ದೇಶದ ಪ್ರಗತಿಯ ವಿಷಯದಲ್ಲಿ ಎಲ್ಲಾ ಬ್ಯಾಂಕ್‍ಗಳು ಒಗ್ಗೂಡುವುದು ಅವಶ್ಯಕ

Varta Mitra News

ಬೆಂಗಳೂರು, ಆ.25- ಸರ್ವರಿಗೂ ಸೂರು, ಮಹಿಳಾ ಸಬಲೀಕರಣ, ಡಿಜಿಟಲ್ ವ್ಯವಹಾರ , ಕೃಷಿಕರ ಮತ್ತು ಶೈಕ್ಷಣಿಕ ಸಾಲ ಸೇರಿದಂತೆ ಸಮಾಜದ ಸರ್ವರ ಆರ್ಥಿಕ ಉದ್ಧಾರಕ್ಕಾಗಿ ಒತ್ತು ನೀಡುವ ನಿಟ್ಟಿನಲ್ಲಿ ಸಿಂಡಿಕೇಟ್ ಬ್ಯಾಂಕ್ ಪ್ರಮುಖ ಆದ್ಯತೆ ನೀಡುತ್ತಿದೆ ಎಂದು ಬ್ಯಾಂಕ್‍ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಮೃತ್ಯುಂಜಯ ಮಹಾ ಪಾತ್ರ ಹೇಳಿದರು.

ನಗರದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಕೃತ ಬ್ಯಾಂಕ್‍ಗಳ , ಅಧಿಕಾರಿಗಳ ಸಭೆಯಲ್ಲಿ ಚರ್ಚಿಸಿದ ಬಳಿಕ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ದೇಶದ ಪ್ರಗತಿಯ ವಿಷಯ ಬಂದಾಗ ಎಲ್ಲಾ ಬ್ಯಾಂಕ್‍ಗಳು ಒಗ್ಗೂಡುವುದು ಅವಶ್ಯಕವಾಗಿದೆ.ಆರ್ಥಿಕ ವ್ಯವಸ್ಥೆ ಉತ್ತಮ ಪಡಿಸಲು ಸಾರ್ವಜನಿಕ ವಲಯದ ಪಾತ್ರ ಪ್ರಮುಖವಾಗಿದೆ.ಪ್ರಥಮ ಹಂತವಾಗಿ ನಾವೀಗ ಹಲವಾರು ವಿಷಯಗಳ ಬಗ್ಗೆ ಚರ್ಚಿಸಿದ್ದೇವೆ. ಎರಡನೆ ಹಂತದಲ್ಲಿ ಪ್ರಮುಖ ಚಿಂತನೆಗಳು ಹಾಗೂ ನೀತಿಗಳನ್ನು ಅನುಷ್ಠಾನಗೊಳಿಸುವ ಕುರಿತಂತೆ ಕಾರ್ಯಕ್ರಮವನ್ನು ರೂಪಿಸಲಾಗುವುದು ಎಂದು ಅವರು ಹೇಳಿದರು.

ಸಿಂಡಿಕೇಟ್ ಬ್ಯಾಂಕ್ ಈಗಾಗಲೇ ಮನೆ ಸಾಲ, ವಾಹನ ಸಾಲ ಸೇರಿದಂತೆ ಕೈಗಾರಿಕೆಗಳ ಉತ್ತೇಜನಕ್ಕೆ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.ಇದರಿಂದ ಸಾಕಷ್ಟು ಅಭಿವೃದ್ಧಿಯೂ ನಮ್ಮ ಗ್ರಾಹಕರಿಗೆ ಸಿಗುತ್ತಿದೆ.ಮುಂದಿನ ದಿನಗಳಲ್ಲಿ ಸಾಕಷ್ಟು ತಂತ್ರಜ್ಞಾನದ ನೆರವಿನಿಂದ ಇನ್ನು ಉತ್ತಮ ಸೇವೆ ನೀಡಲು ನಾವು ಕಟಿ ಬದ್ಧವಾಗಿದ್ದೇವೆ ಎಂದು ಅವರು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ