ವ್ಯಕ್ತಿಯಿಂದ ಶಾಲೆಯ ಮಕ್ಕಳ ಗುಂಪಿನ ಮೇಲೆ ದಾಳಿ-ದಾಳಿಯಲ್ಲಿ 8 ಮಕ್ಕಳ ಹತ್ಯೆ-ಬೆಚ್ಚಿ ಬಿದ್ದ ಶಿಕ್ಷಕ ಸಮುದಾಯ

ಬೀಜಿಂಗ್, ಸೆ.3-ಶಾಲಾ ಮಕ್ಕಳನ್ನು ಗುರಿಯಾಗಿಟ್ಟುಕೊಂಡು ಹಂತಕರು ನಡೆಸುತ್ತಿರುವ ಚಾಕು ದಾಳಿಯಿಂದ ಚೀನಾ ಮತ್ತೊಮ್ಮೆ ಬೆಚ್ಚಿ ಬಿದ್ದಿದೆ.

ಜೈಲಿನಿಂದ ಬಿಡುಗಡೆಯಾಗಿದ್ದ ವ್ಯಕ್ತಿಯೊಬ್ಬ ಚಾಕುವಿನಿಂದ ಪ್ರಾಥಮಿಕ ಶಾಲೆಯ ಮಕ್ಕಳ ಗುಂಪಿನ ಮೇಲೆ ದಾಳಿ ನಡೆಸಿ 8 ಚಿಣ್ಣರನ್ನು ಕೊಂದಿರುವ ಭೀಕರ ಘಟನೆ ಚೀನಾದ ಹೆಬ್ಯು ಪ್ರಾಂತ್ಯದಲ್ಲಿ ನಡೆದಿದೆ.

ಎಂಷಿ ಕೌಂಟಿಯಾ ಬಯೋಂಗ್‍ಪಿಂಗ್ ಪಟ್ಟಣದ ಚಯಾಂಗ್ ಪಾಂಗ್ ಪ್ರೈಮರಿ ಶಾಲೆಯ ಆವರಣದಲ್ಲಿ ನಡೆದ ಈ ಘಟನೆಯಿಂದ ಪೋಷಕರು, ಮಕ್ಕಳು ಮತ್ತು ಶಿಕ್ಷಕ ಸಮುದಾಯ ಬೆಚ್ಚಿ ಬಿದ್ದಿದೆ.

ಈ ಸಂಬಂಧ ಸ್ಥಳೀಯ ನಿವಾಸಿ 41 ವರ್ಷದ ವ್ಯಕ್ತಿಯನ್ನು ಪೊಲೀಸರು ತಕ್ಷಣ ಬಂಧಿಸಿದ್ದಾರೆ. 8 ವರ್ಷಗಳ ಹಿಂದೆ ಈತ ತನ್ನ ಪ್ರೇಯಸಿಯ ಕಣ್ಣುಗಳನ್ನು ಕಿತ್ತು ಜೈಲು ಶಿಕ್ಷೆಗೆ ಗುರಿಯಾಗಿದ್ದ ಕಳೆದ ವಾರವಷ್ಟೇ ಈತ ಕಾರಾಗೃಹದಿಂದ ಬಿಡುಗಡೆಯಾಗಿದ್ದ.

ಕೆಲವು ತಿಂಗಳ ಹಿಂದಷ್ಟೇ ಚೀನಾದ ಹುನಯ್ ಪ್ರಾಂತ್ಯದಲ್ಲಿ ದುಷ್ಕರ್ಮಿಯೊಬ್ಬ ಚಾಕುವಿನಿಂದ ದಾಳಿ ನಡೆಸಿ ನಾಲ್ವರು ಶಾಲಾ ಮಕ್ಕಳನ್ನು ನಿರ್ದಯವಾಗಿ ಕೊಂದಿದ್ದ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ