ಬೆಂಗಳೂರು, ಸೆ.1-ನಗರ ಸೇರಿದಂತೆ ಎಲ್ಲೆಡೆ ಗೌರಿ-ಗಣೇಶ ಹಬ್ಬದ ಸಿದ್ಧತೆ ಭರ್ಜರಿಯಾಗಿ ನಡೆದಿದೆ. ಪ್ರಮುಖ ರಸ್ತೆಗಳಲ್ಲಿ, ಮೈದಾನಗಳಲ್ಲಿ ಗೌರಿ-ಗಣೇಶ ಮೂರ್ತಿಗಳನ್ನು ಖರೀದಿಸುವಲ್ಲಿ ಸಾರ್ವಜನಿಕರು ಬ್ಯುಸಿಯಾಗಿರುವುದು ಕಂಡು ಬಂದಿತು.
ಈ ಬಾರಿ ಪಿಒಪಿ ಗೌರಿ-ಗಣೇಶ ಮೂರ್ತಿಗಳನ್ನು ನಿಷೇಧಿಸಿರುವುದರಿಂದ ಮಣ್ಣಿನ ಮೂರ್ತಿಗಳು ಹೆಚ್ಚಾಗಿ ಕಾಣುತ್ತಿದ್ದರೂ ಅಲ್ಲಲ್ಲಿ ಬಣ್ಣ ಗಣೇಶ ಮೂರ್ತಿಗಳನ್ನು ಮಾರಾಟಕ್ಕೆ ಇಡಲಾಗಿದೆ.
ಕೆಲವೆಡೆ ಸಾರ್ವಜನಿಕರೇ ಖುದ್ದಾಗಿ ತಮಗೆ ಬಣ್ಣದ ಮೂರ್ತಿಗಳೇ ಬೇಕೆಂದು ಬೇಡಿಕೆ ಇಟ್ಟಿದ್ದರಿಂದ ಅನಿವಾರ್ಯವಾಗಿ ಸ್ವಲ್ಪಮಟ್ಟಿಗೆ ಪಿಒಪಿ ಗೌರಿ-ಗಣೇಶ ಮೂರ್ತಿಗಳನ್ನು ಮಾರಾಟಕ್ಕೆ ಇಟ್ಟಿದ್ದೇವೆ ಎಂದು ಹೆಸರು ಹೇಳಲು ಇಚ್ಛಿಸಿದ ವ್ಯಾಪಾರಗಾರರು ಹೇಳಿದ್ದಾರೆ.
ಏನೆಯಾಗಲಿ ಕಳೆದ ವರ್ಷಕ್ಕಿಂತ ಈ ಬಾರಿ ಗಣನೀಯವಾಗಿ ಪಿಒಪಿ ಗೌರಿ-ಗಣೇಶಗಳು ಕಡಿಮೆಯಾಗಿರುವುದಂತೂ ನಿಜ.
ರಸ್ತೆ ಬದಿಗಳಲ್ಲಿ ಬಾಳೆಕಂದು, ಮಾವಿನಸೊಪ್ಪು, ಹೂ-ಹಣ್ಣು, ಬಾಗಿನದ ಮೊರ ಮತ್ತಿತರ ವಸ್ತುಗಳ ಖರೀದಿ ಭರಾಟೆ ನಡೆದಿದೆ.
ಪ್ರವಾಹದಿಂದಾಗಿ ಸ್ವಲ್ಪಮಟ್ಟಿಗೆ ಬೆಲೆ ಏರಿಕೆಯಾಗಿದ್ದರು, ವರಮಹಾಲಕ್ಷ್ಮಿ ಹಬ್ಬದ ಸಮಯದಲ್ಲಿದಷ್ಟೇ ಈಗಲೂ ದರ ಇದೆ.
ಸೇವಂತಿಗೆ ಮಾರು 100-200 ರೂ.
ಬಿಡಿಗುಲಾಬಿ 8-12ರೂ.
ಗುಲಾಬಿ ಕೆಜಿ 160-180ರೂ.
ಮಲ್ಲಿಗೆ ಕೆಜಿ 600-800 ರೂ.
ಕನಕಾಂಬರ 800-1000 ರೂ.
ಸುಗಂಧ ರಾಜ 120-200 ರೂ.
ಕಾಕಡ ಹೂ 400-500 ರೂ.
ಗರಿಕೆಗೆ ಕಟ್ಟು 10 ರಿಂದ 20 ರೂ., ಎಕ್ಕದ ಹಾರ 30 ರಿಂದ 50ರೂ., ಬಾಳೆಕಂದು ಜೋಡಿಗೆ 30 ರಿಂದ 70ರೂ.ನಂತೆ ಮಾರಾಟವಾಗುತ್ತಿದೆ.
ಹಣ್ಣು ಕೆಜಿ
ಸೇಬು 110-150ರೂ.
ಏಲ್ಲಕ್ಕಿ ಬಾಳೆ 100-120ರೂ.
ಪಚ್ಚಬಾಳೆ 30-40 ರೂ.
ಮೂಸಂಬಿ 30-100ರೂ.
ಸೀಬೆ 100-130 ರೂ.
ಸಪೆÇೀಟಾ 100-130ರೂ.
ಸೀತಾಫಲ 100-120ರೂ.
ತರಕಾರಿ ಕೆಜಿಗೆ
ಬೀನ್ಸ್ 50- 70ರೂ.
ಸೌತೆ 40ರೂ.
ಕ್ಯಾರೆಟ್ 60-80ರೂ.
ಕ್ಯಾಪ್ಸಿಕಮ್ 80ರೂ.
ಈರುಳ್ಳಿ 40-50 ರೂ.
ಬೆಲೆ ಏರಿಕೆಯಾಗಲಿ ಬಿಡಲಿ ಸಂಪ್ರದಾಯದ ಹಬ್ಬಗಳನ್ನು ಬಿಡಲಿಕ್ಕಾಗುವುದಿಲ್ಲ, ಸಂಭ್ರಮದಿಂದಲೇ ಗೌರಿ-ಗಣೇಶ ಹಬ್ಬವನ್ನು ಆಚರಿಸುತ್ತೇವೆ ಎಂದು ಬಹಳಷ್ಟು ಮಂದಿ ತಮ್ಮ ಅನಿಸಿಕೆ ಹಂಚಿಕೆಕೊಂಡಿದ್ದಾರೆ.
ಬೆಂಗಳೂರಿನಲ್ಲಿ ದರ ಮೇಲ್ಕಂಡಂತೆ ಇದ್ದರೆ ಜಿಲ್ಲೆ ಹಾಗೂ ತಾಲೂಕು ಸ್ವಲ್ಪಮಟ್ಟದಲ್ಲಿ ದರ ಹೆಚ್ಚಾಗಿಯೇ ಇದೆ.