ಬೆಂಗಳೂರು, ಆ.27- ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ತಮ್ಮ ಸಂಪುಟದ ಸಚಿವರಿಗೆ ಖಾತೆ ಹಂಚಿಕೆ ಮಾಡಿರುವುದನ್ನು ಟೀಕಿಸಿರುವ ಜೆಡಿಎಸ್ ನ್ಯಾಯ ಎಲ್ಲಿದೆ ಎಂದು ಪ್ರಶ್ನಿಸಿದೆ.
ರಾಜ್ಯಸರ್ಕಾರದ ಆಡಳಿತ ವೈಖರಿಯನ್ನು ಕಾವ್ಯಾತ್ಮಕವಾಗಿ ಟ್ವಿಟ್ಟರ್ನಲ್ಲಿ ಟೀಕಿಸಿರುವ ಜೆಡಿಎಸ್ ಹಾರುತಿಹ ನ್ಯಾಯಧ್ವಜವನ್ನು ಇಳಿಸಿ ಮುನ್ನಡೆಯಲು ಎಲ್ಲಿಹುದು ನ್ಯಾಯ ಮರ್ಯಾದಾ ಪುರುಷೋತ್ತಮನ ಆಳ್ವಿಕೆಯೊಳ್ ಎಂದು ಪ್ರಶ್ನೆ ಮಾಡಿದೆ.
ಮೀಸೆ ಮಣ್ಣಾಗಿಸಿಕೊಂಡು ಸೋತವರು ನಗುನಗುತ್ತ ಬೀಗುತ್ತಿದ್ದಾರೆ.ಎದೆಯೊಡ್ಡಿ ಜಯಿಸಿದವರು ತಲೆತಗ್ಗಿಸಿ ಕೈ ಚಾಚುತಿಹರು ಎಂದು ವ್ಯಂಗ್ಯವಾಡಿದೆ.