ನವದೆಹಲಿ: ಭಾರತೀಯ ವಾಯುಪಡೆ ಅಮೆರಿಕ ನಿರ್ಮಿತ 8 ಅಪಾಚೆ ಎಎಚ್-64ಇ ಯುದ್ಧಹೆಲಿಕಾಪ್ಟರ್ಗಳನ್ನು ತನ್ನ ಸೇವೆಗೆ ಸೇರ್ಪಡೆಗೊಳಿಸಿಕೊಂಡಿತು.
ಪಠಾನ್ಕೋಟ್ನಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ವಾಯುಪಡೆ ಮುಖ್ಯಸ್ಥ ಏರ್ಚೀಫ್ ಮಾರ್ಷಲ್ ಬಿ.ಎಸ್. ಧನೋವಾ ಹೆಲಿಕಾಪ್ಟರ್ಗಳನ್ನು ಬರಮಾಡಿಕೊಂಡರು.
ಸಂಪ್ರದಾಯಬದ್ಧವಾಗಿ 8 ಯುದ್ಧಹೆಲಿಕಾಪ್ಟರ್ಗಳನ್ನು ವಾಯುಪಡೆ ಸೇವೆಗೆ ಸೇರ್ಪಡೆಗೊಳಿಸಿಕೊಳ್ಳಲಾಗಿದೆ. ಒಟ್ಟು 22 ಅಪಾಚೆ ಯುದ್ಧಹೆಲಿಕಾಪ್ಟರ್ಗಳನ್ನು ಖರೀದಿಸಲಾಗುತ್ತಿದೆ. ಇನ್ನುಳಿದ ಹೆಲಿಕಾಪ್ಟರ್ಗಳು ಕಂತಿನಲ್ಲಿ ಬರಲಿದ್ದು, ಹಂತಹಂತವಾಗಿ ಅವನ್ನು ಸೇವೆಗೆ ಸೇರ್ಪಡೆಗೊಳಿಸಿಕೊಳ್ಳಲಾಗುವುದು. ವಾಯುಪಡೆ ಹಿಂದೆಯೂ ಯುದ್ಧಹೆಲಿಕಾಪ್ಟರ್ಗಳನ್ನು ಹೊಂದಿತ್ತು. ಆದರೆ, ಅಪಾಚೆ ಯುದ್ಧಹೆಲಿಕಾಪ್ಟರ್ಗಳು ಹೆಚ್ಚಿನ ನಿಖರತೆಯೊಂದಿಗೆ ದಾಳಿ ಮಾಡುವ ಸಾಮರ್ಥ್ಯ ಹೊಂದಿವೆ ಎಂದು ವಾಯಪಡೆಯ ವಕ್ತಾರ ಅನುಪಮ್ ಬ್ಯಾನರ್ಜಿ ತಿಳಿಸಿದರು.
ಎಎಚ್-64ಇ ಯುದ್ಧಹೆಲಿಕಾಪ್ಟರ್ಗಳು ವಿಶ್ವದಲ್ಲಿ ಸದ್ಯ ಲಭ್ಯ ಇರುವ ಅತ್ಯಾಧುನಿಕ ಯುದ್ಧಹೆಲಿಕಾಪ್ಟರ್ಗಳಾಗಿವೆ. ಇವನ್ನು ಅಮೆರಿಕ ತನ್ನ ವಾಯುಸೇನಾಪಡೆಯ ಸೇವೆಗೆ ಬಳಸುತ್ತಿದೆ. ಇಂಥ 22 ಯುದ್ಧಹೆಲಿಕಾಪ್ಟರ್ಗಳನ್ನು ಭಾರತ ಅಮೆರಿಕದಿಂದ ಖರೀದಿಸುತ್ತಿದೆ. ಜು.27ರಂದು ಮೊದಲ ಕಂತಿನಲ್ಲಿ ಬಂದಿದ್ದ 4 ಅಪಾಚೆ ಯುದ್ಧಹೆಲಿಕಾಪ್ಟರ್ಗಳನ್ನು ಭಾರತೀಯ ವಾಯುಪಡೆಯ ಸೇವೆಗೆ ಸೇರ್ಪಡೆಗೊಳಿಸಿಕೊಳ್ಳಲಾಗಿತ್ತು.