ಬೆಂಗಳೂರು, ಆ.27- ಬಾಂದವ ಸಂಸ್ಥೆ ವತಿಯಿಂದ ಉಚಿತವಾಗಿ 5 ಸಾವಿರ ಪರಿಸರ ಸ್ನೇಹಿ ಜೇಡಿ ಮಣ್ಣಿನ ಗೌರಿ ಗಣೇಶ ಮೂರ್ತಿಗಳನ್ನು ಇದೆ 31 ರಂದು ಜಯನಗರದ ಕಾಂಪ್ಲೆಕ್ಸ್ ವಿಶ್ವೇಶ್ವರಯ್ಯ ಸಂಕೀರ್ಣದಲ್ಲಿ ವಿತರಣೆ ಮಾಡಲಾಗುವುದಾಗಿ ಸಂಸ್ಥೆಯ ಮುಖ್ಯಸ್ಥ ಎನ್.ನಾಗರಾಜ್ ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ವಿನಾಯಕ ಭಕ್ತರೆಲ್ಲ ಮನೆ ಮನೆಗಳಲ್ಲಿ ,ರಸ್ತೆ ಓಣಿಗಳಲ್ಲಿ ಗಣೇಶ ಮೂರ್ತಿಗಳನ್ನ ಕೂರಿಸಿ ಸಂಭ್ರಮಿಸಿ ನಂತರ ಹಬ್ಬದ ಬಳಿಕ ಗಣೇಶ ಮೂರ್ತಿಗಳನ್ನ ನಗರದ ಕೆರೆಗಳಿಗೆ ವಿಸರ್ಜನೆ ಮಾಡುತ್ತಾರೆ.
ಪಿಒಪಿ ಗಣೇಶ ಮೂರ್ತಿಗಳು ನೀರಿನಲ್ಲಿ ಕರಗದೆ ಮೂರ್ತಿಯ ಕೈ ಕಾಲು ಮುರಿದ ರೀತಿಯಲ್ಲಿ ಕಂಡುಬರುತ್ತಿದೆ.ಹೀಗಾಗಿ ಎಲ್ಲರೂ ಜೇಡಿ ಮಣ್ಣಿನಿಂದ ತಯಾರಿಸಿದ್ದ ಗಣೇಶ ಮೂರ್ತಿಗಳನ್ನು ಪೂಜಿಸಿ ಪರಿಸರ ಉಳಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ತಿಳಿಸಿದರು.
ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ ಮತ್ತು ಶಾಸಕಿ ಸೌಮ್ಯ ರೆಡ್ಡಿ ಅವರು ಗಣೇಶ ಮೂರ್ತಿಗಳನ್ನು ವಿತರಿಸಲಿದ್ದಾರೆ ಎಂದು ತಿಳಿಸಿದರು.
ಸಾರ್ವಜನಿಕರು ಉಚಿತ ಮಣ್ಣಿನ ಗಣೇಶ ವಿತರಣೆಗೆ 9740399888, 9663859999 ಸಂಪರ್ಕಿಸುವುದಾಗಿ ತಿಳಿಸಿದರು.