ಅಲಿಘಡ(ಉ.ಪ್ರ),ಆ.27- ಲಘು ವಿಮಾನವೊಂದು ಭೂಸ್ಪರ್ಶದ ವೇಳೆ ಹೈಟೆನ್ಷನ್ ವಿದ್ಯುತ್ ತಂತಿಗೆ ತಗುಲಿ ಕೆಳಗೆ ಬಿದ್ದು ಬೆಂಕಿ ಹೊತ್ತಿ ಘಟನೆ ಉತ್ತರಪ್ರದೇಶದ ಅಲಿಘಡನಲ್ಲಿಂದು ಬೆಳಗ್ಗೆ ಸಂಭವಿಸಿದೆ.
ಈ ದುರ್ಘಟನೆಯಲ್ಲಿ ಪೈಲೆಟ್ ಸೇರಿದಂತೆ ವಿಮಾನದಲ್ಲಿದ್ದ ಏಳು ಮಂದಿ ಆಶ್ಚರ್ಯಕರ ರೀತಿಯಲ್ಲಿ ಪಾರಾಗಿದ್ದಾರೆ.
ದೆಹಲಿಯಿಂದ ಬರುತ್ತಿದ್ದ ಲಘುವಿಮಾನ ಅಲಿಘಡನ ದಾನಿಪುರ ವಾಯುತರಬೇತಿ ಕೇಂದ್ರ ಏರ್ ಸ್ಟ್ರೀಪ್ನಲ್ಲಿ ಇಳಿಯುತ್ತಿತ್ತು. ಈ ಸಂದರ್ಭದಲ್ಲಿ ಹೈಟೆನ್ಷನ್ ವಿದ್ಯುತ್ ತಂತಿಗೆ ವಿಮಾನ ಸ್ಪರ್ಶಿಸಿ ಪೈಲೆಟ್ ನಿಯಂತ್ರಣ ತಪ್ಪಿ ವಿಮಾನ ರನ್ವೇನಲ್ಲಿ ಬಿತ್ತು.
ಕೆಳಗೆ ಬಿದ್ದ ವಿಮಾನಕ್ಕೆ ಬೆಂಕಿ ಹೊತ್ತಿಕೊಂಡಿತು. ಆದಾಗ್ಯ ಅದರಲ್ಲಿದ್ದ ಏಳು ಮಂದಿ ಆಶ್ಚರ್ಯಕರ ರೀತಿಯಲ್ಲಿ ಪಾರಾಗಿದ್ದಾರೆಂದು ಹೆಚ್ಚುವರಿ ಜಿಲ್ಲಾ ದಂಡಾಧಿಕಾರಿ (ಎಡಿಎಂ) ರಂಜಿತ್ಕುಮಾರ್ ತಿಳಿಸಿದ್ದಾರೆ.
ಬೆಂಕಿ ಹೊತ್ತಿಕೊಂಡ ವಿಮಾನಕ್ಕೆ ಭಾರೀ ಹಾನಿಯಾಗಿದೆ.