ಬೆಂಗಳೂರು,ಆ.27- ಬಿ.ಎಸ್.ಯಡಿಯೂರಪ್ಪ ಅವರ ರಾಜಕೀಯ ಎದುರಾಳಿಯಾದ ನನಗೂ ಸಹ ಅವರು ಅನುಭವಿಸುತ್ತಿರುವ ಪರಿಸ್ಥಿತಿಯಿಂದಾಗಿ ಅನುಕಂಪ ಮೂಡುವಂತಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಟ್ವೀಟರ್ನಲ್ಲಿ ಈ ರೀತಿ ವ್ಯಂಗ್ಯವಾಡಿರುವ ಸಿದ್ದರಾಮಯ್ಯ ಮುಖ್ಯಮಂತ್ರಿ ಯಡಿಯೂರಪ್ಪ ಅನುಭವಿಸುತ್ತಿರುವ ಅವಮಾನ, ಅನ್ಯಾಯ, ಅಸಂತೋಷವನ್ನು ನೋಡುತ್ತಿದ್ದರೆ ಅನುಕಂಪ ಬರುತ್ತಿದೆ. ರಾಜಕೀಯ ಎದುರಾಗಳಿಯಾದ ನನ್ನಲ್ಲೂ ಅನುಕಂಪ ಮೂಡುವಂತಾಗಿದೆ ಎಂದಿದ್ದಾರೆ.
ನೀವು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲು ಮೂರು ದಿನ ನಂತರ ಸಂಪುಟ ರಚನೆಗೆ 26ದಿನ ಖಾತೆ ಹಂಚಿಕೆಗೆ ಆರು ದಿನ ತೆಗೆದುಕೊಂಡಿರಿ.ಈಗ ಭಿನ್ನಮತ ಶಮನಕ್ಕೆ ಇನ್ನೆಷ್ಟು ದಿನಬೇಕು?ಈ ಎಲ್ಲದರ ನಡುವೆ ನಿಮ್ಮ ಸರ್ಕಾರ ಟೇಕಾಫ್ ಆಗುವುದು ಯಾವಾಗ ಎಂದು ಪ್ರಶ್ನಿಸಿದ್ದಾರೆ.