಥ 10 ಮಹಿಳಾ ಸಾಧಕಿಯರಿಗೆ ಪ್ರಶಸ್ತಿ ಹಾಗೂ 25 ಸಾವಿರ ನಗದು ನೀಡಲಾಗುತ್ತಿದೆ.

ಐದು ಮಂದಿ ಸಾಧಕರಿಗೆ ಸಿದ್ಧಗಂಗಾ ಶ್ರೀಗಳ ಹೆಸರಿನಲ್ಲಿ ಪ್ರಶಸ್ತಿ ನೀಡಲಿದ್ದು, 25 ಸಾವಿರ ನಗದು ಹಾಗೂ ಸ್ಮರಣಿಕೆ ಒಳಗೊಂಡಿರುತ್ತದೆ.
ಚಂದ್ರಶೇಖರ ಪಾಟೀಲ್ (ಚಂಪಾ) (ಕನ್ನಡ ಸೇವೆ), ಲೀಲಾವತಿ (ಚಲನಚಿತ್ರ), ಮುಖ್ಯಮಂತ್ರಿಚಂದ್ರು (ಚಲನಚಿತ್ರ), ಪ್ರೋ.ಶಿವರಾಮಯ್ಯ (ಸಾಹಿತ್ಯ), ದೇವನಾಥ್ (ಮಾಧ್ಯಮ), ಗೋವಿಂದರಾಜು ಟಿ. (ಸಾಂಸ್ಕøತಿಕ), ಗುರುರಾಜ್ ಕರ್ಜಗಿ (ಶಿಕ್ಷಣ), ಪ್ರತಿಭಾ ನಂದಕುಮಾರ್ (ಸಾಹಿತ್ಯ), ಕುಶಲ ಡಿಮೋಲೊ (ಮಾಧ್ಯಮ), ಲಕ್ಷ್ಮಣ್ (ಸಂಗೀತ), ಮಧುಲಿತ ಮಹಾಪಾತ್ರ (ನೃತ್ಯ), ಮಣಿ ಎನ್.ವಿ (ಶಿಕ್ಷಣ), ಮಂಜುಳಾ ಗುರುರಾಜ್ (ಸಂಗೀತ), ಮಂಜುಳಾ ಶಿವಾನಂದ್ (ಕನ್ನಡ ಸೇವೆ), ಮಂಜುಳಮ್ಮ (ರಂಗಭೂಮಿ), ಮಯ್ಯಾ ಬ್ರಹ್ಮಾಚಾರ್ (ರಂಗಭೂಮಿ), ಪೂರ್ಣಿಮಾ ಗುರುರಾಜ್ (ನೃತ್ಯ), ಪ್ರಕಾಶ್ ಅರಸ್ (ವಿವಿಧ), ಪ್ರಮೀಳಾ ಶಂಕರ್ (ವಿವಿಧ), ಕುಮಾರಿ ಪ್ರತ್ಯಕ್ಷ (ಬಾಲ ಪ್ರತಿಭೆ), ರಾ.ನಂ.ಚಂದ್ರಶೇಖರ್ (ಕನ್ನಡ ಸೇನೆ), ರಾಜಲಕ್ಷ್ಮಿ ಎಸ್. (ನೃತ್ಯ), ರತ್ನಂ ಆರ್. (ಚಲನಚಿತ್ರ), ಸದಾಶಿವಪ್ಪ (ಸಮಾಜಸೇವೆ), ಸಂಜಯ್ ಶಾಂತಾರಾಂ (ನೃತ್ಯ), ಶಾಂತರಾಮಮೂರ್ತಿ (ಕ್ರೀಡೆ), ಶಿವಾನಂದ್, ವೆಂಕಟರಮಣಪ್ಪ (ವೈದ್ಯಕೀಯ), ಸಿದ್ದರಾಮರಾವ್ (ವಿವಿಧ), ಆಲ್‍ಮಿತ್ರ ಪಟೇಲ್ (ಸಮಾಜಸೇವೆ), ಕೇಶವರೆಡ್ಡಿ ಅಂದ್ರಾಳ (ಸಾಹಿತ್ಯ), ಅಬ್ದುಲ್ ಬಷೀರ್ (ಸಾಹಿತ್ಯ), ಪ್ರೋ.ರವಿವರ್ಮಕುಮಾರ್ (ಸಮಾಜಸೇವೆ), ಮಾವಳ್ಳಿ ಶಂಕರ್ (ಸಮಾಜಸೇವೆ), ವೀರಸಂಗಯ್ಯ (ಸಮಾಜಸೇವೆ), ಸುಮಾ ಸುಧೀಂದ್ರ (ಸಂಗೀತ), ಕನಕಮೂರ್ತಿ (ಶಿಲ್ಪಕಲೆ), ಪ್ರೋ.ಡಿ.ಮಂಜಯ್ಯ (ಸಮಾಜಸೇವೆ), ಅನಿಲ್‍ಕುಮಾರ್ (ಚಿತ್ರಕಲೆ), ಆಂಜನಪ್ಪ (ರಂಗಭೂಮಿ), ಕು.ಬಿಂದುರಾಣಿ (ಕ್ರೀಡೆ), ಭೆರೇಗೌಡ ಎಸ್. (ಶಿಕ್ಷಣ), ಚಂದ್ರಕಲಾ ಗಂ. ಸಂಗಪ್ಪ ಆರಕೊಡೆ (ಸಾಂಸ್ಕøತಿಕ), ಚಿದಂಬರಂ ಎಸ್. (ಸಮಾಜಸೇವೆ), ಮೀನಾಕ್ಷಿ (ರಂಗಭೂಮಿ), ಕೇಶವರೆಡ್ಡಿ, ಹಿರಿಯ ಐಪಿಎಸ್ ಅಧಿಕಾರಿ ಡಾ.ರೂಪಾ ಹಾಗೂ ಗೌರಿ ಲಂಕೇಶ್ ಹತ್ಯೆ ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾದ ಡಿಸಿಪಿ ಅನುಚೇತ್ ಮತ್ತವರ ತಂಡಕ್ಕೆ ವಿಶೇಷವಾಗಿ 1 ಲಕ್ಷ ಸೇರಿದಂತೆ 70 ಸಾಧಕರಿಗೆ ಈ ಬಾರಿ ಪ್ರಶಸ್ತಿ ವಿತರಿಸಲಾಗುತ್ತಿದೆ.

ಐದು ದಿಕ್ಕುಗಳಿಂದ ಜ್ಯೋತಿ: ನಾಳೆ ಬೆಳಗ್ಗೆ ನಗರದ ನಾಲ್ಕು ದಿಕ್ಕುಗಳಲ್ಲಿರುವ ಗಡಿಗೋಪುರಗಳು ಹಾಗೂ ಮಾಗಡಿ ಸಮೀಪ ಪತ್ತೆಯಾಗಿರುವ ಕೆಂಪೇಗೌಡರ ಸಮಾಧಿ ಸ್ಥಳದಿಂದ ನಾಡಪ್ರಭು ಕೆಂಪೇಗೌಡರ ಜ್ಯೋತಿ ಆಗಮಿಸಲಿದೆ.

ಮೇಯರ್ ಗಂಗಾಂಬಿಕೆ ಅವರು ಲಾಲ್‍ಬಾಗ್‍ನಲ್ಲಿರುವ ಗಡಿಗೋಪುರಕ್ಕೆ ಪೂಜೆ ಸಲ್ಲಿಸುವ ಮೂಲಕ ಕೆಂಪೇಗೌಡರ ಜ್ಯೋತಿಗೆ ಚಾಲನೆ ನೀಡಲಿದ್ದಾರೆ.
ಐದು ದಿಕ್ಕುಗಳಿಂದ ಆಗಮಿಸುವ ಜ್ಯೋತಿ ಸಾಗುವ ಮಾರ್ಗದುದ್ದಕ್ಕೂ ವಿವಿಧ ಜಾನಪದ ಕಲಾತಂಡಗಳು ಪಾಲ್ಗೊಳ್ಳುತ್ತಿವೆ.

ವಿವಿಧ ಜಾನಪದ ಕಲಾತಂಡಗಳೊಂದಿಗೆ ಆಗಮಿಸುವ ಜ್ಯೋತಿಯನ್ನು ಮೇಯರ್ ಗಂಗಾಂಬಿಕೆ ಅವರು ಪಾಲಿಕೆ ಕೇಂದ್ರ ಕಚೇರಿಯಲ್ಲಿ ಬರಮಾಡಿಕೊಳ್ಳುವ ಮೂಲಕ ಕೆಂಪೇಗೌಡ ದಿನಾಚರಣೆಗೆ ವಿದ್ಯುಕ್ತ ಚಾಲನೆ ನೀಡಲಾಗುವುದು.

ಕೇಂದ್ರ ಕಚೇರಿ ಮುಂಭಾಗವಿರುವ ನಾಡಪ್ರಭು ಕೆಂಪೇಗೌಡರ ಪ್ರತಿಮೆ ಹಾಗೂ ಲಕ್ಷ್ಮಿದೇವಮ್ಮ ಅವರ ಪುತ್ಥಳಿಗೆ ಪುಷ್ಪನಮನ ಸಲ್ಲಿಸಲಾಗುವುದು.

ದಿನಪೂರ್ತಿ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ನೆರವೇರಲಿದ್ದು, ಸಂಜೆ ನಡೆಯಲಿರುವ ಸಮಾರಂಭದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

ದಿಟ್ಟ ಕ್ರಮ: ಪ್ರತೀ ಬಾರಿ ನೂರಾರು ಮಂದಿಗೆ ಕೆಂಪೇಗೌಡ ಪ್ರಶಸ್ತಿ ನೀಡುತ್ತಿದ್ದರಿಂದ ಇಡೀ ಕಾರ್ಯಕ್ರಮ ಅವ್ಯವಸ್ಥೆಯಿಂದ ಕೂಡಿರುತ್ತಿತ್ತು.ಕಳೆದ ಬಾರಿ ಘೋಷಣೆ ಮಾಡಿದ್ದು ಕೇವಲ 300 ಪ್ರಶಸ್ತಿಯಾದರೂ ಅಂತಿಮವಾಗಿ 500ಕ್ಕೂ ಹೆಚ್ಚು ಮಂದಿಗೆ ಪ್ರಶಸ್ತಿ ನೀಡಿದ್ದರಿಂದ ಕೆಲ ಪುರಸ್ಕøತರು ಹಾಗೂ ಗಣ್ಯರು ಕೆಂಪೇಗೌಡ ಪ್ರಶಸ್ತಿ ವಿತರಣಾ ಕಾರ್ಯಕ್ರಮದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು.

ಹೀಗಾಗಿ ಭವಿಷ್ಯದಲ್ಲಿ ಅವ್ಯವಸ್ಥೆ ತಲೆದೋರಬಾರದು ಎಂಬ ಉದ್ದೇಶದಿಂದ ಪ್ರಶಸ್ತಿ ಪುರಸ್ಕøತರ ಆಯ್ಕೆಗೆ ಸಮಿತಿ ರಚನೆ ಮಾಡಲು ತೀರ್ಮಾನಿಸಲಾಗಿತ್ತು.

ನಿರೀಕ್ಷೆಯಂತೆ ಮೇಯರ್ ಗಂಗಾಂಬಿಕೆ ಅವರು ನಿವೃತ್ತ ನ್ಯಾಯಮೂರ್ತಿ ಎ.ಜೆ.ಸದಾಶಿವ ನೇತೃತ್ವದ ಸಮಿತಿ ರಚಿಸಿ ಈ ಬಾರಿ ಬಿಬಿಎಂಪಿ ರಚನೆಯಾಗಿ 70 ವರ್ಷ ಸಲ್ಲುತ್ತಿರುವ ಹಿನ್ನೆಲೆಯಲ್ಲಿ ಕೇವಲ 70 ಆಯ್ದ ಸಾಧಕರನ್ನು ಗುರುತಿಸುವಂತೆ ಸೂಚಿಸಿದ್ದರು.

500ಕ್ಕೂ ಹೆಚ್ಚು ಮಂದಿ ಸಲ್ಲಿಸಿದ್ದ ಅರ್ಜಿಗಳನ್ನು ಪರಿಶೀಲಿಸಿರುವ ಸದಾಶಿವ ನೇತೃತ್ವದ ಸಮಿತಿ 70 ಪ್ರಶಸ್ತಿ ಪುರಸ್ಕøತರನ್ನು ಆಯ್ಕೆ ಮಾಡುವಲ್ಲಿ ಯಶಸ್ವಿಯಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ