ಜನತೆಗೆ ಯಮರೂಪಿಯಾಗಿರುವ ಮೋಟಾರ್ ವಾಹನ ತೆರಿಗೆ-ವಾಟಾಳ್ ನಾಗರಾಜ್

ಬೆಂಗಳೂರು, ಸೆ.3- ಮೋಟಾರ್ ವಾಹನ ತೆರಿಗೆಯನ್ನು ವಿರೋಧಿಸಿ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಎತ್ತಿನ ಬಂಡಿಯ ಮೇಲೆ ಬೈಕ್ ಇಟ್ಟು ನಗರದಲ್ಲಿಂದು ವಿನೂತನ ಪ್ರತಿಭಟನೆ ನಡೆಸಿ ಕೇಂದ್ರ ಸರ್ಕಾರದ ಧೋರಣೆಯನ್ನು ವಿರೋಧಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಮೋಟಾರ್ ವಾಹನ ತೆರಿಗೆಯು ಜನರಿಗೆ ಯಮರೂಪಿಯಾಗಿದ್ದು, ಅವೈಜ್ಞಾನಿಕದಂತಹ ತೆರಿಗೆ ಹೇರಿಕೆಯಿಂದ ಜನ ತತ್ತರಿಸಿ ಹೋಗಿದ್ದಾರೆ.ಒಂದಕ್ಕೆ 10ರಷ್ಟು ತೆರಿಗೆ ವಿಧಿಸಿ ಜನರನ್ನು ಭಯಭೀತರನ್ನಾಗಿ ಮಾಡಲಾಗಿದೆ ಎಂದು ಆರೋಪಿಸಿದರು.

ಈ ತೆರಿಗೆ ನೀತಿಯು ಸರ್ವಾಧಿಕಾರ ಮನೋಭಾವದ್ದಾಗಿದೆ. ಜಾಸ್ತಿ ತೆರಿಗೆ ಕಟ್ಟದಿದ್ದರೆ ಜೈಲುವಾಸ, ಚಾಲನಾಪರವಾನಿಗಿ ಇಲ್ಲದಿದ್ದರೆ 5ಸಾವಿರ, ಮೂರು ತಿಂಗಳು ಜೈಲು, ಹೆಲ್ಮೆಟ್ ಇಲ್ಲದಿದ್ದರೆ 1ಸಾವಿರ ದಂಡ, ತುರ್ತುವಾಹನ ತಡೆದರೆ 10ಸಾವಿರ ದಂಡ ಮತ್ತು 10ತಿಂಗಳು ಜೈಲು, ಟ್ರಾಫಿಕ್ ಸಿಗ್ನಲ್ ಚಂಪ್ ಮಾಡಿದರೆ 5ಸಾವಿರ ದಂಡ ಈ ರೀತಿಯಲ್ಲಿ ಸಂಚಾರ ಪೊಲೀಸರಿಗೆ ದಂಡವಿಧಿಸುವ ಅಧಿಕಾರ ಕೊಡಲಾಗಿದೆ. ಕೇಂದ್ರ ಸರ್ಕಾರದ ಈ ನೀತಿಯು ಅತ್ಯಂತ ಕೆಟ್ಟ ನೀತಿಯಾಗಿದ್ದು, ಕೂಡಲೇ ತನ್ನ ನೀತಿಯನ್ನು ವಾಪಸ್ ಪಡೆಯಬೇಕೆಂದು ವಾಟಾಳ್ ಆಗ್ರಹಿಸಿದರು.

ಈಗಾಗಲೇ ಪಶ್ಚಿಮಬಂಗಾಳ ಸೇರಿದಂತೆ ಹಲವು ರಾಜ್ಯಗಳಲ್ಲಿ ಈ ದಂಡದ ನೀತಿಯನ್ನು ನೇರವಾಗಿ ತಳ್ಳಿ ಹಾಕಿದ್ದಾರೆ.ಕರ್ನಾಟಕದಲ್ಲೂ ಇದನ್ನು ಜಾರಿಗೊಳಿಸಬಾರದೆಂದು ಅವರು ಒತ್ತಾಯಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ