
ಮಹದೇವಪುರ, ಆ.26-ಪರಿಸರ ಕಾಪಾಡದಿದ್ದರೆ ನಮ್ಮನ್ನು ಪರಿಸರ ಕಾಪಾಡುವುದಿಲ್ಲ ಎಂದು ಶಾಸಕ ಅರವಿಂದ ಲಿಂಬಾವಳಿ ಇಂದಿಲ್ಲಿ ತಿಳಿಸಿದರು.
ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಹಾಗೂ ಕೃಷಿ ಇಲಾಖೆ ವತಿಯಿಂದ ಮಂಡೂರಿನಲ್ಲಿ ಹಮ್ಮಿಕೊಂಡಿದ್ದ ಸಮಗ್ರ ಕೃಷಿ ಅಭಿಯಾನ ಕಾರ್ಯಕ್ರಮ(ಇಲಾಖೆಗಳ ನಡಿಗೆ ರೈತರ ಮನೆ ಬಾಗಿಲಿಗೆ)ದಲ್ಲಿ ಮಾತನಾಡಿದ ಅವರು, ರೈತರು ಜಮೀನು ಮಾರಾಟ ಮಾಡಿ ನಗರೀಕರಣದತ್ತ ಹೋದರೆ ಉತ್ತಮ ಗಾಳಿ, ಕುಡಿಯುವ ನೀರು ಇದ್ಯಾವುದೂ ಸಿಗೋದಿಲ್ಲ ಎಲ್ಲವೂ ಕಲುಷಿತಗೊಂಡು ಪರಿಸರ ಮಾಲಿನ್ಯವುಂಟಾಗಿ ಆರೋಗ್ಯ ಹಾಳಾಗುತ್ತದೆ ಎಂದು ಹೇಳಿದರು.
ಪ್ರವಾಹಗಳನ್ನು ತಪ್ಪಿಸಲು ಸಸಿಗಳನ್ನು ನೆಟ್ಟು ಪೆÇೀಷಿಸಿ, ರೈತರ ಅಭಿವೃದ್ಧಿಗೆ ಶ್ರಮಿಸಿ ಎಂದರು.
ಎಲ್ಲಾ ಸರ್ಕಾರಗಳು ಸಾವಯವ ಕೃಷಿಗೆ ಹೆಚ್ಚು ಒತ್ತು ಕೊಡುತ್ತಿದ್ದೇವೆ, ಕೊಟ್ಟಿಗೆ ಗೊಬ್ಬರದಿಂದ ಬೆಳೆಗಳು ಚೆನ್ನಾಗಿ ಬರುತ್ತಿತ್ತು, ಆಧುನಿಕರಣ ಹೆಸರಿನಲ್ಲಿ ಹಲವು ದುಷ್ಪರಿಣಾಮಗಳನ್ನು ಎದುರಿಸುತ್ತಿದ್ದೇವೆ ಎಂದರು.
ದೇಶದ ಐದು ಮಹಾನಗರದಲ್ಲಿ ಬೆಂಗಳೂರು ಅತಿ ವೇಗವಾಗಿ ಬೆಳೆಯುತ್ತಿರುವ ನಗರ, ಒಂದೇ ರಸ್ತೆಯಲ್ಲಿ 200 ಕಂಪನಿಗಳು ನಮ್ಮ ಕ್ಷೇತ್ರದಲ್ಲೇ ಇದೆ, ಕೃಷಿ ಇಲಾಖೆ ನಮ್ಮಲ್ಲಿ ಇರಬೇಕು, ಪಶು ಆಸ್ಪತ್ರೆಗಳನ್ನು ರದ್ದು ಮಾಡಬೇಡಿ ಎಂದು ನಾನು ಸಹ ಮನವಿ ಮಾಡಿದ್ದೇನೆ ಎಂದು ತಿಳಿಸಿದರು.
ಕೃಷಿ ಚಟುವಟಿಗೆ ಬರುವ ಅಪ್ಲಿಕೇಶನ್ಗಳನ್ನು ಯಾವುದೂ ರಿಜೆಕ್ಟ್ ಮಾಡದೆ ಅವರಿಗೆ ಸಹಾಯ ಮಾಡುವ ಕೆಲಸ ಮಾಡಿ ಎಂದು ಹೇಳಿದರು.
ಜಿಪಂ ಸದಸ್ಯ ಕೆಂಪರಾಜು ಮಾತನಾಡಿ, ನಿಷೇಧಿತ ನೀಲಗಿರಿ ಜಾಗದಲ್ಲಿ ಬಂಗಾರ ಬೆಳೆಯುವ ಮಾಹಿತಿಯನ್ನು ಇಂದು ನೀಡುತ್ತಿದ್ದು, ರೈತರ ಇದರ ಸದುಪಯೋಗಪಡೆದುಕೊಳ್ಳಬೇಕು ಎಂದು ಹೇಳಿದರು.
ರೈತರನ್ನು ಅಲೆಸುವುದನ್ನು ಬಿಡಿ ಅವರ ಅಭಿವೃದ್ಧಿಗೆ ಅವಶ್ಯಕತೆ ಇರುವ ಯೋಜನೆಗಳನ್ನು ತಿಳಿಸಿ ಸಹಾಯ ಮಾಡಿ ಎಂದು ಅಧಿಕಾರಿಗಳಿಗೆ ತಿಳಿಸಿದರು.
ಒಂದು ಸಸಿಯಿಂದ ಇಡೀ ಜೀವನ ಸಾಗಿಸಬಹುದು ಇದನ್ನು ಅರ್ಥ ಮಾಡಿಕೊಂಡು ಜೀವನ ನಡೆಸಿ ಎಂದು ತಿಳಿಸಿದರು.
ಬಿತ್ತನೆ ಬೀಜ ಸೇರಿದಂತೆ ಬರಡು ಭೂಮಿಯಲ್ಲಿ ಬೆಳೆಯಬಹುದಾದ ಬೆಳೆಗಳ ಬಗ್ಗೆ ವಸ್ತುಪ್ರದರ್ಶನ ಮಾಡುತ್ತಿದ್ದು ಅಲ್ಲಿ ಮಾಹಿತಿ
ತಾಪಂ ಉಪಾಧ್ಯಕ್ಷೆ ಭಾಗ್ಯಮ್ಮ, ಸದಸ್ಯ ಆದೂರು ಮುನಿರಾಜು, ಮಂಡೂರು ಪಂಚಾಯಿತಿ ಅಧ್ಯಕ್ಷ ಜ್ಯೋತಿಪುರ ವೇಣು, ಸದಸ್ಯರಾದ ಜನಾರ್ಧನ್ಗೌಡ, ಬೊಮ್ಮೆನಹಳ್ಳಿ ಮುನಿರಾಜು, ಕೃಷಿ ಇಲಾಖೆ ಜಂಟಿ ಆಯುಕ್ತ ವಸಂತ್ಕುಮಾರ್, ತಾಲ್ಲೂಕು ಇಒ ಮಂಜುನಾಥ್, ಮಂಡೂರು ಶ್ರೀನಿವಾಸ್ಗೌಡ, ರೈತ ಸಂಘದ ಲಕ್ಷ್ಮಣ್ ಮತ್ತಿತರರಿದ್ದರು.