ಚಂದ್ರಯಾನ-2 ಅಭಿಯಾನಕ್ಕೆ ಇಂದು ರಾತ್ರಿ ಮತ್ತು ನಾಳೆ ಮಹತ್ವದ ದಿನ

ನವದೆಹಲಿ/ಬೆಂಗಳೂರು, ಸೆ.1- ಭೂಮಿಯ ಸ್ವಾಭಾವಿಕ ಉಪಗ್ರಹ ಚಂದ್ರನ ಕುತೂಹಲಕಾರಿ ರಹಸ್ಯಗಳನ್ನು ಪತ್ತೆ ಮಾಡುವ ಗುರಿಯೊಂದಿಗೆ ಯಶಸ್ವಿಯ ಹಂತಗಳನ್ನು ದಾಟಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ಯ ಮಹತ್ವಾಕಾಂಕ್ಷಿ ಚಂದ್ರಯಾನ-2 ಅಭಿಯಾನಕ್ಕೆ ಇಂದು ರಾತ್ರಿ ಮತ್ತು ನಾಳೆ ಮಹತ್ವದ ದಿನವಾಗಲಿದೆ.

ಇಂದು ಸಂಜೆ 4ರಿಂದ 7ರ ನಡುವಿನ ಅವಧಿಯಲ್ಲಿ ಚಂದ್ರನೌಕೆ-2 ಶಶಾಂಕನ ಅಂತಿಮ ಕಕ್ಷೆಗೆ ಇಳಿಯಲಿದೆ. ಇದರೊಂದಿಗೆ ಚಂದ್ರನಿಗೆ ತೀರಾ ಸನಿಹದಲ್ಲಿ ಅಂದರೆ 30ರಿಂದ 100 ಕಿ.ಮೀ. ಅಂತರದಲ್ಲಿ ನೌಕೆ ಪ್ರದಕ್ಷಿಣೆ ಹಾಕಲಿದೆ.

ಇದಾದ ಬಳಿಕ ನಾಳೆ ಮತ್ತೊಂದು ಮಹತ್ವದ ಕಾರ್ಯಾಚರಣೆಗೆ ಇಸ್ರೋ ಸಜ್ಜಾಗಿದೆ.

ಪ್ರಜ್ಞಾನ್ ರೋಬರ್‍ಅನ್ನು ಹೊಂದಿರುವ ವಿಕ್ರಂ, ಲ್ಯಾಂಡರ್ ಹಾಗೂ ಚಂದ್ರನ ಕಕ್ಷೆಯಲ್ಲೇ ಸುತ್ತಲಿರುವ ಆರ್ಬಿಟರ್ ಪರಸ್ಪರ ಪ್ರತ್ಯೇಕಗೊಂಡು ನಿಗದಿತ ಕಾರ್ಯಾಚರಣೆಯಲ್ಲಿ ಪಾಲ್ಗೊಳ್ಳಲಿವೆ.

ಇವೆರಡು ಮಹತ್ವದ ಘಟ್ಟಕಗಳು ಯಶಸ್ವಿಯಾದರೆ ಸೆ.7ಕ್ಕೆ ಭಾರತ ಚಂದಿರನ ಅಂಗಳದಲ್ಲಿ ಹೊಸ ಇತಿಹಾಸ ನಿರ್ಮಿಸಲಿದೆ. ಅಂದು ಇಸ್ರೋ ಅತ್ಯಂತ ಸಂಕೀರ್ಣ ಮತ್ತು ಜಟಿಲವಾದ ಕಾರ್ಯಾಚರಣೆ ನಡೆಸಲಿದೆ.

ಲ್ಯಾಂಡರ್‍ಅನ್ನು ಇದುವರೆಗೂ ಯಾವ ದೇಶಗಳು ತಲುಪಲು ಸಾಧ್ಯವಾಗದೇ ಇರುವ ಉತ್ತರ ಧೃವದಲ್ಲಿ (ನಾರ್ತ್ ಪೋಲ್) ಅತ್ಯಂತ ನಿಖರವಾಗಿ ಇಳಿಸಲಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ