ಕುಲದೀಪ್ ಬಿಷ್ಣೋಯ್‍ರವರಿಗೆ ಸೇರಿದ್ದ 150 ಕೋಟಿ ರೂ. ಮೌಲ್ಯದ ಅನಧಿಕೃತ ಹೋಟೆಲ್ ಜಪ್ತಿ

 ನವದೆಹಲಿ,ಆ.27- ಬೇನಾಮಿ ಆಸ್ತಿ-ಪಾಸ್ತಿಗಳ ವಿರುದ್ಧ ಕಾರ್ಯಾಚರಣೆ ತೀವ್ರಗೊಳಿಸಿರುವ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಹರಿಯಾಣದ ಪ್ರಭಾವಿ ಕಾಂಗ್ರೆಸ್ ನಾಯಕ ಕುಲದೀಪ್ ಬಿಷ್ಣೋಯ್ ಅವರಿಗೆ ಸೇರಿದ್ದ 150 ಕೋಟಿ ರೂ. ಮೌಲ್ಯದ ಅನಧಿಕೃತ ಹೋಟೆಲ್‍ನ್ನು ಜಪ್ತಿ ಮಾಡಿದ್ದಾರೆ.

ದೆಹಲಿ ಸಮೀಪದ ಗುರಗಾಣನ ಪ್ರತಿಷ್ಠಿತ ಸ್ಥಳದ ಬಳಿಯಿದ್ದ ಬ್ರೈಟ್ ಸ್ಟಾರ್ ಹೋಟೆಲ್‍ನನ್ನು ಬೇನಾಮಿ ಆಸ್ತಿ ವಹಿವಾಟು ನಿರ್ಬಂಧ ಕಾಯಿದೆಯಡಿ ಜಪ್ತಿ ಮಾಡಲಾಗಿದೆ.

ಇದು ಕುಲದೀಪ್ ಮತ್ತು ಅವರ ಸಹೋದರಿನಿಗೆ ಸೇರಿದ್ದು, ಬೇನಾಮಿ ಹೆಸರಿನಲ್ಲಿ ಈ ತಾರಾ ಹೋಟೆಲ್‍ನ ವಹಿವಾಟು ನಡೆಸುತ್ತಿದ್ದರು ಎಂದು ಐಟಿ ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ಸಂಬಂಧ ದೆಹಲಿಯ ಆದಾಯ ತೆರಿಗೆ ಇಲಾಖೆಯ ವಿಶೇಷ ಘಟಕದ ಅಧಿಕಾರಿಗಳು ಹೋಟೆಲ್ ಜಪ್ತಿಗೆ ಆದೇಶದೊಂದಿಗೆ ಈ ಕ್ರಮ ಕೈಗೊಂಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ