ಅರುಣ್ ಜೇಟ್ಲಿಯವರ ನಿವಾಸಕ್ಕೆ ಭೇಟಿ ನೀಡಿ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದ ಪ್ರಧಾನಿ

ನವದೆಹಲಿ, ಆ.27- ತೀವ್ರ ಅನಾರೋಗ್ಯದಿಂದ ನಿಧನರಾದ ಕೇಂದ್ರದ ಮಾಜಿ ಸಚಿವ ಮತ್ತು ಬಿಜೆಪಿ ಹಿರಿಯ ನಾಯಕ ಅರುಣ್ ಜೇಟ್ಲಿ ಅವರ ದೆಹಲಿಯ ನಿವಾಸಕ್ಕೆ ಇಂದು ಪ್ರಧಾನಮಂತ್ರಿ ಭೇಟಿ ನೀಡಿ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು.

ಫ್ರಾನ್ಸ್ , ಯುಎಇ ಮತ್ತು ಬಹರೈನ್ ಪ್ರವಾಸದಲ್ಲಿದ್ದ ಕಾರಣ ಮೋದಿ ಜೇಟ್ಲಿ ಅವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಲಿಲ್ಲ. ಆದಾಗ್ಯೂ ಅವರು ವಿದೇಶಿ ಪ್ರವಾಸದಲ್ಲೇ ಅವರು ಜೇಟ್ಲಿ ಅವರ ನಿಧನಕ್ಕೆ ಕಂಬನಿ ಮಿಡಿದು ಟ್ವೀಟ್ ಮಾಡಿ ಸಂತಾಪ ಸೂಚಿಸಿದ್ದರು.

ಫ್ರಾನ್ಸ್‍ನಲ್ಲಿ ನಿನ್ನೆ ಮುಕ್ತಾಯಗೊಂಡ ಜಿ7 ಶೃಂಗಸಭೆ ಬಳಿಕ ರಾತ್ರಿ ನವದೆಹಲಿಗೆ ಹಿಂದಿರುಗಿದ ಪ್ರಧಾನಿ ಇಂದು ಬೆಳಗ್ಗೆ ಜೇಟ್ಲಿ ಅವರ ನಿವಾಸಕ್ಕೆ ತೆರಳಿ ಅವರ ಪತ್ನಿ ಮತ್ತು ಕುಟುಂಬದ ಇತರ ಸದಸ್ಯರನ್ನು ಭೇಟಿ ಮಾಡಿ ಸಾಂತ್ವನ ಸೂಚಿಸಿದರು.

ಈ ಮಧ್ಯೆ ಜೇಟ್ಲಿ ಅವರ ಪತ್ನಿ ಅಥವಾ ಪುತ್ರನಿಗೆ ರಾಜ್ಯಸಭಾ ಸದಸ್ಯ ಸ್ಥಾನ ನೀಡುವ ಬಗ್ಗೆಯೂ ಬಿಜೆಪಿ ಚಿಂತನೆ ನಡೆಸುತ್ತಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ