ನೂತನ ಆಯುಕ್ತರಆಗಮನ ಹಿನ್ನಲೆ-ಚುರುಕುಗೊಂಡ ಸ್ವಚ್ಛತಾ ಆಂದೋಲನಾ

ಬೆಂಗಳೂರು,ಆ.31-ಬಿಬಿಎಂಪಿಗೆ ನೂತನ ಆಯುಕ್ತರು ಆಗಮನವಾಗುತ್ತಿದ್ದಂತೆ ಸ್ವಚ್ಛತಾ ಆಂದೋಲನ ಚುರುಕುಗೊಂಡಿದೆ. ನೂತನ ಆಯುಕ್ತರಾದ ಅನಿಲ್‍ಕುಮಾರ್ ಅವರ ಸೂಚನೆಯಂತೆ ಬೆಳಗ್ಗೆಯಿಂದ ಮಧ್ಯಾಹ್ನದ ವರೆಗೆ ಸ್ವಚ್ಛತಾ ಆಂದೋಲನ ಹಮ್ಮಿಕೊಳ್ಳಲಾಗಿದೆ.

ಪೂರ್ವವಲಯದ ಎಚ್‍ಪಿಆರ್‍ಲೇಔಟ್ ವಾರ್ಡ್ 24, ಬಸವನಗುಡಿ ವಾರ್ಡ್ 27, ಹೊಯಳ್ಸ ವಾರ್ಡ್ 80, ಪಶ್ಚಿಮ ವಲಯದ ಗಾಂಧಿನಗರ ವಾರ್ಡ್ 95, ಮಲ್ಲೇಶ್ವರ ವಾರ್ಡ್ 64, ನಾಗಪುರ ವಾರ್ಡ್ 67, ನಂದಿನಿಲೇಔಟ್ ವಾರ್ಡ್ 43, ಗೋವಿಂದರಾಜನಗರ, ಚಾಮರಾಜಪೇಟೆ ವಾರ್ಡ್‍ಗಳಲ್ಲಿ ಸ್ವಚ್ಚತಾ ಕಾರ್ಯಕ್ರಮ ನಡೆಯಿತು.

ಯಲಹಂಕ ವಲಯದ ಕೆಂಪೇಗೌಡ ನಗರ, ಜಕ್ಕೂರು ವಾರ್ಡ್, ದಾಸರಹಳ್ಳಿ ವಲಯದ ಚೊಕ್ಕಸಂದ್ರ, ರಾಜರಾಜೇಶ್ವರಿನಗರದ ಜ್ಞಾನಭಾರತಿ ವಾರ್ಡ್, ಮಹದೇವಪುರದಲ್ಲಿ ಕೆಆರ್‍ಪುರ, ವರ್ತುರು ವಾರ್ಡ್, ಅರಕೆರೆ ವಾರ್ಡ್‍ನಲ್ಲಿ ಸ್ವಚ್ಛತಾ ಆಂದೋಲನ ಕೈಗೊಳ್ಳಲಾಗಿತ್ತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ