ಬಹುಕೋಟಿ ಐಎಂಎ ಹಗರಣದ ತನಿಖೆ ಹಿನ್ನಲೆ-ಮಾಜಿ ಸಿಎಂ, ಮಾಜಿ ನಗರ ಪೆÇಲೀಸರನ್ನು ಪ್ರಶ್ನಿಸುವ ಸಾಧ್ಯತೆ

ಬೆಂಗಳೂರು, ಆ.26- ಬಹುಕೋಟಿ ಐಎಂಎ ಹಗರಣದ ತನಿಖೆ ನಡೆಸಿರುವ ಕೇಂದ್ರೀಯ ತನಿಖಾ ದಳ ರಾಜ್ಯದ ಮಾಜಿ ಮುಖ್ಯಮಂತ್ರಿ, ಹಾಗೂ ಮಾಜಿ ಬೆಂಗಳೂರು ನಗರ ಪೆÇಲೀಸರನ್ನು ಪ್ರಶ್ನಿಸುವ ಸಾಧ್ಯತೆ ಇದೆ.

ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸಿದ ಐದು ದಿನಗಳ ನಂತರ, ಈ ಹಗರಣದ ಬಗ್ಗೆ ಇದುವರೆಗೆ ತನಿಖೆ ನಡೆಸುತ್ತಿದ್ದ ವಿಶೇಷ ತನಿಖಾ ತಂಡ (ಎಸ್‍ಐಟಿ) ಆರೋಪಿ ಮತ್ತು ಸಾಕ್ಷಿಗಳ ಹೇಳಿಕೆಗಳನ್ನು ಸಂಗ್ರಹಿಸುವಲ್ಲಿ ನಿರತವಾಗಿದೆ.ಇಡೀ ಪ್ರಕರಣದ ಸಂಬಂಧ 15-20,000 ಪುಟಗಳ ದಾಖಲೆ ಸಿದ್ದಪಡಿಸಲಾಗಿದೆ.ಸೆಪ್ಟೆಂಬರ್ 9 ರಂದು ಚಾರ್ಜ್‍ಶೀಟï ಸಲ್ಲಿಸುವ ನಿರೀಕ್ಷೆಯಿದೆ.

ಮಾಹಿತಿ ಆಧಾರದ ಮೇಲೆ ಹಗರಣದ ಕಿಂಗ್‍ಪಿನ್ ಮತ್ತು ಐಎಂಎ ನಿರ್ದೇಶಕ ಮೊಹಮ್ಮದ್ ಮನ್ಸೂರ್ ಖಾನ್ ಎಸ್‍ಐಟಿಗೆ ನೀಡಿದ ಹೇಳಿಕೆಯಲ್ಲಿ, 2018 ರ ಚುನಾವಣೆಗೆ ಮುನ್ನ ಮಾಜಿ ಸಿಎಂಗೆ ಹಣವನ್ನು ಕಳುಹಿಸಿದ್ದೇನೆ ಎಂದು ಹೇಳಿದ್ದಾರೆ. ಅಲ್ಲದೆ ಮಹಾನಗರದ ಮಾಜಿ ಪೆÇಲೀಸ್ ಆಯುಕ್ತರು. ಸಹ ಹಣ ಪಡೆದಿದ್ದಾರೆ ಎನ್ನಲಾಗಿದೆ.
ಮೂರು ಜನರ ಮೂಲಕ ಮಾಜಿ ಸಿಎಂಗೆ 5 ಕೋಟಿ ರೂ.ಕಳುಹಿಸಲಾಗಿದೆ ಎಂದು ಖಾನ್ ಹೇಳಿದ್ದಾರೆ.ಅವರು ಇತರ ರಾಜಕಾರಣಿಗಳು ಮತ್ತು ಅಧಿಕಾರಿಗಳನ್ನೂ ಹೆಸರಿಸಿದ್ದಾರೆ.

ಎಲ್ಲಾ ಹೇಳಿಕೆಗಳನ್ನು ಸಿಬಿಐಗೆ ಸಲ್ಲಿಸಲಾಗುವುದು.ಅವರ ಹೇಳಿಕೆಗಳನ್ನು ಸಂಗ್ರಹಿಸಿ ವರದಿ ತಯಾರಿಸುತ್ತಿದ್ದು ವರದಿಯು 20,000 ಪುಟಗಳವರೆಗೆ ಬರಬಹುದು ಎಂದು ಎಸ್‍ಐಟಿಯ ಹಿರಿಯ ಅಧಿಕಾರಿಯೊಬ್ಬರು ಹೇಳಿದರು. ಇನ್ನು ಖಾನ್ ಆರೋಪಿಯಾಗಿದ್ದು, ವಿಚಾರಣೆ ವೇಳೆ ಆತ ನೀಡಿದ್ದ ಹೇಳಿಕೆಗಳ ಸತ್ಯಾಸತ್ಯತೆಯನ್ನು ನಾವು ಪರಿಶೀಲಿಸಬೇಕಾಗಿದೆ ಎಂದು ವಿಚಾರಣಾಧಿಕಾರಿಯೊಬ್ಬರು ಹೇಳಿದರು.
ಇನ್ನು ಬಿಜೆಪಿಯ ಹಿರಿಯ ನಾಯಕರಿಗೆ ಸಹ ನಿಜಾಮುದ್ದೀನ್ ಮೂಲಕ ಹಣ ಪಾವತಿಸಿದ್ದೇನೆ ಎಂದು ಖಾನ್ ತಮ್ಮ ಹೇಳಿಕೆಯಲ್ಲಿ ಆರೋಪಿಸಿದ್ದಾರೆ. ಆದರೆ, ಎಸ್‍ಐಟಿ ನಿಜಾಮುದ್ದೀನ್‍ರನ್ನು ಪ್ರಶ್ನಿಸಿದಾಗ, ಅವರು ಅದನ್ನು ನಿರಾಕರಿಸಿದ್ದರು.ಇವುಗಳನ್ನು ಸಿಬಿಐ ಪರಿಶೀಲಿಸಬೇಕಾಗಿದೆ ಎಂದು ಎಸ್‍ಐಟಿ ಅಧಿಕಾರಿಗಳು ತಿಳಿಸಿದ್ದಾರೆ.

ಐಪಿಎಸ್ ಅಧಿಕಾರಿ ತನ್ನಿಂದ 25 ಕೋಟಿ ರೂ.ಬೇಡಿಕೆ ಇಟ್ಟಿದ್ದರಿಂದ ಬೆಂಗಳೂರಿನಿಂದ ಪರಾರಿಯಾಗಿದ್ದಾಗಿಮನ್ಸೂರ್ ಹೇಳಿದ್ದಾರೆ. ಅಧಿಕಾರಿಯೊಂದಿಗೆ ಯಾರು ಇದ್ದಾರೆ ಎಂದು ಕೇಳಿದಾಗ, ಮನ್ಸೂರ್ ಅವರು ಕೇವಲ ಇಬ್ಬರು ಮಾತ್ರ ಎಂದು ಹೇಳಿದ್ದರು..
ಆದರೆ ಅದನ್ನು ಖಾತರಿ ಪಡಿಸಲು ಯಾವ ಪುರಾವೆಗಳಿಲ್ಲ.ಅಲ್ಲದೆ ಹಲವಾರು ದೃಶ್ಯ ಮಾಧ್ಯಮಗಳಿಗೂ ಸಹ ಕೋಟಿ ಕೋಟಿ ರೂ.ಪಾವತಿಸಲಾಗಿದೆ ಎಂದು ಖಾನ್ ತನಿಖೆ ವೇಳೆ ಬಾಯಿ ಬಿಟ್ಟಿದ್ದಾನೆ.

ಸಧ್ಯ ಎಸ್‍ಐಟಿ ಈ ಪ್ರಕರಣದ ಹೆಚ್ಚಿನ ತನಿಖೆಯನ್ನು ನಿಲ್ಲಿಸಿದೆ. ಈವರೆಗೆ ನಡೆದ ತನಿಖೆಯ ಬಗ್ಗೆ ಕೇಂದ್ರ ಸಂಸ್ಥೆಗೆ ವಿವರವಾದ ವರದಿಯನ್ನು ನೀಡಬೇಕಾಗುತ್ತದೆ.ಮಹಜರ್‍ಗಳಿಂದ ಹಿಡಿದು ಹೇಳಿಕೆಗಳವರೆಗೆ ಎಲ್ಲವನ್ನೂ ದಾಖಲಿಸಬೇಕಾಗಿದೆ.ದಾಖಲೆಗಳನ್ನು ಆದಷ್ಟು ಬೇಗ ಅವರಿಗೆ ಸಲ್ಲಿಸುವಂತೆ ಕೇಳಿಕೊಳ್ಳಲಾಗಿದೆ ಎಂದು ಅಧಿಕಾರಿ ಹೇಳಿದ್ದಾರೆ.

ಈವರೆಗೆ ಎಸ್‍ಐಟಿಯಿಂದ ತನಿಖೆ ನಡೆಸಲಾಗಿದ್ದು, ಸೆಪ್ಟೆಂಬರ್ 9ಕ್ಕೆ ಅದನ್ನು ನ್ಯಾಯಾಲಯಕ್ಕೆ ಸಲ್ಲಿಸಲು ಕೊನೆಯ ದಿನವಾದ್ದರಿಂದ ಕೇಂದ್ರ ಸಂಸ್ಥೆ ಚಾರ್ಜ್‍ಶೀಟ್ ಸಲ್ಲಿಸುವುದಿಲ್ಲ. ಸಿಬಿಐ ಕೈಯಲ್ಲಿ ಕಡಿಮೆ ಸಮಯ ಇರುವುದರಿಂದ ಎಸ್‍ಐಟಿ ಚಾರ್ಜ್‍ಶೀಟ್ ಸಲ್ಲಿಸಬೇಕಾಗುತ್ತದೆ.ಇಡೀ ಕೇಸ್ ಫೈಲ್ ಕನ್ನಡದಲ್ಲಿದೆ ಮತ್ತು ಸಿಬಿಐ ಅದನ್ನು ಮಾಡಬೇಕಾದರೆ, ಅವರು ಅನುವಾದವನ್ನು ಮಾಡಬೇಕಾಗುತ್ತದೆ, ಅದು ಅವರಿಗೆ ಕಷ್ಟಕರವಾಗಿರುತ್ತದೆ ಎಂದು ಮತ್ತೊಬ್ಬ ಅಧಿಕಾರಿ ತಿಳಿಸಿದ್ದಾರೆ.
ಫೆÇೀನ್ ಕರೆಗಳನ್ನು ಟ್ರ್ಯಾಕ್ ಮಾಡುವುದು, ಕರೆ ದಾಖಲೆಗಳನ್ನು ಹಿಂಪಡೆಯುವುದು, ವಾಟ್ಸಾಪ್ ಸಂದೇಶಗಳು ಮತ್ತು ಕರೆಗಳನ್ನು ಪರಿಶೀಲಿಸುವುದು ಸೇರಿ ಅನೇಕ ಕಾರ್ಯಗಳಿದ್ದು ಇದು ನಮಗೆ ಕಠಿಣ ಕಾರ್ಯವಾಗಿದೆ. ಸಾಕಷ್ಟು ಕೆಲಸ ಮಾಡಲಾಗಿದೆ ಎಂದು ಅಧಿಕಾರಿ ಹೇಳಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ